Tuesday, May 13, 2014

ಟ್ಯಾಗೋರರನ್ನು ಕನ್ನಡಕ್ಕೆ ತಂದ ಅಹೋಬಲ ಶಂಕರ = ಭಾಗ ೨






ಟ್ಯಾಗೋರರನ್ನು ಕನ್ನಡಕ್ಕೆ ತಂದ ಅಹೋಬಲ ಶಂಕರ = ಭಾಗ ೨

ನನ್ನ ಅದೃಷ್ಟ

೧೯೪೫ರಲ್ಲಿ ಬೊಂಬಾಯಿಗೆ ಬಂದಾಗ ಇಂಡಿಯನ್ ಎಕ್ಸ್ಪ್ರೆಸ್  ಸೇರಿಕೊಂಡೆ. ಸ್ವಲ್ಪ ವರ್ಷಗಳ ನಂತರ ಅಲ್ಲಿ ಒಂದು ಸ್ಟ್ರೈಕ್ ಆಯಿತು. ಆಗ ನನ್ನ ನನ್ನ ಸಹಾನುಭೂತಿಯೆಲ್ಲ ಕಾರ್ಮಿಕರ ಪರವಾಗಿತ್ತು. ಅದು ಮ್ಯಾನೇಜ್ಮೆಂಟ್ ಗೆ ಇಷ್ಟವಾಗಲಿಲ್ಲ.ಇಷ್ಟವಾಗಲಿಲ್ಲ. ರಾಜೀನಾಮೆ ನೀಡಿದೆ. ಮತ್ತೆ ಫ಼್ರೀ ಪ್ರೆಸ್ ಜರ್ನಲ್ ಸೇರಿಕೊಂಡೆ. ಭಾರತ್ ಜ್ಯೋತಿಗೂ ರೆಗ್ಯುಲರ್‌ಆಗಿ ಬರೀತಿದ್ದೆ.
ಅಸ್ಸಿಸ್ಟಂಟ್ ಎಡಿmರ್ ಆದೆ. ಆದರೆ  ನನಗೆಂದೂ ಕರಿಯರ್,  ದುಡ್ಡು ಮಾಡಬೇಕು. ಆಫೀಸರ್ ಆಗ್ಬೇಕು, ಮನೆ ಕಟ್ಟಬೇಕು...ಹಾಗೆಲ್ಲಾ ತೀವ್ರವಾಗಿ ಅನ್ನಿಸೇ ಇಲ್ಲ. ಐ ಕಾನ್ಟ್ ಅಂಡರ್ಸ್ಟ್ಯಾಂಡ್ ದಟ್. ಈಗ್ಲೂ ಬಾಡಿಗೆ ಮನೇಲಿರ್‍ತೀನಿ. ನಾನೇ ಅಡಿಗೆ ಮಾಡ್ಕೋತೀನಿ.  ಐ ಆಮ್ ಟೋಟಲಿ ಡಿವಾಯ್ಡ್ ಆಫ಼್ ಪೊಸೆಶನ್ಸ್.

ನನ್ನ ಅದೃಷ್ಟಕ್ಕೆ ಈ ವಯಸ್ಸಿನಲ್ಲೂ ನನ್ನ ಜ್ಞಾಪಕ ಶಕ್ತಿ ತುಂಬಾ ಚೆನ್ನಾಗಿದೆ. ಕಣ್ಣಿನ ತೊಂದರೆಇಲ್ಲ. ಟೈಮ್ಸ್ ಆಫ಼್ ಇಂಡಿಯಾ ಕೂಡ ರಾತ್ರಿ ಹೊತ್ತು ಓದಬಲ್ಲೆ - ಕನ್ನಡಕಾನೂ ಇಲ್ಲದೆ. ಈವನ್ ವಿದ್ ಆಲ್ ದೀಸ್ ಗಿಫ಼್ಟ್ಸ್ .॒.ಮಹತ್ತರವಾದದ್ದೇನೂ ಸಾಧಿಸಲಿಲ್ಲ ಅನ್ನಿಸುತ್ತೆ...

ನಾನವರಿಗೆ ವಿದಾಯ ಹೇಳಿ ಎದ್ದು ಬಂದಾಗ ಕತ್ತಲಾಗಿತ್ತು. ಅಷ್ಟೊಂದು ಮಹತ್ಸಾಧನೆ ಮಾಡಿಯೂ ಅಂಥಾ ಮಹತ್ತರವಾದದ್ದೇನೂ ಸಾಧಿಸಲಿಲ್ಲ ಎನ್ನುವ ಈ ವಿಕ್ಷಿಪ್ತ ಮೆಧಾವಿಯ ಮಾತುಗಳು ಮನಸ್ಸಿನಲ್ಲಿ ಧ್ವನಿಸುತ್ತಲೇ ಇದ್ದುವು.

ಅಹೋಬಲ ಶಂಕರರು ೧೯೯೭ರ ಸೆಪ್ಟೆಂಬರ್ ತಿಂಗಳಲ್ಲಿ ಮುಂಬೈಯ್ಯಲ್ಲಿ ತೀರಿಕೊಂಡರು.



ಅಹೋಬಲಶಂಕರರ ಅನುವಾದಗಳು:
ನ್ಯಾಶನಲ್ ಬುಕ್ ಟ್ರಸ್ಟ್:
ಕವಿ-ತಾರಾಶಂಕರ ಬ್ಯಾನರ್ಜಿ, ಪೂರ್ಣಕುಂಭ -ರಾಣಿ ಚಂದಾ,ಜಾಗರಿ - ಸತೀಶ್ ಭಂಡಾರಿ.


ಕಾವ್ಯಲಯಾ ಪುಬ್ಲಿಕೇಶನ್ಸ್:
 ರವೀಂದ್ರನಾಥ ಠಾಕೂರ - ಪೋಸ್ಟ್ ಆಫೀಸ್, ಛೇಲಾ ಬೇಲಾ, ಬಲಿದಾನ, ರಕ್ತಕರವೀರ, ರಾಜಾ ರಾಣಿ, ನರ್ತಕಿಯ ಪೂಜೆ, ವಿನೋದಿನಿ, ಯೋಗಾಯೋಗ, ರವೀಂದ್ರ ಕಥಾಮಂಜರಿ-೩ ಹೊತ್ತಗೆಗಳು.
ಹಳ್ಳಿಯ ಸಮಾಜ, ಶುಭದಾ - ಶರತ್‌ಚಂದ್ರ ಚಟ್ಟರ್ಜಿ, ಇಂದಿರಾ, ಯುಗಳಾಂಗುರೀಯ, ರಾಧಾ ರಾಣಿ, ರಜನಿ -ಬಂಕಿಮಚಂದ್ರ ಚಟ್ಟರ್ಜಿ, ಸಾಹಿಬ್ ಬೀಬಿ ಔರ್ ಗುಲಾಮ್ - ಬಿಮಲ್ ಮಿತ್ರಾ, ಪಥೇರ್ ಪಾಂಚಾಲಿ, ಅಪರಾಜಿತೆ -ವಿಭೂತಿಭೂಷ್‌ಣ ಬಂದೋಪಾಧ್ಯಾಯ, ಬೊಂಬೆಯ ಕುಣಿತದ ಕತೆ - ಮಾಣಿಕ್ ಚಂದ್ರ ಬಂದೋಪಾಧ್ಯಾಯ, ಇನ್ನೂ ದೂರದ ದಾರಿ, ಮಾಯಾ - ಬಿರೇನ್ ದಾಸ್.

ವಿಕಾಸ್ ಪಬ್ಲಿಕೇಶನ್ಸ್:
ಮಲೆಯಾಳಂ ನಿಂದ ಇ.ಎಮ್. ಎಸ್. ನಂಬೂದರಿಪಾದರ ಆತ್ಮಕತೆ.
ಸ್ವಂತಕೃತಿಗಳು:
ನಾಟಕಗಳು: ದೇಶದ್ರೋಹಿ, ವರಭ್ರಷ್ಟ.
:

2 comments:

  1. ಓಹ್.. ಉಮಾಮೇಡಂ,
    ಥ್ಯಾಂಕ್ಯೂ ವೆರಿಮಚ್.
    ನಾನು ಇವರ ಅಭಿಮಾನಿ. ಬರಹಗಳ ಅಭಿಮಾನಿ ಅಂದ್ರೆ ಸರಿ. ಯಾಕಂದ್ರೆ ನಂಗೆ ಇವರ ವ್ಯಕ್ತಿಪರಿಚಯವೇ ಇಲ್ಲ.
    ಇವರ ಕುಮುದಿನಿ(ಯೋಗಾಯೋಗ) ಮತ್ತು ಅಪರಾಜಿತ ನನ್ನ ಫೇವರಿಟ್ ಅನುವಾದಗಳಲ್ಲಿ ಮೊದಲ ಸಾಲಿನ ಪುಸ್ತಕಗಳು.

    ಎಂತಹ ವಿನಮ್ರ ಸ್ಪಷ್ಟತೆ ಮತ್ತು ಗಟ್ಟಿ ನಿಲುವು! ಈ ಪರಿಚಯಕ್ಕೆ ನಾನು ಋಣಿ.
    ಅವರ ಪರಿಚಯ ಮಾಡುತ್ತಾ ನಮ್ಮ ಯೋಚನೆಗಳ ಸಾಧ್ಯತೆಗಳನ್ನು ಪಲ್ಲಟಿಸುವ ಈ ಪೋಸ್ಟುಗಳು ನಂಗೆ ತುಂಬಾ ಇಷ್ಟವಾಯಿತು.
    ಮತ್ತೆ ಮತ್ತೆ ಇದೇ ಸಾಲುಗಳನ್ನು ಮೆಲುಕು ಹಾಕುತ್ತಾ ಇರುವೆ.

    " ಇದಕ್ಕಿದ್ದಂತೆ ಕತ್ತಲು ಕರಗತೊಡಗಿತು. ನಸು ಬೆಳಕಿನಲ್ಲಿ ಸುತ್ತುವರಿದ ಮರಗಳು, ಹೂವು, ಬಳ್ಳಿ ಆಕಾರ ತಾಳುತ್ತಾ ಹೋದವು. ಪಕ್ಷಿಗಳು ಚಿಲಿಪಿಲಿ ಗುಟ್ಟುತ್ತಿದ್ದವು. ಅಳಿಲೊಂದು ಮೇಲೆ ಕೆಳಗೆ ಓಡುತ್ತಾ ಆಟವಾಡಿಕೊಳ್ಳುತ್ತಿತ್ತು. ಎಲ್ಲಾ ಎಷ್ಟೊಂದು ಸುಂದರವಾಗಿತ್ತು. ನಿಧಾನವಾಗಿ ಬೆಳಕು ಹರಿಯಿತು. ಐ ಸಾ ದ ಸ್ಪ್ಲೆಂಡರ್ ಆಫ಼್ ದ ಫ಼ೆನಾಮೆನನ್ ಕಾಲ್ಡ್ ಡಾನ್. "

    " ಕತ್ತಲೂ ಎಲ್ಲವನ್ನೂ ಎಷ್ಟು ಇನ್ಫ್ಲುಯೆನ್ಸ್ ಮಾಡಿ ಬಿಟ್ಟಿತ್ತು. ಬೆಳಕು ಬೇರೆಯೇ ಮಾಡಿತಲ್ಲಾ...ಎಂದು ಅಚ್ಚರಿ ಪಡುತ್ತಾ ನಡೆದೆ. "

    "ಅಷ್ಟೊಂದು ಒಳ್ಳೆ ಕತೆಗಳನ್ನು ಓದಿ, ಆ ಮಟ್ಟದ ಬರವಣಿಗೆ ಎಕ್ಸ್ಪೀರಿಯನ್ಸ್ ಮಾಡಿದ ಮೇಲೆ ಅದರಲ್ಲಿ ನಾನು ಹತ್ತನೇ ಒಂದರಷ್ಟೂ ಬರೆಯಲಾರೆ ಅನ್ನಿಸುತ್ತೆ.ಪ್ಲಾಟ್ಸ್ ನನ್ನ ತಲೆ ತುಂಬಾ ಇದೆ. ಭಾಷೆ, ಅಭಿವ್ಯಕ್ತಿಯಲ್ಲಿ ಆ ಮಟ್ಟಕ್ಕೆ ಏರಲಾರೆ ಅನ್ನಿಸುತ್ತೆ. ನನಗೀಗೆ ಅಂಥಾ ಆತ್ಮವಿಶ್ವಾಸವೇ ಇಲ್ಲ.॒ಏನಾದರೂ ಅಂಥಾ ಗಹನವಾದದ್ದು, ಯಾರಿಗೂ ಸಿಕ್ಕದ ಆಳ ಸಿಕ್ಕರೆ ಮಾತ್ರ ಬರೀಬೇಕೂಂತ ಅನ್ನಿಸುತ್ತೆ..."

    "ಈವನ್ ವಿದ್ ಆಲ್ ದೀಸ್ ಗಿಫ಼್ಟ್ಸ್ .॒.ಮಹತ್ತರವಾದದ್ದೇನೂ ಸಾಧಿಸಲಿಲ್ಲ ಅನ್ನಿಸುತ್ತೆ..."

    "ಹೆಜ್ಜೆಹೆಜ್ಜೆಗೆ ರಾಜಿ ಮಾಡಿಕೊಳ್ಳದೆ ನಡೆದವರ ನಿಲುವಿನಲ್ಲಿ ಮಾತ್ರ ಹಣಕುವ ದಿಟ್ಟತನ. ಅಲ್ಲದೆ, ಚಿಕ್ಕಪುಟ್ಟ ಅನಾನುಕೂಲಗಳು, ಕಿರಿಕಿರಿಗಳಿಗೂ ಹೆದರುತ್ತಲೇ ಬದುಕುವ ಈಗಿನವರಿಗೆ ಅಚ್ಚರಿ ತರುವ ಒಂದು ಅಂಶವೆಂದರೆ ತಮಗಾಗಿ ಅವರಲ್ಲಿಲ್ಲದಿದ್ದ ದಿಗಿಲು."

    ಇದೆಲ್ಲಾ ಓದಿದ ಮೇಲೆ ಅನಿಸ್ತಿದೆ. ಇವರು ಹೀಗಿದ್ದದ್ದಕ್ಕೇ ಬೆಂಗಾಲದ "ಅಪೂ" ಮಲೆನಾಡಿನ ಪುಟ್ಟ ಊರಿನಲ್ಲಿ ಕೂತು ಓದಿದ ನನಗೆ "ಆಪ್ತ" ನಾದ ಅಂತ. ಕುಮುದಿನಿ ಬಗ್ಗೆ ಬರೆಯಲು ಕಾಮೆಂಟು ಸಾಲುವುದಿಲ್ಲ. ಮುಂದೆಂದಾದರೂ ಮಾತಿಗೆ ಸಿಕ್ಕಿದಾಗ...

    ಪ್ರೀತಿಯಿಂದ,
    ಸಿಂಧು

    ReplyDelete
  2. preetiya sindhu,
    nimma comment odi tunba khushiyaayitu.
    naanu blog nalli barahagalannu haakidaaga lella idannu yaaraadaru oduttara andu
    kolluttiruttene. aadare nimmanthavaru respond maadidaaga saarthaka annisi
    khushiyaagutte. nimmadu tumba creative response.
    innenu?
    nanna ondu kirukaadambari 'vanajammana seetu' naadiddu bengalurina institute
    of world culture nalli release aaguttide. adaralli svalpa busy yagiddeeni.
    bengalurinalliddare banni. beligge 10 gantege kaaryakrama.
    heege keep in touch.
    thanks for your response.
    warmly,
    uma

    ReplyDelete