Wednesday, November 26, 2014
Saturday, November 15, 2014
ಮುಂಬೈ ಅನುಭವ!
ಮುಂಬೈ ಅನುಭವ!
ಆ ಹುಡುಗನನ್ನು ನಾನು ಮುಂಬೈನಲ್ಲಿ ಎಲ್ಲಿಯೂ ನೋಡಿರಬಹುದಾಗಿತ್ತು. ಸೀಮೆಎಣ್ಣೆಗಾಗಿ ಪುಟ್ಟ ತಂಗಿಯರೊಡನೆ ಗಂಟೆಗಟ್ಟಳೆ ರೇಶನ್ ಅಂಗಡಿಯ ಮುಂದೆ ಕ್ಯೂ ನಿಲ್ಲುವ, ದೀಪ ಕೆಂಪಾಗುತ್ತಲೂ “ಹರ್ಷದ್ ಮೆಹ್ತಾ ಲಾಕಪ್ ಮೇ... ಮಿಡ್ಡೇ-ಆಫ್ಟರ್‌ನೂನ್, ಮಿಡ್ಡೇ-ಆಫ್ಟರ್‌ನೂನ್...” ಎಂದು ಕೂಗುತ್ತಾ ಟ್ಯಾಕ್ಸಿಯತ್ತ ಧಾವಿಸಿ ಬರುವ, ಮುನಿಸಿಪಲ್ ಶಾಲೆಯ ಕಡುನೀಲಿ... ಬಿಳಿ ಮಾಸಲು ಯೂನಿಫಾರಂನಲ್ಲಿ, ಪುಸ್ತಕಗಳ ಭಾರಕ್ಕೆ ಬೆನ್ನು ಬಗ್ಗಿಸಿಕೊಂಡೇ ಶ್ರೀದೇವಿಯ ಬೃಹತ್ ಹೋರ್ಡಿಂಗಿನ ಮುಂದೆ ಮೈಮರೆತಿರುವ, ಗಣಪತಿ ಬಾಪ್ಪಾ ಮೋರ‍್ಯಾ ಎಂದು ಮೈಮರೆತು ಕುಣಿಯುವ, “ಆಯೀ ಕಾಮ್ ಪರ್ ದೋ ತೀನ್ ದಿನ್ ನಹೀಂ ಆಯೇಗಿ...’ ಎಂದು ಬಾಗಿಲು ತೆಗೆಯುತ್ತಲೇ ಬಡಬಡಿಸುವ- ಯಾವ ಹುಡುಗನೂ ಅವನಾಗಿರಬಹುದಾಗಿತ್ತು.
ಆದರೆ ನಾನು ಅವನನ್ನು ಕಂಡಿದ್ದು ಚೆಂಬೂರಿನ ಚಿಲ್ಡನ್ಸ್ ಹೋಮ್‌ನಲ್ಲಿ ವಾರಕ್ಕೊಮ್ಮೆ ಅಲ್ಲಿಯ ಮಕ್ಕಳನ್ನು ಭೇಟಿಯಾಗಿ ಮಾತುಕತೆಯಾಡಲು ಹೋಗುತ್ತಿದ್ದಾಗ. ಅವನ ವಯಸ್ಸು ಎಂಟು. ದುಂಡುಮುಖ, ಹೊಳೆಯುವ ಕಣ್ಣುಗಳು, ಮಟ್ಟಸವಾದ ಮೈಕಟ್ಟು, ಚಿಕ್ಕದಾಗಿ ಕತ್ತರಿಸಿದ ಕೂದಲು, ಮೊದಲು ಸಂಕೋಚಪಟ್ಟರೂ ಆಮೇಲೆ ನಿರಾಳವಾಗಿ ಮಾತಾಡಿದ.
“ನಿನ್ನ ಹೆಸರು...?”
“ವಿನಾಯಕ್, ವಿನಾಯಕ್ ಪಾಖರೆ”
“ನಿಮ್ಮ ಮನೆ ಎಲ್ಲಿದೆ?”
“ಮಲಾಡ್‌ನಲ್ಲಿ, ಅಲ್ಲಿ ನನ್ನ ಅಪ್ಪನ ‘ಮಟನ್ ಶಾಪ್’ ಇದೆ. ಆಯಿ ಎಲ್ಲೂ ಕೆಲಸಕ್ಕೆ ಹೋಗುವುದಿಲ್ಲ. ಮನೆಯಲ್ಲೇ ಇರುತ್ತಾಳೆ. ಅಡಿಗೆ ಮಾಡುತ್ತಾಳೆ. ನನ್ನ ತಮ್ಮಂದಿರನ್ನು ನೋಡಿಕೊಳ್ಳುತ್ತಾಳೆ.”
“ನೀನೇಕೆ ಮನೆಬಿಟ್ಟು ಓಡಿಬಂದೆ?”
“ಒಂದು ದಿನ ಸ್ಕೂಲಿನಲ್ಲಿ ಮೇಷ್ಟ್ರು ತುಂಬಾ ಹೊಡೆದರು. ತುಂಬಾ ಸಿಟ್ಟು ಬಂತು. ಅದಕ್ಕೆ ಅಲ್ಲಿಂದ ಓಡಿಹೋದೆ. ಲೋಕಲ್ ಹತ್ತಿ ವೀಟಿಗೆ. ತಾಜ್‌ಮಹಲ್ ಹೋಟೆಲ್ ಹತ್ತಿರ ಸ್ವಲ್ಪ ಹೊತ್ತು ಏನೂ ತೋಚದೆ, ಹಾಗೇ ತಿರುಗಾಡುತ್ತಿದ್ದೆ. ಆಗ ಹಸಿವಾಗಹತ್ತಿತ್ತು. ಭಿಕ್ಷೆ ಬೇಡಲು ಶುರು ಮಾಡಿದೆ. ಹಸಿವಾದಾಗಲೆಲ್ಲ ಭಿಕ್ಷೆ ಬೇಡುತ್ತಿದ್ದೆ. ಸ್ವಲ್ಪ ಹಣ ಕೈಸೇರಿದ ತಕ್ಷಣ ಏನಾದರೂ ಕೊಂಡು ತಿನ್ನುತ್ತಿದ್ದೆ. ಫುಟ್‌ಪಾತಿನ ಮೇಲೆ ಮಲಗುತ್ತಿದ್ದೆ. ಸ್ವಲ್ಪ ದಿನಗಳಲ್ಲಿ ನನಗೆ ಅಲ್ಲಿ ಕೆಲವು ಹುಡುಗರೊಂದಿಗೆ ದೋಸ್ತಿ ಆಯಿತು. ಆಮೇಲೆ, ನಾನು ಅವರ ಗ್ಯಾಂಗ್ ಸೇರಿಕೊಂಡೆ. ನಮ್ಮ ಗ್ಯಾಂಗಿಗೆ ಒಬ್ಬ ಲೀಡರ್ ಇದ್ದ. ಕಾಣ್ಯಾ ಥಾ, ಹೀಗೆ ಅವನಿಗೆ ಒಂದೇ ಕಣ್ಣಿತ್ತು. ನಮ್ಮ ಕೆಲಸವೆಂದರೆ ತಾಜ್‌ನ ಎದುರಿನ ಸಮುದ್ರದಲ್ಲಿ ಮುಳುಗುವುದು. ತಳದಿಂದ ಖಾಲಿ ವಿಸ್ಕಿ ಬಾಟಲುಗಳನ್ನು ಹೆಕ್ಕಿ ತರುವುದು. ಲೀಡರ್‌ಗೆ ಕೊಡುವುದು. ಎಲ್ಲರದನ್ನೂ ಕೂಡಿಸಿ ರೂಪಾಯಿಗೆ ಒಂದರಂತೆ ಮಾರಿ ನಾವು ಲಾಭ ಹಂಚಿಕೊಳ್ಳುತ್ತಿದ್ದೆವು. ಆಗಾಗ ಧಂದಾ ಆಗದಿದ್ದರೆ ಭಿಕ್ಷೆ ಬೇಡುತ್ತಿದ್ದೆವು.”
“ಭಿಕ್ಷೆ ಬೇಡಿದರೆ ಸಾಕಷ್ಟು ಹಣ ಸಿಕ್ಕುತ್ತಿತ್ತೆ?”
“ಓ! ನಾವು ಹೆಚ್ಚಾಗಿ ಅರಬ್ಬರು ಮತ್ತು ಗೋರೆಲೋಗ್ ಬಳಿ ಭಿಕ್ಷೆ ಬೇಡುತ್ತಿದ್ದೆವು. ಕರಿಯರು ಕಂಜೂಸಿಗಳು. ಹೆಚ್ಚು ಹಣ ಕೊಡುವುದಿಲ್ಲ. ಅರಬ್ಬರು ತುಂಬಾ ಒಳ್ಳೆಯವರು- ಒಂದೆರಡು ರೂಪಾಯಿ ಕೊಟ್ಟೇಕೊಡುತ್ತಾರೆ. ಒಂದೊಂದು ಸಲ ಹತ್ತು ರೂಪಾಯಿ ನೋಟು ಕೂಡ ಕೊಡುವುದುಂಟು. ಗೋರೆಲೋಗ್ ಭೀ ದಿಲ್ ವಾಲೇ ಹೋತೇ ಹೈ. ಅವರೂ ದುಡ್ಡು, ಚಾಕೋಲೇಟ್ ಎಲ್ಲಾ ಕೊಡ್ತಿದ್ದರು. ಕೆಲವರು ನಮ್ಮನ್ನು ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಖಾನಾ ಕೊಡಿಸುತ್ತಿದ್ದರು. ಅಲ್ಲದೆ ಅರಬ್ಬರನ್ನು ನಾವು ಹತ್ತಿರದಲ್ಲೇ ಇದ್ದ ಇನ್ನೊಂದು ಹೋಟೆಲಿಗೆ ಕರೆದುಕೊಂಡು ಹೋಗಿ, ತುಂಬಾ ದುಡ್ಡು ಮಾಡತ್ತಿದ್ದೆವು. ಆ ಜಾಗದಲ್ಲಿ ಬೆಳ್ಳಗೆ, ಚೆಂದಾಗಿರುವ ತುಂಬಾ ಹುಡುಗಿಯರಿದ್ದರು. ದಿನವೆಲ್ಲಾ ನಾಚ್‌ಗಾನಾ ನಡೆಯುತ್ತಲೇ ಇರುತ್ತಿತ್ತು. ಅಲ್ಲಿಗೆ ಅರಬ್ಬರನ್ನು ಕರೆದುಕೊಂಡು ಹೋದರೆ ಅವರಿಗೆ ತುಂಬಾ ಖುಷಿಯಾಗುತ್ತಿತ್ತು. ಆಗ ಕೈ ತುಂಬಾ ಹಣ ಕೊಡುತ್ತಿದ್ದರು. ಹಾಂ... ಬಹುತ್ ಮಜಾ ಆತಾ ಥಾ... ಮಜವಾಗಿರುತ್ತಿತ್ತು.”
“ನಿನಗೆ ಈ ಜಾಗ ಇಷ್ಟವಾಯಿತಾ? ಸ್ನೇಹಿತರಿದ್ದಾರಾ ಇಲ್ಲಿ?”
“ಹೂಂ. ನಂಗೆ ಈ ಜಾಗ ಇಷ್ಟ. ಸ್ನೇಹಿತರಿದ್ದಾರೆ. ಆದರೆ ನನಗೆ ಸ್ಕೂಲಿಗೆ ಹೋಗೋದಕ್ಕಿಂತ, ದಿನವೆಲ್ಲ ಕ್ರಿಕೆಟ್ ಆಡಲು ಇಷ್ಟ. ನಂಗೆ ನಮ್ಮ ಸಚಿನ್‌ನಂತೆ ಆಡೋಕೆ ಆಸೆ. ಅಲ್ಲದೆ ಕೇರಂ, ಪೈಂಟಿಂಗ್ ಎಲ್ಲಾ ಇಷ್ಟ. ರೇಡಿಯೋದಲ್ಲಿ ಬರುವ ಸಿನಿಮಾ ಹಾಡೆಲ್ಲಾ ಕಲಿತು ಹಾಡ್ತೀನಿ...”
“ಅಪ್ಪ-ಅಮ್ಮ ನೆನಪು ತುಂಬಾ ಆಗುತ್ತಾ? ಅವರು ನೋಡಲು ಬಂದಿದ್ದರಾ?”
“ನಾನಿಲ್ಲಿಗೆ ಬಂದು ಒಂದು ತಿಂಗಳಾಯಿತು. ಆಗಾಗ ಅವರ ನೆನಪಾಗುತ್ತೆ. ಅದೇಕೋ ಇನ್ನೂ ನನ್ನನ್ನು ನೋಡಲು ಬಂದಿಲ್ಲ. ಆದರೆ ಅವರು ಬಂದೇ ಬರ‍್ತಾರೆ, ನಂಗೊತ್ತು. ಇಲ್ಲಿನ ರ್ ಒಪ್ಪಿಗೆ ಕೊಟ್ಟ ಮೇಲೆ ನಾನು ಮನೆಗೆ ವಾಪಸ್ಸು ಹೋಗ್ತೀನಿ...”
ಆಗಲೇ ಅವನ ದೃಷ್ಟಿ ಪಕ್ಕದಲ್ಲೇ ಕ್ರಿಕೇಟ್ ಪ್ರಾರಂಭಿಸಿದ ಹುಡುಗರ ಮೇಲಿತ್ತು. ನಾನು ಅಲ್ಲಿಂದ ನಡೆದುಹೋದಂತೆ, ನನ್ನತ್ತ ಕೈಬೀಸಿದ.
ಇದಾಗಿ ಕೆಲವು ವರ್ಷಗಳಾಯಿತು.
ವಿನಾಯಕ ಪಾಖರೆ.
ನಾನೀಗ ಮುಂಬೈನಲ್ಲಿ ಅವನನ್ನು ಎಲ್ಲೆಡೆ ಕಾಣುತ್ತಲೇ ಇರುತ್ತೇನೆ.
(ಮುಂಬೈ ಡೈರಿ/ಲಂಕೇಶ್ ಪತ್ರಿಕೆ)
Saturday, November 1, 2014
ಮುಂಬೈ ಕಲಾಸಂತೆಯಲ್ಲೊಬ್ಬ ಸಂತ –ಕಮಲಾಕ್ಷ ಶೆಣೈ
ಕಲಾಸಂತೆಯಲ್ಲೊಬ್ಬ ಸಂತ
ಫುಟ್ ಪಾತಿನ ರೇಲಿಂಗಿಗೆ ಹೊಂದಿಸಿದ ಸ್ಟಾಂಡುಗಳ ಮೇಲೆ ಮೂರು ತರುಣ ಕಲಾವಿದರ ಚಿತ್ರಗಳು ತೂಗುತ್ತಿದ್ದುವು. ಅಲ್ಲಿನ ಮರದ ಕೆಳಗೆ ಹಾಕಿದ್ದ ಕುರ್ಚಿಯ ಮೇಲೆ, ಕಲಾವಿದರ ನಡುವೆ ಕಮಲಾಕ್ಷ ಶೆಣೈ ಕುಳಿತಿದ್ದರು. ಕಂದುಬಣ್ಣದ ಖಾದಿ ಕುರ್ತಾ, ಕರಿ ಪ್ಯಾಂಟಿನ ಗಡ್ಡದಾರಿ ಶೆಣೈರವರ ಕಣ್ಣುಗಳಲ್ಲಿನ ಯಾವಾಗಿನ ಹೊಳಪು, ತುಟಿಯಂಚಿನ ನಗೆ ಸ್ವಾಗತ ಬೀರಿದವು.
‘ನಿಮ್ಮ ಬಗ್ಗೆ, ಆರ‍್ಟ್ ಪ್ಲಾಜಾ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು. ಬನ್ನಿ ಹರಟೆ ಹೊಡೆಯೋಣ’ ಎಂದೆ. ‘ಓಹೋ’ ಎನ್ನುತ್ತಾ ಖುಷಿಯಿಂದ ಎದ್ದರು. ಎದುರಿಗೇ ಇರುವ ವೇ ಸೈಡ್ ಇನ್ ಗೆ ಹೋಗಿ ಕುಳಿತೆವು. ಪಕ್ಕಾ ಪಾರ‍್ಸಿ ವಾತಾವರಣದ, ಮೆಲುಮಾತಿನ, ಒಳ್ಳೆ ಅಭಿರುಚಿಯ ಆ ತಂಪು ಸ್ಥಳದಲ್ಲಿ ಹೆಚ್ಚು ಗಲಾಟೆಯಿರಲಿಲ್ಲ. ತೆರೆದ ಕಿಟಕಿಯ ಹಸಿರು ಗಿಡಗಳಾಚೆ ಮುಂಬೈ ಮಧ್ಯಾಹ್ನ ಬಸವಳಿದಿತ್ತು.
೧೯೫೨ರಲ್ಲಿ ‘ಮುಂಬೈಗೆ ಹೋಗಿ ಏನಾದ್ರೂ ಮಾಡೋಣ’ ಎಂದುಕೊಂಡು ಉಡುಪಿಯಿಂದ ಇಲ್ಲಿಗೆ ಬಂದವರು ಕಮಲಾಕ್ಷ ಶೆಣೈ. ನಂತರ ನೂತನ್ ಕಲಾಮಂದಿರದಲ್ಲಿ ಅಭ್ಯಾಸ. ಸ್ವಲ್ಪದಿನ ವಿದ್ಯುತ್ ಪರಿಕರಗಳ ಅಂಗಡಿಯಲ್ಲಿ ಕೆಲಸ. ನಂತರ ಕಲ್ಕತ್ತಾಗೆ ಪ್ರಯಾಣ. ಅಲ್ಲಿನ ಗೌವರ‍್ನಮೆಂಟ್ ಕಾಲೇಜ್ ಆಫ್ ಆರ‍್ಟ್ಸ್ ಸೇರಿಕೊಂಡವರು, ಕೋರ‍್ಸ್ ಮುಗಿಯುವ ಮೊದಲೇ ಬಿಟ್ಟಿದ್ದರು. ‘ಹ್ಯಾಡ್ ಟು ಗಿವ್ ಅಪ್ ಕಾಲೇಜ್ ನಾಟ್ ಟು ಗಿವ್ ಅಪ್ ಆರ‍್ಟ್, ಬಟ್ ಟು ಪರ‍್ಸೂ ಆರ‍್ಟ್!’
ನಂತರ ತಾವೇ ಸಾಧನೆಯಲ್ಲಿ ತೊಡಗಿದರು. ಮೊದಲು ಲೈನ್ಸ್ ಪರ್ಫೆಕ್ಟ್ ಮಾಡಿಕೊಳ್ಳಬೇಕಾಗಿತ್ತು. ೩ ವರ್ಷ ಬರಿಯ ರೇಖೆಗಳನ್ನು ಅಭ್ಯಸಿಸಿದೆ. ಬಣ್ಣಗಳನ್ನು ಮುಟ್ಟಲಿಲ್ಲ. ಮೊದಲ ವರ್ಷ ಯಾವ ಪರ್ಪಸ್ ಇಲ್ಲದೆ ಗೆರೆಗಳನ್ನು ಎಳೆದೆ. ನಂತರ ಆಬ್ಜೆಕ್ಟ್ಸ್‌ಗೆ ಮುಂದುವರಿದೆ. ನನ್ನ ಪ್ರೀತಿಯ ಸ್ಥಳಗಳೆಂದರೆ ತಬೇಲಾಗಳು. ಅಲ್ಲಿ ಹೋಗಿ ಎಮ್ಮೆ, ಹಸುಗಳನ್ನು ಸ್ಕೆಚ್ ಮಾಡುವುದು. ಮತ್ತೆ ಸಿಯೆಲ್ಡಾ ಸ್ಟೇಷನ್. ಅಲ್ಲಿ ಉತ್ತರ ಬಂಗಾಳದಿಂದ ಬಂದ ರೈಫ್ಯೂಜಿಗಳು ತಳ ಊರಿದ್ದರು. ಸುಮ್ಮನೆ ದಿನವೆಲ್ಲಾ ಬಿದ್ದುಕೊಂಡಿರುತ್ತಿದ್ದರು. ತುಂಬಾ “ಇಂಟರೆಸ್ಟಿಂಗ್ ಆಬ್ಜೆಕ್ಟ್ಸ್!” ಬರಿಯ ಪ್ರಖ್ಯಾತ ಕಲಾವಿದರಿಗೆ ಅವಕಾಶ ಕೊಡುತ್ತಿದ್ದ ಅಲ್ಲಿನ ಅಕಾಡೆಮಿ ಆಫ್ ಆರ್ಟ್ಸ್‌ನವರು, ಇವರ ಕೃತಿಗಳನ್ನು ಗಮನಿಸಿ, ಪ್ರದರ್ಶನ ಏರ್ಪಡಿಸಿದ್ದರು.
ಮುಂಬೈಗೆ ಮರಳಿದ್ದು ೫ ವರ್ಷಗಳ ನಂತರ. ಇಲ್ಲಿ ಬರುತ್ತಲೇ ಇಲ್ಲಿನ ತರುಣ ಕಲಾವಿದರ ಸ್ಥಿತಿ ಇವರನ್ನು ತಟ್ಟಿತು. ಬರಿಯ ಪ್ರತಿಭಾವಂತರಾಗಿದ್ದ ಉದಯೋನ್ಮುಖ ಕಲಾವಿದರಿಗೆ ದೊಡ್ಡ ಗ್ಯಾಲರಿಗಳನ್ನು ಬಾಡಿಗೆಗೆ ತೆಗೆದುಕೊಳ್ಳುವುದು ಸಾಧ್ಯವಿರುತ್ತಿರಲಿಲ್ಲ, ಆಗ ಮೊಳಕೆಯೊಡೆದ ಚಳವಳಿ “ರಿಪಲ್.” ಜಹಾಂಗೀರ್ ಆರ್ಟ್ ಗ್ಯಾಲರಿ ಹೊರಗಡೆ ಚಿತ್ರಗಳನ್ನು ಮಾರುವ ಪ್ರಯತ್ನ. ಆಗ ಶನಿವಾರ ಮಧ್ಯಾಹ್ನಗಳು ಗೆಳೆಯರಾದ ಜಯಂತ್ ಕಾಯ್ಕಿಣಿ, ಕುಮಾರ ಜೋಶಿ, ಗಜಾನನ ಉಪಾಧ್ಯಾಯ, ಶರದ್, ರಾವ್ ಬೈಲ್ ಮುಂತಾದವರು ಶೆಣೈರವರ ಸ್ಕೆಚ್‌ಗಳನ್ನು ಮಾರಲು ನಿಲ್ಲುತ್ತಿದ್ದುದು ನೆನಪಿದೆ.
‘ಈ ವಿಚಾರಕ್ಕೆ ಎಲ್ಲರ ಸಹಾನುಭೂತಿಯಿತ್ತು. ಆದರೆ ಕಲಾವಿದರು ಬೀದಿಗಿಳಿಯಲು ತಯಾರಿರಲಿಲ್ಲ. ಅದು ಮರ್ಯಾದೆಗೆ ಕಡಿಮೆಯಾದ ಮಾತಾಗಿತ್ತು. ಅಲ್ಲದೆ, ಆಗ ಅಲ್ಲೆಲ್ಲಾ ಭಿಕ್ಷುಕರು ಕುಳಿತಿರುತ್ತಿದ್ದರು. ತುಂಬಾ ಕೊಳಕಾಗಿರುತ್ತಿತ್ತು. ಮುನಿಸಿಪಾಲಿಟಿಗೆ ನಾವು “ಹಾಕರ‍್ಸ್ ಲೈಸೆನ್ಸ್ ಫೀ” ಕೊಡಬೇಕಾಗಿತ್ತು! ಆಗ ನನಗೆ ಇದನ್ನು ‘ಲೀಗಲೈಸ್’ ಮಾಡುವ ಅವಶ್ಯಕತೆ ಕಂಡು ಬಂದಿತು. ನಾನು ಟೌನಿನ ಮುನಿಸಿಪಲ್ ಕಮೀಷನರ್ ಎಸ್.ಎಸ್. ಟಿನೈಕರ್ ಅವರನ್ನು ಭೇಟಿಯಾದೆ. ಅವರ ಪ್ರತಿಕ್ರಿಯೆ ತುಂಬಾ ಅಚ್ಚರಿ, ಖುಷಿ ತಂದಿತು. ಹಿಂದೆಂದೂ ಕಂಡುಬರದ ಈ ವಿಚಾರವನ್ನು ಅವರು ಅತ್ಯಂತ ಉತ್ಸಾಹದಿಂದ ಸ್ವೀಕರಿಸಿದರು. ತಕ್ಷಣ ನನಗೆ ಪರ್ಮಿಷನ್ ಲೆಟರ್ ಟೈಪ್ ಮಾಡಿಸಿಕೊಟ್ಟರು! ಹಾಗೆ ಜನ್ಮ ತಾಳಿದ್ದು ಆರ್ಟ್ ಪ್ಲಾಜಾ.”
“ಆರ್ಟ್ ಪ್ಲಾಜಾ ಬರಿಯ ಗ್ಯಾಲರಿಯಲ್ಲ. ಇದು ಒಂದು ಚಳವಳಿ. ಇದರ ಗುರಿಯೆಂದರೆ ಪ್ರತಿಭಾವಂತರಾದ, ಆದರೆ ಧನಬಲ್ಲವಿಲ್ಲದ ಕಲಾವಿದರಿಗೆ ಪ್ರದರ್ಶನಗಳನ್ನು ಏರ್ಪಡಿಸಲು ಅವಕಾಶ ಕೊಡುವುದು. ನಾವು ಅದಕ್ಕಾಗಿ ಅವರಿಂದ ಒಂದು ಕಾಸೂ ತೆಗೆದುಕೊಳ್ಳುವುದಿಲ್ಲ. ಅಲ್ಲದೆ, ಚಿತ್ರಗಳನ್ನು ಸಾಮಾನ್ಯ ಜನರಿಗೆ ನಿಲುಕುವ ಬೆಲೆಯಿಟ್ಟು ಮಾರುವುದು. ಅವರಿಂದ ಕಲೆಯನ್ನು ಸರ್ವಸಾಮಾನ್ಯರಿಗೆ ಕೊಂಡೊಯ್ಯುವುದು.”
“ಆರ್ಟ್ ಪ್ಲಾಜಾ ಸ್ವೀಕೃತವಾಗಲು ಸಮಯ ಹಿಡಿಯಿತು. ಪ್ರಾರಂಭವಾದಾಗ ಅನೇಕ ಪ್ರಖ್ಯಾತ ಕಲಾವಿದರು “ಶೆಣೈ ಕಲೆಯನ್ನು ಬೀದಿಗೆಳೆದಿದ್ದಾರೆ” ಎಂದು ಬೈದರು. ಮೊದಮೊದಲು ತರುಣ ಕಲಾವಿದರು ಅಲ್ಲಿ ಪ್ರದರ್ಶಿಸಲು ಹಿಂಜರಿದರು. ನಂತರ ಕೆಲವರು “ನಮ್ಮ ಪೇಟಿಂಗ್‌ಗಳನ್ನು ಕಳಿಸುತ್ತೇವೆ. ಆದರೆ ನಾವು ಕೂಡುವುದಿಲ್ಲ” ಎಂದರು! ಈಗ ಅಕ್ಟೋಬರ್‌ನಿಂದ ಮಳೆಗಾಲದವರೆಗೂ ಪೂರ್ತಿ ಪ್ರದರ್ಶನಗಳಿದ್ದೇ ಇರುತ್ತದೆ. ಟಿನೈಕರ್ ಹಾಕರ‍್ಸ್ ಲೈಸನ್ಸ್ ಫೀ ಬಂದ್ ಮಾಡಿಸಿ, ಕಲಾವಿದರಿಗೆ ಸಲ್ಲಬೇಕಾಗಿದ್ದ ಗೌರವ ಕೊಡಿಸಿದರು. ಮುನಿಸಿಪಾಲಿಟಿ ಪ್ರದರ್ಶನಕ್ಕೆ ಬರುವ ಪೇಟಿಂಗ್‌ಗಳನ್ನು ಇಡಲು ಸ್ಥಳ ಕೊಟ್ಟರು. ಏಪ್ರಿಲ್ ೮೮ರಲ್ಲಿ ಮೊದಲ ಪ್ರದರ್ಶನ ಮಾಡಿದ್ದೆವು. ಪ್ರಯೋಗಕ್ಕಾಗಿ. ಅದು ಯಶಸ್ವಿಯಾದ ಮೇಲೆ ಆರ್ಟ್ ಪ್ಲಾಜಾದಲ್ಲಿ ಪ್ರದರ್ಶನಗಳು ಶುರುವಾಯಿತು. ಕಲೆಯನ್ನು ಪ್ರಮೋಟ್ ಮಾಡಲು ತುಂಬಾ ಸಂಸ್ಥೆಗಳಿವೆ. ನಮ್ಮ ಉದ್ದೇಶ ಕಲಾವಿದರನ್ನು ಪ್ರಮೋಟ್ ಮಾಡುವುದು.”
ಶೆಣೈ ಈಗ ಬದಲಾಗಿರುವ “ಆರ್ಟ್ ಸೀನ್” ಬಗ್ಗೆ ತುಂಬಾ ಕಳಕಳಿಯಿಂದ ಮುಂದುವರಿದರು. “೨೫ ವರ್ಷಗಳ ಹಿಂದೆ ಯಾರೂ ಪೇಟಿಂಗ್‌ಗಳನ್ನು ಕೊಳ್ಳುತ್ತಿರಲಿಲ್ಲ. ಆದರೆ ಈಗ ಸಂಸ್ಕೃತಿ ಬದಲಾಗಿದೆ. ದೊಡ್ಡ ಕಂಪೆನಿಗಳವರು, ಹೊಸ ಸಿರಿವಂತರು ಸಾವಿರಾರು ರೂಪಾಯಿ ಕೊಟ್ಟು ಕೊಳ್ಳುತ್ತಾರೆ. ಆದರೆ ಅವರು ಬೆಲೆ ನೋಡಿಕೊಳ್ಳುತ್ತಾರೆ. ಅವರೆಲ್ಲಾ ಆರ್ಟ್ ಪ್ಲಾಜಾದಿಂದ ಕೊಳ್ಳುವವರಲ್ಲ. ಈಗ ಕಲಾವಿದರೂ ಬದಲಾಗಿದ್ದಾರೆ. ತಮ್ಮ ಯಶಸ್ಸನ್ನು ಎಷ್ಟು ಪೇಟಿಂಗ್‌ಗಳು ಮಾರಾಟವಾದುವು ಎನ್ನುವುದರ ಮೇಲೆ ಅಳೆಯುತ್ತಾರೆ. ಈಗ ಅವರು ಸಾಮಾನ್ಯ ಜನರನ್ನು ತಲುಪಬೇಕು. ನಮ್ಮ ಮುಂದಿನ ಯೋಜನೆ ‘ಆರ್ಟ್ ಅಟ್ ಯುವರ್ ಡೋರ್ ಸ್ಟೆಪ್.’ ಹೌಸಿಂಗ್ ಸೊಸೈಟಿಗಳು, ಕಾಲೋನಿಗಳಲ್ಲಿ ಪ್ರದರ್ಶನಗಳಿಡಬೇಕು. ಇದಕ್ಕಾಗಿ ಬದ್ಧರಾದ ಜನರ ಸಹಾಯ ಬೇಕು. ಅದು ಕಷ್ಟ... ಇದಕ್ಕೆಲ್ಲಾ ಭದ್ರ ಬುನಾದಿ ಹಾಕಲು ಈಗ ಆರ್ಟ್ ಪ್ಲಾಜಾ ಆರ್ಟಿಸ್ಟ್ಸ್ ಅಸೋಸಿಯೇಷನ್ ಮಾಡಿಕೊಂಡಿದ್ದೇನೆ...”
ಇಷ್ಟು ವರ್ಷಗಳಿಂದ ತಮ್ಮ ತಪಸ್ಸನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಕಮಲಾಕ್ಷ ಶೆಣೈ ಅವರು ಒಂಟಿಯಾಗಿ ದೊಂಬಿವಿಲಿಯಲ್ಲಿ ವಾಸಿಸುತ್ತಾರೆ. “ನಾನು ೧೪ ವರ್ಷದಿಂದ ಈ ಮನೆಯಲ್ಲಿ ವಾಸಿಸುತ್ತೇನೆ. ಆ ಮನೆಗೆ ಹೋದಾಗ ತಿಂಗಳಿಗೆ ೪೫ ರೂಪಾಯಿ ಬಾಡಿಗೆ ಕೊಡುತ್ತಿದ್ದೆ. ಮನೆಯ ಮಾಲೀಕ ಗಜಾನನ ಅಂಬೋಮ್ಹಾತ್ರೆ. ಓದು-ಬರಹ ಬಾರದ ಮುಗ್ಧ. ಬಿಲ್ಡಿಂಗಿನ ಬೇರೆಲ್ಲರಿಗೂ ಬಾಡಿಗೆ ಹೆಚ್ಚು ಮಾಡಿದಾಗಲೂ ನನಗೆ ಏರಿಸುತ್ತಿರಲಿಲ್ಲ. ಅವರೆಲ್ಲಾ ಹಾಗೇಕೆಂದು ಕೇಳಿದರೆ “ಅವನೊಬ್ಬ ಸನ್ಯಾಸಿ. ನೀವೂ ಹಾಗೇ ಇರಿ. ನಿಮಗೂ ಜಾಸ್ತಿ ಮಾಡೊಲ್ಲ” ಅಂತಿದ್ದ; ಆರ್ಟ್ ಪ್ಲಾಜಾ ಪ್ರಾರಂಭವಾದಾಗ ಅದರ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ ವಿವರಗಳು ಬಂದಿದ್ದವು. ಒಂದು ಮರಾಠಿ ಪತ್ರಿಕೆಯಲ್ಲಿ ನನ್ನ ಫೋಟೋ ನೋಡಿ, ಯಾರಿಂದಲೋ ಓದಿಸಿ ಅದೇನೆಂದು ತಿಳಿದುಕೊಂಡ. ರಾತ್ರಿ ಮನೆಗೆ ಬಂದವನೇ ನನ್ನನ್ನು ಕರೆಸಿ “ನೀವು ಇನ್ನು ಮೇಲೆ ಬಾಡಿಗೆ ಕೊಡಕೂಡದು. ನಿಮ್ಮಂಥವರಿಂದ ಬಾಡಿಗೆ ತೆಗೆದುಕೊಳ್ಳಲಾರೆ” ಎಂದು ಹೇಳಿಬಿಟ್ಟ. ಅಂದಿನಿಂದ ನನ್ನಿಂದ ಒಂದು ಪೈಸೆ ತೆಗೆದುಕೊಂಡಿಲ್ಲ. ಈಗಲೂ ಇಂಥವರು ಇದ್ದಾರೆ. ಅವರು ಬದಲಾಯಿಸಿಲ್ಲ. ಹಿಂದೆ ಕಲಾವಿದರಿಗೆ, ಸಾಹಿತಿಗಳಿಗೆ ಸಂಗೀತಗಾರರಿಗೆ ಸಮಾಜದಲ್ಲಿ ವಿಶೇಷ ಸ್ಥಾನವಿತ್ತು. ಗೌರವವಿತ್ತು. ಏಕೆಂದರೆ ಅಶರು ಎಲ್ಲರಿಗಿಂತ ಬೇರೆಯಾಗಿ ಬದುಕುತ್ತಿದ್ದರು. ಈಗ ೯೯% ಕಲಾವಿದರು ಬಿಸಿನೆಸ್‌ಮೆನ್ ಆಗಿಬಿಟ್ಟಿದ್ದಾರೆ. ಅವರೂ ಎಲ್ಲರಂತೆಯೇ ಬದುಕುವುದರಿಂದ ಆ ಸ್ಥಾನ ಕಳೆದುಕೊಂಡು ಬಿಟ್ಟಿದ್ದಾರೆ...”
ಅವರೊಡನೆ ಮಾತಾಡುತ್ತಿದ್ದಾಗ ಸಮಯ ಹೋದದ್ದೇ ತಿಳಿಯಲಿಲ್ಲ. ಹೊರಡುವ ಮೊದಲು ಶೆಣೈ ಅವರನ್ನು ಅನುಮಾನಿಸುತ್ತ ಕೇಳಿದೆ:
“ನಿಮ್ಮನ್ನೊಂದು ವೈಯಕ್ತಿಕ ಪ್ರಶ್ನೆ ಕೇಳಲೇ?”
“ಓಹೋ.”
“ನೀವೇಕೆ ಮದುವೆಯಾಗಿಲ್ಲ?”
“ಐ ಡೋಂಟ್ ನೋ. ಐ ವಸ್ ನೆವರ್ ಇನ್ ಎ ಪೊಸಿಷನ್ ಟು ಗೆಟ್ ಮ್ಯಾರೀಡ್!” ಎಂದು ನಕ್ಕುಬಿಟ್ಟರು.
ನನಗೆ ಕೈ ಬೀಸಿ, ತಮಗಾಗಿ ಕಾದಿದ್ದ ಕಲಾವಿದರನ್ನು ಸೇರಲು ಅವರು ರಸ್ತೆ ದಾಟಿದರು. ಮಳೆಗಾಲದ ಖುಷಿಯಲ್ಲಿ ಹುಚ್ಚಾಪಟ್ಟೆ ಬೆಳೆದು ಅರಳಿನಿಂತ ಮರಗಳನ್ನು ರಸ್ತೆಯ ಅಂದಚೆಂದಕ್ಕೆ ಹೊಂದುವಂತೆ, ಎತ್ತರವಾದ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕತ್ತರಿಸಿ ಮಟ್ಟಸ ಮಾಡುವ ಬೆಸ್ಟ್‌ನ (ಃesಣ) ವಿಚಿತ್ರ ವಾಹನ ರಸ್ತೆಯ ಕೊನೆಗೆ ಹಾಜರಾಗಿತ್ತು.
»AzÉ
40-50gÀ zÀ±ÀPÀUÀ¼À°è ¸Á«gÁgÀÄ PÀ£ÀßrUÀgÀÄ ªÀÄÄA¨ÉÊUÉ ºÉÆmÉÖ¥Ár UÁV
ºÉÆÃUÀÄwÛzÀÝgÀÄ. ¢£ÀªÉ¯Áè ºÉÆÃmÉ®ÄUÀ¼À°è zÀÄrzÀ ºÀÄqÀÄUÀgÀÄ gÁwæ ±Á¯ÉUÀ¼À°è
PÀ°vÀÄ ªÀÄÄAzÉ §AzÀÄ zÉÆqÀØ zÉÆqÀØ GzÀåªÀÄUÀ¼À£ÀÄß ¸Áܦ¹ Erà gÁdåzÀ J®èjUÉ GzÉÆåÃUÀ
¸À馅 ªÀiÁqÀÄwÛzÀÝgÀÄ. ªÀÄÄA¨ÉÊUÉ CªÀgÀ PÉÆqÀÄUÉ C¥ÁgÀ. PÀ¯É, ¸ÀA¸ÀÌöÈw, GzÀåªÀÄ, «eÁߣÀ »ÃUÉ
ªÀÄÄA¨ÉÊAiÀÄå°è J¯ÁèPÉëÃvÀæUÀ¼À®Æè ¸ÁzsÀ£É ªÀiÁr ¨sÁµÉ , gÁdåzÀ bÁ¥ÀÅUÀ¼À£ÀÄß
zÁn ªÀĺÁgÁµÀÖçzÀ°è ¸ÉßúÀ¢AzÀ ¸ÉÃj vÀªÀÄävÀ£ÀªÀ£ÀÆß G½¹PÉƼÀÄîwÛzÀÝgÀÄ.
ಅಂಥವರಲ್ಲಿ ಶ್ರೇಷ್ಠ ಕಲಾವಿದ ಕಮಲಾಕ್ಷ ಶೆಣೈ ಕೂಡಾ ಒಬ್ಬರು.
ನಾನು ಇಂದು ಮಧ್ಯಾಹ್ನ ಜಹಾಂಗೀರ್ ಆರ್ಟ್ ಗ್ಯಾಲರಿ ತಲುಪಿದಾಗ ಮುಂಬೈ ಮಳೆಗಾಲ ಮುಗಿದ ಎಲ್ಲಾ ಕುರುಹುಗಳೂ ಇದ್ದುವು. ಅಕ್ಟೋಬರ್ ಧಗೆ ಬೆವರಿಳಿಸುತ್ತಿತ್ತು. ಸುತ್ತಮುತ್ತಲಿನ ಗಿಡಮರಗಳು ಹಚ್ಚ ಹಸಿರಾಗಿದ್ದವು. ಆರ‍್ಟ್ ಪ್ಲಾಜಾ ಮತ್ತೆ ತೆರೆದಿತ್ತು.ಫುಟ್ ಪಾತಿನ ರೇಲಿಂಗಿಗೆ ಹೊಂದಿಸಿದ ಸ್ಟಾಂಡುಗಳ ಮೇಲೆ ಮೂರು ತರುಣ ಕಲಾವಿದರ ಚಿತ್ರಗಳು ತೂಗುತ್ತಿದ್ದುವು. ಅಲ್ಲಿನ ಮರದ ಕೆಳಗೆ ಹಾಕಿದ್ದ ಕುರ್ಚಿಯ ಮೇಲೆ, ಕಲಾವಿದರ ನಡುವೆ ಕಮಲಾಕ್ಷ ಶೆಣೈ ಕುಳಿತಿದ್ದರು. ಕಂದುಬಣ್ಣದ ಖಾದಿ ಕುರ್ತಾ, ಕರಿ ಪ್ಯಾಂಟಿನ ಗಡ್ಡದಾರಿ ಶೆಣೈರವರ ಕಣ್ಣುಗಳಲ್ಲಿನ ಯಾವಾಗಿನ ಹೊಳಪು, ತುಟಿಯಂಚಿನ ನಗೆ ಸ್ವಾಗತ ಬೀರಿದವು.
‘ನಿಮ್ಮ ಬಗ್ಗೆ, ಆರ‍್ಟ್ ಪ್ಲಾಜಾ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು. ಬನ್ನಿ ಹರಟೆ ಹೊಡೆಯೋಣ’ ಎಂದೆ. ‘ಓಹೋ’ ಎನ್ನುತ್ತಾ ಖುಷಿಯಿಂದ ಎದ್ದರು. ಎದುರಿಗೇ ಇರುವ ವೇ ಸೈಡ್ ಇನ್ ಗೆ ಹೋಗಿ ಕುಳಿತೆವು. ಪಕ್ಕಾ ಪಾರ‍್ಸಿ ವಾತಾವರಣದ, ಮೆಲುಮಾತಿನ, ಒಳ್ಳೆ ಅಭಿರುಚಿಯ ಆ ತಂಪು ಸ್ಥಳದಲ್ಲಿ ಹೆಚ್ಚು ಗಲಾಟೆಯಿರಲಿಲ್ಲ. ತೆರೆದ ಕಿಟಕಿಯ ಹಸಿರು ಗಿಡಗಳಾಚೆ ಮುಂಬೈ ಮಧ್ಯಾಹ್ನ ಬಸವಳಿದಿತ್ತು.
೧೯೫೨ರಲ್ಲಿ ‘ಮುಂಬೈಗೆ ಹೋಗಿ ಏನಾದ್ರೂ ಮಾಡೋಣ’ ಎಂದುಕೊಂಡು ಉಡುಪಿಯಿಂದ ಇಲ್ಲಿಗೆ ಬಂದವರು ಕಮಲಾಕ್ಷ ಶೆಣೈ. ನಂತರ ನೂತನ್ ಕಲಾಮಂದಿರದಲ್ಲಿ ಅಭ್ಯಾಸ. ಸ್ವಲ್ಪದಿನ ವಿದ್ಯುತ್ ಪರಿಕರಗಳ ಅಂಗಡಿಯಲ್ಲಿ ಕೆಲಸ. ನಂತರ ಕಲ್ಕತ್ತಾಗೆ ಪ್ರಯಾಣ. ಅಲ್ಲಿನ ಗೌವರ‍್ನಮೆಂಟ್ ಕಾಲೇಜ್ ಆಫ್ ಆರ‍್ಟ್ಸ್ ಸೇರಿಕೊಂಡವರು, ಕೋರ‍್ಸ್ ಮುಗಿಯುವ ಮೊದಲೇ ಬಿಟ್ಟಿದ್ದರು. ‘ಹ್ಯಾಡ್ ಟು ಗಿವ್ ಅಪ್ ಕಾಲೇಜ್ ನಾಟ್ ಟು ಗಿವ್ ಅಪ್ ಆರ‍್ಟ್, ಬಟ್ ಟು ಪರ‍್ಸೂ ಆರ‍್ಟ್!’
ನಂತರ ತಾವೇ ಸಾಧನೆಯಲ್ಲಿ ತೊಡಗಿದರು. ಮೊದಲು ಲೈನ್ಸ್ ಪರ್ಫೆಕ್ಟ್ ಮಾಡಿಕೊಳ್ಳಬೇಕಾಗಿತ್ತು. ೩ ವರ್ಷ ಬರಿಯ ರೇಖೆಗಳನ್ನು ಅಭ್ಯಸಿಸಿದೆ. ಬಣ್ಣಗಳನ್ನು ಮುಟ್ಟಲಿಲ್ಲ. ಮೊದಲ ವರ್ಷ ಯಾವ ಪರ್ಪಸ್ ಇಲ್ಲದೆ ಗೆರೆಗಳನ್ನು ಎಳೆದೆ. ನಂತರ ಆಬ್ಜೆಕ್ಟ್ಸ್‌ಗೆ ಮುಂದುವರಿದೆ. ನನ್ನ ಪ್ರೀತಿಯ ಸ್ಥಳಗಳೆಂದರೆ ತಬೇಲಾಗಳು. ಅಲ್ಲಿ ಹೋಗಿ ಎಮ್ಮೆ, ಹಸುಗಳನ್ನು ಸ್ಕೆಚ್ ಮಾಡುವುದು. ಮತ್ತೆ ಸಿಯೆಲ್ಡಾ ಸ್ಟೇಷನ್. ಅಲ್ಲಿ ಉತ್ತರ ಬಂಗಾಳದಿಂದ ಬಂದ ರೈಫ್ಯೂಜಿಗಳು ತಳ ಊರಿದ್ದರು. ಸುಮ್ಮನೆ ದಿನವೆಲ್ಲಾ ಬಿದ್ದುಕೊಂಡಿರುತ್ತಿದ್ದರು. ತುಂಬಾ “ಇಂಟರೆಸ್ಟಿಂಗ್ ಆಬ್ಜೆಕ್ಟ್ಸ್!” ಬರಿಯ ಪ್ರಖ್ಯಾತ ಕಲಾವಿದರಿಗೆ ಅವಕಾಶ ಕೊಡುತ್ತಿದ್ದ ಅಲ್ಲಿನ ಅಕಾಡೆಮಿ ಆಫ್ ಆರ್ಟ್ಸ್‌ನವರು, ಇವರ ಕೃತಿಗಳನ್ನು ಗಮನಿಸಿ, ಪ್ರದರ್ಶನ ಏರ್ಪಡಿಸಿದ್ದರು.
ಮುಂಬೈಗೆ ಮರಳಿದ್ದು ೫ ವರ್ಷಗಳ ನಂತರ. ಇಲ್ಲಿ ಬರುತ್ತಲೇ ಇಲ್ಲಿನ ತರುಣ ಕಲಾವಿದರ ಸ್ಥಿತಿ ಇವರನ್ನು ತಟ್ಟಿತು. ಬರಿಯ ಪ್ರತಿಭಾವಂತರಾಗಿದ್ದ ಉದಯೋನ್ಮುಖ ಕಲಾವಿದರಿಗೆ ದೊಡ್ಡ ಗ್ಯಾಲರಿಗಳನ್ನು ಬಾಡಿಗೆಗೆ ತೆಗೆದುಕೊಳ್ಳುವುದು ಸಾಧ್ಯವಿರುತ್ತಿರಲಿಲ್ಲ, ಆಗ ಮೊಳಕೆಯೊಡೆದ ಚಳವಳಿ “ರಿಪಲ್.” ಜಹಾಂಗೀರ್ ಆರ್ಟ್ ಗ್ಯಾಲರಿ ಹೊರಗಡೆ ಚಿತ್ರಗಳನ್ನು ಮಾರುವ ಪ್ರಯತ್ನ. ಆಗ ಶನಿವಾರ ಮಧ್ಯಾಹ್ನಗಳು ಗೆಳೆಯರಾದ ಜಯಂತ್ ಕಾಯ್ಕಿಣಿ, ಕುಮಾರ ಜೋಶಿ, ಗಜಾನನ ಉಪಾಧ್ಯಾಯ, ಶರದ್, ರಾವ್ ಬೈಲ್ ಮುಂತಾದವರು ಶೆಣೈರವರ ಸ್ಕೆಚ್‌ಗಳನ್ನು ಮಾರಲು ನಿಲ್ಲುತ್ತಿದ್ದುದು ನೆನಪಿದೆ.
‘ಈ ವಿಚಾರಕ್ಕೆ ಎಲ್ಲರ ಸಹಾನುಭೂತಿಯಿತ್ತು. ಆದರೆ ಕಲಾವಿದರು ಬೀದಿಗಿಳಿಯಲು ತಯಾರಿರಲಿಲ್ಲ. ಅದು ಮರ್ಯಾದೆಗೆ ಕಡಿಮೆಯಾದ ಮಾತಾಗಿತ್ತು. ಅಲ್ಲದೆ, ಆಗ ಅಲ್ಲೆಲ್ಲಾ ಭಿಕ್ಷುಕರು ಕುಳಿತಿರುತ್ತಿದ್ದರು. ತುಂಬಾ ಕೊಳಕಾಗಿರುತ್ತಿತ್ತು. ಮುನಿಸಿಪಾಲಿಟಿಗೆ ನಾವು “ಹಾಕರ‍್ಸ್ ಲೈಸೆನ್ಸ್ ಫೀ” ಕೊಡಬೇಕಾಗಿತ್ತು! ಆಗ ನನಗೆ ಇದನ್ನು ‘ಲೀಗಲೈಸ್’ ಮಾಡುವ ಅವಶ್ಯಕತೆ ಕಂಡು ಬಂದಿತು. ನಾನು ಟೌನಿನ ಮುನಿಸಿಪಲ್ ಕಮೀಷನರ್ ಎಸ್.ಎಸ್. ಟಿನೈಕರ್ ಅವರನ್ನು ಭೇಟಿಯಾದೆ. ಅವರ ಪ್ರತಿಕ್ರಿಯೆ ತುಂಬಾ ಅಚ್ಚರಿ, ಖುಷಿ ತಂದಿತು. ಹಿಂದೆಂದೂ ಕಂಡುಬರದ ಈ ವಿಚಾರವನ್ನು ಅವರು ಅತ್ಯಂತ ಉತ್ಸಾಹದಿಂದ ಸ್ವೀಕರಿಸಿದರು. ತಕ್ಷಣ ನನಗೆ ಪರ್ಮಿಷನ್ ಲೆಟರ್ ಟೈಪ್ ಮಾಡಿಸಿಕೊಟ್ಟರು! ಹಾಗೆ ಜನ್ಮ ತಾಳಿದ್ದು ಆರ್ಟ್ ಪ್ಲಾಜಾ.”
“ಆರ್ಟ್ ಪ್ಲಾಜಾ ಬರಿಯ ಗ್ಯಾಲರಿಯಲ್ಲ. ಇದು ಒಂದು ಚಳವಳಿ. ಇದರ ಗುರಿಯೆಂದರೆ ಪ್ರತಿಭಾವಂತರಾದ, ಆದರೆ ಧನಬಲ್ಲವಿಲ್ಲದ ಕಲಾವಿದರಿಗೆ ಪ್ರದರ್ಶನಗಳನ್ನು ಏರ್ಪಡಿಸಲು ಅವಕಾಶ ಕೊಡುವುದು. ನಾವು ಅದಕ್ಕಾಗಿ ಅವರಿಂದ ಒಂದು ಕಾಸೂ ತೆಗೆದುಕೊಳ್ಳುವುದಿಲ್ಲ. ಅಲ್ಲದೆ, ಚಿತ್ರಗಳನ್ನು ಸಾಮಾನ್ಯ ಜನರಿಗೆ ನಿಲುಕುವ ಬೆಲೆಯಿಟ್ಟು ಮಾರುವುದು. ಅವರಿಂದ ಕಲೆಯನ್ನು ಸರ್ವಸಾಮಾನ್ಯರಿಗೆ ಕೊಂಡೊಯ್ಯುವುದು.”
“ಆರ್ಟ್ ಪ್ಲಾಜಾ ಸ್ವೀಕೃತವಾಗಲು ಸಮಯ ಹಿಡಿಯಿತು. ಪ್ರಾರಂಭವಾದಾಗ ಅನೇಕ ಪ್ರಖ್ಯಾತ ಕಲಾವಿದರು “ಶೆಣೈ ಕಲೆಯನ್ನು ಬೀದಿಗೆಳೆದಿದ್ದಾರೆ” ಎಂದು ಬೈದರು. ಮೊದಮೊದಲು ತರುಣ ಕಲಾವಿದರು ಅಲ್ಲಿ ಪ್ರದರ್ಶಿಸಲು ಹಿಂಜರಿದರು. ನಂತರ ಕೆಲವರು “ನಮ್ಮ ಪೇಟಿಂಗ್‌ಗಳನ್ನು ಕಳಿಸುತ್ತೇವೆ. ಆದರೆ ನಾವು ಕೂಡುವುದಿಲ್ಲ” ಎಂದರು! ಈಗ ಅಕ್ಟೋಬರ್‌ನಿಂದ ಮಳೆಗಾಲದವರೆಗೂ ಪೂರ್ತಿ ಪ್ರದರ್ಶನಗಳಿದ್ದೇ ಇರುತ್ತದೆ. ಟಿನೈಕರ್ ಹಾಕರ‍್ಸ್ ಲೈಸನ್ಸ್ ಫೀ ಬಂದ್ ಮಾಡಿಸಿ, ಕಲಾವಿದರಿಗೆ ಸಲ್ಲಬೇಕಾಗಿದ್ದ ಗೌರವ ಕೊಡಿಸಿದರು. ಮುನಿಸಿಪಾಲಿಟಿ ಪ್ರದರ್ಶನಕ್ಕೆ ಬರುವ ಪೇಟಿಂಗ್‌ಗಳನ್ನು ಇಡಲು ಸ್ಥಳ ಕೊಟ್ಟರು. ಏಪ್ರಿಲ್ ೮೮ರಲ್ಲಿ ಮೊದಲ ಪ್ರದರ್ಶನ ಮಾಡಿದ್ದೆವು. ಪ್ರಯೋಗಕ್ಕಾಗಿ. ಅದು ಯಶಸ್ವಿಯಾದ ಮೇಲೆ ಆರ್ಟ್ ಪ್ಲಾಜಾದಲ್ಲಿ ಪ್ರದರ್ಶನಗಳು ಶುರುವಾಯಿತು. ಕಲೆಯನ್ನು ಪ್ರಮೋಟ್ ಮಾಡಲು ತುಂಬಾ ಸಂಸ್ಥೆಗಳಿವೆ. ನಮ್ಮ ಉದ್ದೇಶ ಕಲಾವಿದರನ್ನು ಪ್ರಮೋಟ್ ಮಾಡುವುದು.”
ಶೆಣೈ ಈಗ ಬದಲಾಗಿರುವ “ಆರ್ಟ್ ಸೀನ್” ಬಗ್ಗೆ ತುಂಬಾ ಕಳಕಳಿಯಿಂದ ಮುಂದುವರಿದರು. “೨೫ ವರ್ಷಗಳ ಹಿಂದೆ ಯಾರೂ ಪೇಟಿಂಗ್‌ಗಳನ್ನು ಕೊಳ್ಳುತ್ತಿರಲಿಲ್ಲ. ಆದರೆ ಈಗ ಸಂಸ್ಕೃತಿ ಬದಲಾಗಿದೆ. ದೊಡ್ಡ ಕಂಪೆನಿಗಳವರು, ಹೊಸ ಸಿರಿವಂತರು ಸಾವಿರಾರು ರೂಪಾಯಿ ಕೊಟ್ಟು ಕೊಳ್ಳುತ್ತಾರೆ. ಆದರೆ ಅವರು ಬೆಲೆ ನೋಡಿಕೊಳ್ಳುತ್ತಾರೆ. ಅವರೆಲ್ಲಾ ಆರ್ಟ್ ಪ್ಲಾಜಾದಿಂದ ಕೊಳ್ಳುವವರಲ್ಲ. ಈಗ ಕಲಾವಿದರೂ ಬದಲಾಗಿದ್ದಾರೆ. ತಮ್ಮ ಯಶಸ್ಸನ್ನು ಎಷ್ಟು ಪೇಟಿಂಗ್‌ಗಳು ಮಾರಾಟವಾದುವು ಎನ್ನುವುದರ ಮೇಲೆ ಅಳೆಯುತ್ತಾರೆ. ಈಗ ಅವರು ಸಾಮಾನ್ಯ ಜನರನ್ನು ತಲುಪಬೇಕು. ನಮ್ಮ ಮುಂದಿನ ಯೋಜನೆ ‘ಆರ್ಟ್ ಅಟ್ ಯುವರ್ ಡೋರ್ ಸ್ಟೆಪ್.’ ಹೌಸಿಂಗ್ ಸೊಸೈಟಿಗಳು, ಕಾಲೋನಿಗಳಲ್ಲಿ ಪ್ರದರ್ಶನಗಳಿಡಬೇಕು. ಇದಕ್ಕಾಗಿ ಬದ್ಧರಾದ ಜನರ ಸಹಾಯ ಬೇಕು. ಅದು ಕಷ್ಟ... ಇದಕ್ಕೆಲ್ಲಾ ಭದ್ರ ಬುನಾದಿ ಹಾಕಲು ಈಗ ಆರ್ಟ್ ಪ್ಲಾಜಾ ಆರ್ಟಿಸ್ಟ್ಸ್ ಅಸೋಸಿಯೇಷನ್ ಮಾಡಿಕೊಂಡಿದ್ದೇನೆ...”
ಇಷ್ಟು ವರ್ಷಗಳಿಂದ ತಮ್ಮ ತಪಸ್ಸನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಕಮಲಾಕ್ಷ ಶೆಣೈ ಅವರು ಒಂಟಿಯಾಗಿ ದೊಂಬಿವಿಲಿಯಲ್ಲಿ ವಾಸಿಸುತ್ತಾರೆ. “ನಾನು ೧೪ ವರ್ಷದಿಂದ ಈ ಮನೆಯಲ್ಲಿ ವಾಸಿಸುತ್ತೇನೆ. ಆ ಮನೆಗೆ ಹೋದಾಗ ತಿಂಗಳಿಗೆ ೪೫ ರೂಪಾಯಿ ಬಾಡಿಗೆ ಕೊಡುತ್ತಿದ್ದೆ. ಮನೆಯ ಮಾಲೀಕ ಗಜಾನನ ಅಂಬೋಮ್ಹಾತ್ರೆ. ಓದು-ಬರಹ ಬಾರದ ಮುಗ್ಧ. ಬಿಲ್ಡಿಂಗಿನ ಬೇರೆಲ್ಲರಿಗೂ ಬಾಡಿಗೆ ಹೆಚ್ಚು ಮಾಡಿದಾಗಲೂ ನನಗೆ ಏರಿಸುತ್ತಿರಲಿಲ್ಲ. ಅವರೆಲ್ಲಾ ಹಾಗೇಕೆಂದು ಕೇಳಿದರೆ “ಅವನೊಬ್ಬ ಸನ್ಯಾಸಿ. ನೀವೂ ಹಾಗೇ ಇರಿ. ನಿಮಗೂ ಜಾಸ್ತಿ ಮಾಡೊಲ್ಲ” ಅಂತಿದ್ದ; ಆರ್ಟ್ ಪ್ಲಾಜಾ ಪ್ರಾರಂಭವಾದಾಗ ಅದರ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ ವಿವರಗಳು ಬಂದಿದ್ದವು. ಒಂದು ಮರಾಠಿ ಪತ್ರಿಕೆಯಲ್ಲಿ ನನ್ನ ಫೋಟೋ ನೋಡಿ, ಯಾರಿಂದಲೋ ಓದಿಸಿ ಅದೇನೆಂದು ತಿಳಿದುಕೊಂಡ. ರಾತ್ರಿ ಮನೆಗೆ ಬಂದವನೇ ನನ್ನನ್ನು ಕರೆಸಿ “ನೀವು ಇನ್ನು ಮೇಲೆ ಬಾಡಿಗೆ ಕೊಡಕೂಡದು. ನಿಮ್ಮಂಥವರಿಂದ ಬಾಡಿಗೆ ತೆಗೆದುಕೊಳ್ಳಲಾರೆ” ಎಂದು ಹೇಳಿಬಿಟ್ಟ. ಅಂದಿನಿಂದ ನನ್ನಿಂದ ಒಂದು ಪೈಸೆ ತೆಗೆದುಕೊಂಡಿಲ್ಲ. ಈಗಲೂ ಇಂಥವರು ಇದ್ದಾರೆ. ಅವರು ಬದಲಾಯಿಸಿಲ್ಲ. ಹಿಂದೆ ಕಲಾವಿದರಿಗೆ, ಸಾಹಿತಿಗಳಿಗೆ ಸಂಗೀತಗಾರರಿಗೆ ಸಮಾಜದಲ್ಲಿ ವಿಶೇಷ ಸ್ಥಾನವಿತ್ತು. ಗೌರವವಿತ್ತು. ಏಕೆಂದರೆ ಅಶರು ಎಲ್ಲರಿಗಿಂತ ಬೇರೆಯಾಗಿ ಬದುಕುತ್ತಿದ್ದರು. ಈಗ ೯೯% ಕಲಾವಿದರು ಬಿಸಿನೆಸ್‌ಮೆನ್ ಆಗಿಬಿಟ್ಟಿದ್ದಾರೆ. ಅವರೂ ಎಲ್ಲರಂತೆಯೇ ಬದುಕುವುದರಿಂದ ಆ ಸ್ಥಾನ ಕಳೆದುಕೊಂಡು ಬಿಟ್ಟಿದ್ದಾರೆ...”
ಅವರೊಡನೆ ಮಾತಾಡುತ್ತಿದ್ದಾಗ ಸಮಯ ಹೋದದ್ದೇ ತಿಳಿಯಲಿಲ್ಲ. ಹೊರಡುವ ಮೊದಲು ಶೆಣೈ ಅವರನ್ನು ಅನುಮಾನಿಸುತ್ತ ಕೇಳಿದೆ:
“ನಿಮ್ಮನ್ನೊಂದು ವೈಯಕ್ತಿಕ ಪ್ರಶ್ನೆ ಕೇಳಲೇ?”
“ಓಹೋ.”
“ನೀವೇಕೆ ಮದುವೆಯಾಗಿಲ್ಲ?”
“ಐ ಡೋಂಟ್ ನೋ. ಐ ವಸ್ ನೆವರ್ ಇನ್ ಎ ಪೊಸಿಷನ್ ಟು ಗೆಟ್ ಮ್ಯಾರೀಡ್!” ಎಂದು ನಕ್ಕುಬಿಟ್ಟರು.
ನನಗೆ ಕೈ ಬೀಸಿ, ತಮಗಾಗಿ ಕಾದಿದ್ದ ಕಲಾವಿದರನ್ನು ಸೇರಲು ಅವರು ರಸ್ತೆ ದಾಟಿದರು. ಮಳೆಗಾಲದ ಖುಷಿಯಲ್ಲಿ ಹುಚ್ಚಾಪಟ್ಟೆ ಬೆಳೆದು ಅರಳಿನಿಂತ ಮರಗಳನ್ನು ರಸ್ತೆಯ ಅಂದಚೆಂದಕ್ಕೆ ಹೊಂದುವಂತೆ, ಎತ್ತರವಾದ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕತ್ತರಿಸಿ ಮಟ್ಟಸ ಮಾಡುವ ಬೆಸ್ಟ್‌ನ (ಃesಣ) ವಿಚಿತ್ರ ವಾಹನ ರಸ್ತೆಯ ಕೊನೆಗೆ ಹಾಜರಾಗಿತ್ತು.
-ಉಮಾ ರಾವ್. (ಮುಂಬೈ ಡೈರಿ, ಲಂಕೇಶ್ ಪತ್ರಿಕೆ,೧೯೯೪)
ಚಿತ್ರ: ಶೆಣೈ ತಮ್ಮನ್ನು ತಾವು ಕಂಡಂತೆ
Subscribe to:
Posts (Atom)