Monday, December 1, 2014

ರೋಡೋಡೆಂಡರಾನ್- ನನ್ನದೊಂದು ಸಣ್ಣ ಕತೆ


**

gÉÆÃqÉÆÃqÉAqïgÁ£ï


ಇಟ್ಸ್ ಬ್ಯೂಟಿಫ಼ುಲ್...ಅಂಡ್ ಸೋ ವೆರಿ ಬ್ರಿಟಿಶ್.
UɼÀw dÄ» ¹£Áí ºÀuÉAiÀÄ ªÉÄÃ¯É DªÀj¹ §gÀÄwÛzÀÝ PÀ¥ÀÄà UÀÄAUÀÄgÀÄ PÀÆzÀ®£ÀÄß ªÀiÁå¤PÀÆågï ªÀiÁrzÀ vÀ£Àß ¤ÃN¼À ¨ÉgÀ¼ÀÄUÀ½AzÀ »AzÉ ¸Àj¸ÀÄvÁÛ CgÉUÀtÄÚ ªÀÄÄaÑ, vÀ¯É PÉÆAZÀ »AzÉ C¤¹, §AUÁ° gÁUÀzÀ°è vÉUÉ¢zÀÝ GzÁÎgÀ CPÀëgÀ±ÀB ¤dªÉAzÀÄ ±Á°¤UÉ CjªÁzÀzÀÄÝ PÁ¯ÁÌzÀ°è½zÀÄ ²ªÀiÁèUÉ ºÉÆÃUÀĪÀ »¯ï-mÉæöÊ£ï ºÀvÀÛzÁUÀ¯ÉÃ. §ÈºÀvÀàªÀðvÀUÀ¼À ªÀÄzsÉå ºÁ«£ÀAvÉ ZÀ°¸ÀÄwÛzÀÝ ¤Ã° gÉÊ°£À°è ¥ÀæAiÀiÁt ªÀiÁqÀÄwÛzÁÝUÀ ¨ÉÃgÉ zÉñÀPÉÌ, ¨ÉÃgÉ AiÀÄÄUÀPÉÌà ºÉÆÃUÀ C£ÀĨsÀªÀ. ¦PÀÑgï ¥ÉÆøïÖPÁrð£À°è PÀArzÀÝAxÁ aPÀÌ ZÉÆPÀÌ PÀAzÀÄ ºÀAa£À ¸ÉÖñÀ£ÀÄßUÀ¼ÀÄ. CªÀÅUÀ¼À ¸ÀÄvÀÛ gÁ²gÁ² ºÀÆ ¸ÀÄj¸ÀÄwÛgÀĪÀ ºÉ¸ÀgÀÄ w½AiÀÄzÀ ºÀÆVqÀ §½îUÀ¼ÀÄ. »A¢£À ±ÀvÀªÀiÁ£ÀzÀ ¢Ã¥ÀzÀ PÀA§UÀ¼ÀÄ. J¯Éè®Æè ¥ÉÊ£ï, NPï, zÉêÀzÁgÀÄ ªÀÄgÀUÀ¼ÀÄ. CzÀgÀ ªÀÄzsÉå ªÀiË£ÀªÁV «ºÀj¸ÀÄwÛzÀÝ vÀÄAqÀÄ ªÉÆÃqÀUÀ¼ÀÄ. ¸ÉÖõÀ£ÀÄßUÀ¼À°è UÀzÀÝ®ªÀ©®è. ªÀiÁgÁlUÁgÀgÀ PÀÆV®è. d£À dAUÀĽ¬Ä®è, dUÀ¼À«®è. §tÚ §tÚzÀ ¸Éélgï-ªÀÄ¥sÀèj£ÀªÀgÀÄ ªÀiÁgÀÄwÛzÀÝ ©¹ ©¹ ZÁAiÀiï, WÀªÉÄä£ÀÄߪÀ PÀmÉèmï. MAzÀÄ ¸ÉÖõÀ¤£Àß°è ºÀwÛ ¤AvÉà ¥ÀæAiÀiÁt ªÀiÁr ªÀÄÄA¢£ÀzÀgÀ°è E½AiÀÄĪÀ »ªÀiÁZÀ°UÀ¼ÀÄ. 5 UÀAmÉUÀ¼ÀÄ PÀ¼ÉzÀzÉÝà w½AiÀÄzÉ ²ªÀiÁèzÀ°è §A¢½zÁUÀ ±Á°¤UÉ ¤gÁ¸ÉAiÉÄà D¬ÄvÀÄ. EµÀÄÖ ¨ÉÃUÀ ªÀÄÄVzÀÄ ºÉÆìÄvÉÃ? »AzÉAiÉÄà ªÀÄÄA¨ÉÊ£À UÀzÀÝ®UÀ¼É¯Áè ªÀÄ£À¹ì£À°è ¸ÀÛ§ÞªÁV ¤±Àå§Þ ¥À¸Àj¹vÀÄ.
¥ÀæwÃPï eÉÆvÉVgÀ¨ÉÃPÁVvÀÄÛ… gÉÊ°¤A¢½AiÀÄÄwÛzÀÝAvÉAiÉÄà CªÀ£ÀÄ ºÉýzÀ ªÀiÁvÀÄ £É£À¥Á¬ÄvÀÄ. ``ªÀÄ£ÉêÀgÉUÀÆ £ÀqÉzÀÄ ºÉÆÃUÀ®Ä vÀÄA¨Á ZÉ£ÁßVgÀÄvÉÛ. MAzÀÄ UÀAmÉ DUÀ§ºÀÄzÀÄ. ºÀ¼Àî-wlÄÖ. DzÀgÉ ¥ÀæAiÀiÁtzÀ DAiÀiÁ¸ÀzÀ £ÀAvÀgÀ PÀµÀÖ. mÁåQì vÀUÉÆA©qÀÄ. zÀÄqÀÄØ eÁ¹Û PÉüÁÛgÉ. ¥ÀgÀªÁV®è… ¸ÀÄwÛ PÀµÀÖ, mÁåPÀì vÀUÉÆA©qÀÄ. zÀÄqÀÄØ eÁ¹Û PÉüÁÛgÉ ¥ÀgÀªÁV®è… ¸ÀÄwÛ ºÉÆÃUÀ¨ÉÃPÀÄ. Hj£À ªÀÄzsÉå ªÉ»PÀ¯ïì ©qÀĪÀÅ¢®è… ºÉÆgÀ§gÀÄvÀÛ¯Éà ``ºÉÆÃmÉ¯ï ¨ÉÃPÉÃ’’ JAzÀÄ ªÀÄwÛzÀªÀgÀ£ÀÄß »AzÉ vÀ¼ÀÄîvÁÛ `SÁ£ï M§â¤UÉ ¸ÁªÀiÁ£ÀÄ JwÛPÉƼÀî®Ä ºÉýzÀ¼ÀÄ ±Á°¤.
``AiÀiÁªÀ ºÉÆÃmÉ¯ï ªÉÄêÀiï¸Á¨ï?’’
``¯ÁAUïªÀÅqïUÉ ºÉÆÃUÀ¨ÉÃPÀÄ. C°è £ÀªÀÄä ªÀÄ£É EzÉ…
``vÀÄA¨Á zÀÆgÀ,,, ¤ÃªÀÅ  »AzÉAzÁzÀgÀÆ §AzÀÄ¢ÝÃgÁ?
C£ÀĪÀiÁ¤¹zÀ¼ÀÄ ±Á°¤. EªÀ¤UÉ ºÉüÀ§ºÀÄzÉà vÁ£ÀÄ ªÉÆzÀ® ¨Áj E°èUÉ §gÀÄwÛgÀĪÀÅzÉAzÀÄ?
``£ÀqÀzÉà ºÉÆÃUÉÆÃt… ¤zsÁ£ÀªÁV ºÉÆÃzÀgÁ¬ÄvÀÄ’’ JAzÀµÉÖà ºÉýzÀ¼ÀÄ.
C°è£À ±ÀĨsÀæ ºÀªÉ, J¯Éè®Æè PÀAUÉƽ¸ÀÄwÛzÀÝ ºÀZÀÑ ºÀ¹gÀÄ CªÀ¼À 2 ¢£ÀzÀ ¥ÀæAiÀiÁtzÀ DAiÀiÁ¸ÀªÀ£ÀÄß PÀëtzÀ°è ºÉÆÃUÀ¯Ár¹, ºÉƸÀ GvÁìºÀ vÀÄA©¹vÀÄ. ¨É£Àß ªÉÄÃ¯É ¸ÀÆmïPÉøÀÄUÀ¼À£ÀÄß ºÉÆvÀÄÛ CªÀÅ eÁgÀzÀAvÉ vÀ¯É ªÉÄðAzÀ ºÁzÀÄ ºÉÆÃzÀ ¥ÀnÖ¬ÄAzÀ ¨sÀzÀæ¥Àr¹ ºÉÆgÀqÀ®Ä vÀAiÀiÁgÁzÀ SÁ£ï.
``ªÉÄêÀiï¸Á¨ï, ¤zsÁ£ÀªÁV ºÉÆÃUÉÆÃt… E¯Éèà ZÁAiÀiï ¹UÀÄvÉÛ… ªÉÆzÀ®Ä ¨ÉÃPÁzÀgÉ PÀÄrzÀÄ £ÀAvÀgÀ ºÉÆgÀqÉÆÃt…’’ ªÀÄÄA¨ÉÊ£À PÀÆ°AiÀĪÀgÀ »AzÉ Nr Nr C¨sÁå¸ÀªÁVzÀÝ ±Á°¤UÉ F ¸ËºÁzÀð ºÉƸÀzÀÄ. ¥ÀæwÃPï ºÉýgÀ°®èªÉàಇಟ್ಸ್ ಆಲ್ ಸೋ ರೆಫ಼್ರೆಶಿಂಗ್...ಯು ಮಸ್ಟ್ ಸೀ ಇಟ್ ಟು ಬಿಲೀವ್ ಇಟ್ JAzÀÄ. zÁ¨sÁ MAzÀgÀ ªÀÄÄAzÉ ¤AvÀÄ JgÀqÀÄ PÀ¥ï ZÁAiÀiï vÀj¹, MAzÀ£ÀÄß SÁ£ïUÉ PÉÆlÄÖ, MAzÀ£ÀÄß vÁ£ÀÄ ¤zsÁ£ÀªÁV PÀÄrAiÀÄ vÉÆqÀVzÀ¼ÀÄ. ©¹ ©¹ ¸ÉàµÀ¯ï ZÁAiÀiï ªÀÄÄVAiÀÄĪÀ ºÉÆwÛUÉ CªÀ½UÉ ºÉƸÀ ZÉÃzsÀvÀ£À §AzÀAvÁVvÀÄÛ. ºÉÆgÀqÀĪÀ ªÀÄÄAZÉ SÁ£ï ªÀÄvÉÆÛªÉÄä JZÀÑj¹zÀ. ``E®è vÀÄA¨Á KgÀÄ-vÀUÀÄÎ-C¨sÁå¸À«®èzÀªÀjUÉ PÀµÀÖ…’’
ºÁUÉAiÉÄà ¸ÀÄvÀÛªÀÄÄvÀÛ ªÉÄÃ¯É PɼÀUÉ ¤AwzÀÝ ªÀÄ£ÉUÀ¼ÀÄ, ºÉÆÃmɯïUÀ¼ÀÄ, PÀlÖqÀUÀ¼À ªÉÄÃ¯É PÀtÄÚ ºÁ¬Ä¸ÀÄvÁÛ ºÉeÉÓ ºÁQzÀAvÉ SÁ£ï CªÀ½UÉ MAzÉÆAzÀÄ eÁUÀzÀ §UÉÎAiÀÄÆ ¸ÁégÀ¸ÀåPÀgÀ «ªÀgÀUÀ¼À£ÀÄß PÉÆqÀÄvÁÛ §AzÀ. ``£ÉÆÃr EzÀÄ jeï… Hj£À ªÀÄzsÀåzÀ°èzÉ. JµÉÆÖà ¹£ÉªÀiÁ ±ÀÆnAUï DVzÉ… ¥ÀPÀÌzÀ¯Éèà ªÀiÁ¯ï EzÉ… zÉÆqÀØ ±Á¦AV£À eÁUÀ… ©qÀAiÀiÁ ±Á¯ï, ¸Éélgï J¯Áè ¹UÀÄvÉÛ £ÉÆÃr… £Á¼É £ÁrzÀÝgÀ ºÁUÉ £ÉÆÃrÛÃgÀ¯Áè… EzÀÄ E¸ÉÌAqÀ¯ï ¥Á¬ÄAmï…’’
``K£ÀÄ…’’ CxÀðªÁUÀ°®è ±Á°¤UÉ DUÀ ¥ÀPÀÌzÀ¯Éèà EzÀÝ UÉÆÃqÉAiÀÄ ªÉÄÃ¯É ¥ÉÊAmï ªÀiÁrzÀ §tÚzÀ CPÀëgÀUÀ¼ÀÄ PÀAqÀÄ §A¢vÀÄ. ``¸ÁÌöåAqÀ¯ï ¥Á¬ÄAmï.’’
``¸ÁÌöåAqÀ¯ï ¥Á¬ÄAmï?’’ CªÀ¼ÀÄ CªÀ£ÀvÀÛ CZÀÑj¬ÄAzÀ £ÉÆÃrzÀ¼ÀÄ.
``£ÉÆÃr. »AzÉ CAUÉæÃeï ¯ÉÆÃUï EzÀÝ PÁ®zÀ°è £ÀªÀÄä gÁdPÀĪÀiÁgÀ£ÉƧâ CªÀgÀ ºÀÄqÀÄVAiÉƧâ¼À£ÀÄß ®ªï ªÀiÁrzÀÝ£ÀAvÉ. CªÀgÀ ªÀÄzÀĪÉUÉ M¦àUÉ ¹UÀ°®èªÀAvÉ. DUÀ CªÀj§âgÀÆ AiÀiÁjUÀÆ w½AiÀÄzÀAvÉ ¨sÉÃnAiÀiÁV EzÉà eÁUÀ¢AzÀ NrºÉÆÃzÀgÀAvÉ… FUÀ ¢£Á ¸ÀAeÉ Hj£À°è ¸ÉßûvÀgÀÄ ¨sÉÃnAiÀiÁUÀ¨ÉÃPÁzÀgÉ E°è ¸ÉÃgÀÄvÁÛgÉ…’’
JµÀÄÖ gÉÆêÀiÁåAnPï DVzÉ. ¥ÀæwÃPï£ÉÆqÀ£É E¯Éè¯Áè PÉÊ »rzÀÄ ¸ÀÄvÁÛqÀ®Ä E£ÀÆß JµÀÄÖ PÁAiÀĨÉÃPÀÄ… ¥ÀPÀÌzÀ°è ºÁzÀÄ ºÉÆÃzÀ PÀÄzÀÄgÉ ¸ÀªÁgÀ¤AzÀ ¨ÉaÑzÀ¼ÀÄ ±Á°¤. §tÚ§tÚzÀ ªÀÅ®£ï §mÉÖUÀ¼ÀÄ vÉÆlÖ d£À. ¦PÀÑgï ¥ÉÆøïÖPÁqïðUÀ¼À£ÀÄß ªÀiÁgÀĪÀªÀgÀÄ. ¸ÉÊmï ¹Ã¬ÄAUï lÆgïUÀ½UÉ nPÉmï PÉÆqÀĪÀªÀgÀÄ. §¸ï-mÁåQìAiÀĪÀgÀÄ, PÀÄzÀÄgÉ ¸ÀªÁgÀgÀÄ, eÉÆvÉUÉ ZÁmï, L¸ïQæÃA CAUÀrUÀ¼ÀÄ. ºÀvÀÄÛvÁÛ E½AiÀÄÄvÁÛ gÀ¸ÉÛ ªÀÄÄAzÀĪÀj¬ÄvÀÄ.
``£ÉÆÃr, EzÀÄ DPÉèAqï ºË¸ï-ºÀÄqÀÄVAiÀÄgÀ ±Á¯É. F gÀ¸ÉÛ PÉ£Ér ºË¸ïUÉ ºÉÆÃUÀÄvÉÛ. DAUÉæÃeï D¦ü¸Àgï M§â ²ªÀiÁèzÀ°è ªÉÆzÀ®Ä PÀnÖzÀ ªÀÄ£É. EwÛÃa£À »ªÀÄ¥ÁvÀzÀ°è AiÀiÁgÉÆà »Ãlgï ªÀÄgÉvÀÄ, ¨ÉAQ ©zÀÄÝ ¸ÀÄlÄÖ ºÉÆìÄvÀÄ… CAxÁ »ªÀÄ¥ÁvÀ 100 ªÀµÀð¢AzÀ DVgÀ°®èªÀAvÉ ªÉÄêÀiï¸Á¨ï… Qæ¸ïªÀĸï£À°è »ªÀĩüÀĪÀÅzÀ£ÀÄß £ÉÆÃqÀ®Ä ¢°è, ZÀA¢ÃWÀqÀ¢AzÀ §AzÀ d£À PÀAUÉlÄÖ ºÉÆÃzÀgÀÄ… J¯Éè®Æè 6-7 Cr ¸ÉÆßÃ… PÀgÉAmï E®è. ¤Ãj®è. ¨ÉAQ PÁ¸À®Ä ¸ËzÉ E®è… JµÀÄÖ d£À xÀAr¬ÄAzÀ ¸ÀvÀÛgÀÄ… JµÀÄÖ d£À ¤Ãj®èzÉ §gÀ¥sï ¦¥sÀįïPÉà ¥Á¤ ¦ÃAiÉÄÃ… ©ÃªÀiÁj §AzÀÄ ¸ÀvÀÛgÀÄ… ºÉÆgÀVAzÀ §AzÀ ©¹£É¸ï d£À MAzÀÄ PÀ¥ï ZÁAiÀiïUÉ £ÀÆgÁgÀÄ gÀÆ¥Á¬Ä vÉvÀÄÛ… PÉÊ SÁ°AiÀiÁV »ªÀÄzÀ°è ºÀÆvÀÄ ºÉÆÃzÀ PÁgÀÄUÀ¼À£ÀÄß DgÀPÉÌ ªÀÄÆgÁV ªÀiÁj, E£ÉÆßAzÀÄ ¨Áj §gÀĪÀÅ¢®èªÉAzÀÄ ±Á¥À ºÁQ ºÉÆÃzÀgÀÄ…’’
``M¼Éîà UÉÊqï ªÀiÁvÁrzÀ ºÁUÉ ªÀiÁvÁrÛÃAiÀįÁè…’’
``£ÀªÀÄä HjUÉ §gÀĺÉÆÃUÀĪÀ ¤ªÀÄäAxÉÆÃjUÉ £ÁªÉ¯Áè ºÉýzÉæ RĶAiÀiÁUÀÄvÉÛ £ÉÆÃr…’’
SÁ£ï ªÀiÁvÁqÀÄvÀÛ¯Éà £ÀqÉ¢zÀÝ. ±Á°¤ PÀtÚgÀ½¹ ªÉÄÊ ªÀÄgÉvÀÄ ¸ÁVzÀ¼ÀÄ. ºÁUÉà lÆ- gÀƪÀiï- QZÀ£ï, qÀ¨ÁâªÁ¯Á, 8 13 ¯ÉÆÃPÀ¯ï, C«ÄÑ ªÀÄÄA¨ÉÊ… zÀÆgÀ ¸Àj¬ÄvÀÄ. d£ÀdAUÀĽ, ªÀiÁgÀÄPÀmÉÖ »AzÁV «±Á® PÁA¥ËAqÀÄUÀ¼À ªÀÄzsÉå PÀnÖzÀÝ §AUÀ¯ÉUÀ¼À £ÀqÀÄªÉ gÀ¸ÉÛ ¸ÁUÀvÉÆqÀVvÀÄ. ºÁUÉà ºÀZÀÑ ºÀ¹gÁzÀ zÀlÖ ¥ÉÊ£ï, NPï, zÉêÀzÁgÀÄUÀ¼ÀÄ ªÀÄzsÉå PÀuÉÆÚÃr¸ÀÄvÀÛ £ÀqÉAiÀÄÄwÛzÀÝ ±Á°¤ CªÁPÁÌzÀ¼ÀÄ… CzÉ®èzÀgÀ £ÀqÀÄªÉ UÀjUÉzÀj ¤AwzÀÝ MAzÀÄ ªÀÄgÀzÀ vÀÄA¨Á PÀqÀÄPÉA¥ÀÄ ºÀÆUÀ¼ÀÄ… CzÉÃPÉÆà EzÀÄ CªÀ½UÉ «avÀæªÉ¤¹vÀÄ. D ªÀÄgÀªÀ£Éßà ¢nÖ¸ÀÄvÁÛ CªÀ¼ÀÄ ¤AwzÀÝ£ÀÄß £ÉÆÃr SÁ£ï ºÉýzÀ ``ªÉÄêÀiï¸Á¨ï, EzÀÄ gÉÆÃqÉÆÃqÉAqïgÁ£ï ªÀÄgÀ… F ºÀÆUÀ¼ÀÄ CAUÉæÃeï ¯ÉÆÃUïUÉ vÀÄA¨Á ¦æÃwAiÀÄAvÉ… EAxÁ ªÀÄgÀUÀ¼ÀÄ ²ªÀiÁè vÀÄA§ EªÉ… JµÉÆÖà ¸ÀªÀiÁgÀA¨sÀUÀ¼À°è ¥sËf£ÀªÀgÀÄ gÉÆÃqÉÆÃqÉAqï gÁ£ï ºÀÆUÀÄZÀÒUÀ¼À£ÀÄß PÀÆ PÉÆqÁÛgÉ…’’
ºÁUÉà gÉÆÃqÉÆÃqÉAqïgÁ£ï ªÀÄgÀ¢AzÀ CªÀ¼À zÀ馅 ¸ÀjzÀAvÉ »AzÉAiÉÄà PÀAqÀÄ §A¢vÀÄ »ªÀIJRgÀ. CªÀ¼À JzÉ §rvÀ vÀ¦àvÀÄ. vÁ£ÀÄ §zÀÄPɯÁè PÁ¢zÀÄÝ EzÀPÉÆÌøÀÌgÀªÉà J¤¹vÀÄ.
``EzÉà ¯ÁAUïªÀÅqï… ¤ªÀÄä ºÀwÛgÀ CqÉæ¸ï EzÉAiÉÄÃ…’’
CªÀ¼ÀÄ ¥À¹ð¤AzÀ CqÉæ¸ï aÃn vÉUÉzÀÄPÉÆlÖ¼ÀÄ. ¥ÀPÀÌzÀ¯Éèà EzÀÝ qÀ§âzÀAUÀrAiÀĪÀ£À eÉÆvÉ 5 ¤«ÄµÀ ªÀiÁvÁr §AzÀÄ DvÀ¤AzÀ ``E¯Éèà £ÉÆÃr. F QgÀÄzÁjAiÀÄ PÉÆ£ÉUÉ PÁt¸ÀÄwÛzÉAiÀįÁè… CzÉà ªÀÄ£É..’’
¥ÀÄlÖ ºÀ¹gɯÉUÀ¼À ªÀÄļÀÄVqÀzÀ ¨ÉÃzÀ°AiÀÄ ªÀÄzsÉå ºÁzÀÄ ºÉÆÃzÀ ºÁ¢AiÀÄ°è E½eÁj£ÀÄzÀÝPÀÆÌ £ÀqÉzÀÄ ºÉÆÃzÁUÀ vÉgÉzÉà EzÀÝ ªÀÄgÀzÀ ºÀ¹j£À UÉÃlÄ, CzÀgÁZÉ ZÁaPÉÆArzÀÝ ¨ÉlÖzÀ vÀÄ¢AiÀÄ°èzÀÝ ªÀÄgÀ-UÁf£À ºÀ¼ÉAiÀÄ PÁ®zÀ ªÀÄ£É PÀAqÀÄ §A¢vÀÄ. UÉÃn£À ¥ÀPÀÌzÀ¯Éèà ¸Àé®à §tÚUÉlÖ ªÀÄ£ÉAiÀÄ ºÉ¸Àj£À ¥sÀ®PÀ gÉÆÃqÉÆÃqÉAqïgÁ£ï.’’
``N… F ªÀÄ£É ºÉ¸ÀgÀÆ gÉÆÃqÉÆÃqÉAqïgÁ£ï’’ ±Á°¤ GzÀÎj¹zÀ¼ÀÄ.
``ºÁA ªÉÄêÀiï¸Á¨ï… ºÀ¼Éà ªÀÄ£É £ÉÆÃr… »AzÉ AiÀiÁgÉÆà DAUÉæÃeï D¦üøÀgÀ£ÀzÁV¢ÝgÀ¨ÉÃPÀÄ… CªÀgÉà EnÖgÀ¨ÉÃPÀÄ ºÉ¸ÀgÀÄ…’’
DzÀgÉ ¥ÀæwÃPï §jAiÀÄ £ÀA§gï PÉÆnÖzÀÝ£À¯Áè… ªÀÄ£ÉAiÀÄ ºÉ¸ÀgÀÄ §jAiÀÄĪÀÅzÀÄ ªÀÄgÉwgÀ¨ÉÃPÀÄ… ºÉýzÀÝಯೂ ವಿಲ್ ರಿಅಲೈಜ಼್ ಹೌ ಲಕಿ ವಿ ಆರ್ ಒನ್ಸ್ ವಿ ಗೋ ದೇರ್.
UÉÃn¤AzÀ ªÀÄ£ÉAiÀĪÀgÉUÀÆ ¥ÀÄlÖ PÀ®ÄèUÀ¼ÀÄ ºÁ¹zÀÝ PÁ®ÄzÁj. «±Á®ªÁzÀ PÁA¥ËAqÀÄ. ¸ÀÄvÀÛ®Æ ºÀ¹gÀÄ ªÀÄļÀÄî VqÀUÀ¼À ¨Éð. J¯Éè®Æè ºÉZÀÄÑ UÀªÀÄ£À PÉÆqÀĪÀªÀj®èzÉ PÁqÀÄPÁqÁV ¨É¼ÉzÀÄPÉÆArzÀÝ ºÀÆVqÀUÀ¼ÀÄ. CªÀÅUÀ¼À°è ©½, PÉøÀj, ¤Ã°, ºÀ¼À¢ ºÀÆUÀ¼ÀÄ. £É®zÀ ªÉÄÃ¯É ºÁ¹ ºÉÆÃVzÀÝ ºÀ¹gÀÄ ºÀÄ°è£À £ÀqÀĪÉAiÀÄÆ ¹A¥Àr¹zÀAvÉ ¥ÀÄlÖ ¥ÀÄlÖ ºÀÆUÀ¼ÀÄ. ªÀÄgÀzÀ¯Éèà PÀnÖzÀÝ ªÀÄ£É, vÀÄA§ UÁf£À QlQ ¨ÁV®ÄUÀ¼ÀÄ, ¥ÉÆÃnðPÉÆÃzÀ ªÉÄÃ¯É ºÀ©âzÀÝ «avÀæ ªÀAiÉÆïÉmï §tÚzÀ ºÀÆ §½î, §ÈºÀzÁPÁgÀzÀ ¨ÁV® ªÉÄÃ¯É PÀ¥ÀÄà wgÀÄVzÀÝ »vÁÛ¼ÉAiÀÄ ¥sÀ®PÀ. CzÀgÀ ªÉÄÃ¯É PÉwÛzÀÝ ``eÁeïð ªÉ¸ïÖ’’ JA§ ºÉ¸ÀgÀÄ. ªÀÄ£ÉAiÀÄ E£ÉÆßAzÁZÉ ¥Àæ¥ÁvÀzÀvÀÛ ZÁaPÉÆArzÀÝ vÀÄ¢UÉ MAzÀÄ ¥ÀÄlÖ ªÀÄgÀzÀ UÉÃlÄ. C°èAzÀ PÀtªÉUÉ E½zÀÄ ºÉÆÃzÀ PÀrzÁzÀ PÀ°è£À ªÉÄnÖ®ÄUÀ¼ÀÄ. D vÀÄvÀÛ vÀÄ¢AiÀÄ°è ¸ÉmÉzÀÄ ¤AwzÀÝ MAzÀÄ gÉÆÃqÉÆÃqÉAqïgÁ£ï ªÀÄgÀ… CzÀgÀ vÀÄA¨Á PÀqÀÄPÉA¥ÀÄ ºÀÆUÀ¼ÀÄ…
¥ÀæwÃPï ºÉýzÉݯÁè vÉð §A¢vÀÄ. ``±Á®Æ, C°è ºÉÆÃzÁUÀ ¤£ÀUÉ CxÀðªÁUÀÄvÉÛ… £ÀªÀÄä E°è£À EgÀ«¤AzÀ MAzÀÄ «avÀæ distance create DUÀÄvÉÛ… C°è £ÀªÀÄä ¸ÀA§AzsÀPÉÌ MAzÀÄ ¨ÉÃgÉAiÉÄà perspective ¹UÀ§ºÀÄzÉãÉÆÃ…’’
C°èAiÉÄà ¤AvÀ¼ÀÄ ±Á°¤. »AzÉAzÉÆà CgÀrAiÀÄ PÉA¥ÀÄ vÉÆUÀ°£À eÁeïð ªÉ¸ïÖ PÀÄzÀÄgÉAiÀÄ ªÉÄïÉÃj §AzÀÄ, EzÉà ªÀÄgÀzÀ PɼÀUÉ PÀÄzÀÄgÉ ©lÄÖ F UÉÃn£À ªÀÄÆ®PÀ fVAiÀÄÄvÁÛ ªÀÄ£ÉAiÉƼÀUÉ ºÉÆÃUÀÄwÛ¢ÝgÀ§ºÀÄzÀ®èªÉÃ? CªÀ£À ZÉ®ÄªÉ ºÉAqÀw Q« ¤«Äj¹ RgÀ¥ÀÄl ±À§ÝªÁV PÁzÀÄ PÀÆw¢ÝgÀ§ºÀÄzÀ®èªÉÃ?
``ªÉÄêÀiï ¸Á¨ï… ¸ÁªÀiÁ£ÀÄ M¼ÀVqÀ¯ÉÃ?’’
UÀ°©°UÉÆAqÀÄ ``ºÁA… £À£ÀUÉ ªÀÄgÉvÉà ºÉÆìÄvÀÄ’’ JAzÀ¼ÀÄ ±Á°¤.
``¥ÀgÀªÁV®è ªÉÄêÀiï¸Á¨ï… DgÀªÀiï ¸ÉÃ… K£ÀÆ CªÀ¸ÀgÀ«®è…’’
©ÃUÀ vÉUÉzÀÄ M¼ÀUÉ ºÉÆÃzÀ ±Á°¤ ºÁUÉà ¤AvÀ¼ÀÄ. JAzÉÆà £ÉÆÃrzÀ EAVèµï ¹£ÉªÀiÁzÀ°è ªÉÄj¯ï ¹ÖçÃ¥ï ªÁ¹¸ÀÄwÛzÀÝ ªÀÄ£ÉAiÀÄ°è PÁ°lÖ C£ÀĨsÀªÀ, ªÀÄgÀzÀ £É®, JvÀÛgÀzÀ ¸ÀÆgÀÄ, §ÈºÀzÁPÁgÀzÀ ¨ÁV®Ä QlQUÀ¼ÀÄ, CzÀPÉÌ w½ §tÚzÀ ºÀÆ«£À ¥ÀgÀzÉUÀ¼ÀÄ, w½ºÀ¼À¢ PÁ¥Éðmï, zÉÆqÀØ ªÉÄvÀÛ£ÉAiÀÄ ¸ÉÆÃ¥sÁUÀ¼ÀÄ, ºÀ¼ÉAiÀÄ PÁ®zÀ PÀÄað, ªÉÄÃdÄ, DgÁªÀÄ PÀÄað, MAzÀÄ ªÀÄƯÉAiÀÄ°è ¥sÀAiÀÄgï ¥Éèøï…
¸ÁªÀiÁ£ÀÄ ¥ÀPÀÌzÀ¯Éèà EzÀÝ ¨Éqï gÀÆ«Ä£À eÉÆÃrªÀÄAZÀzÀ ºÀwÛgÀ Er¹ 30 gÀÆ¥Á¬Ä PÉýzÀÝ SÁ£ïUÉ RĶ¬ÄAzÀ 40 PÉÆlÖ¼ÀÄ ±Á°¤. CªÀ£ÀÄ ¸À¯ÁA ºÉÆqÉzÀ.
``AiÀiÁªÁUÀ ¨ÉÃPÁzÀgÀÆ PÀgɬÄj. £Á£ÀÄ jeï ºÀwÛgÀ ¹PÀÄÌvÉÛãÉ. ºÉÆgÀqÀ¯ÉÃ…’’ J£ÀÄßvÀÛ¯Éà ºÉÆgÀl. ©Ã¢ ¨ÁV®Ä ªÀÄÄZÀÑ. M¼ÀUÉ £ÀqÉzÀÄ §AzÀAvÉ CªÀ½UÉÃPÉÆà «avÀæ KPÁQvÀ£ÀzÀ C£ÀĨsÀªÀªÁUÀvÉÆqÀVvÀÄ. ¨ÉqïgÀÆ«Ä£À ¥ÀgÀzÉUÀ¼À£ÀÄß ¸Àj¹ QlQUÀ¼ÁZÉ £ÉÆÃrzÀ¼ÀÄ. JAxÁ ZɮĪÀÅ J¯Éè®Æè… zÀÆgÀzÀ°èzÀÝ PÀqÀħÆzÀÄ §tÚzÀ ¥ÀªÀðvÀUÀ¼À »AzÉ ¸ÀÆAiÀÄð C«vÀÄPÉƼÀÄîwÛzÀÝ. ºÀQÌUÀ¼À a°¦° ¥ÁægÀA¨sÀªÁVvÀÄÛ. ¸ÀAeÉUÀvÀÛ®Ä ªÀÄĸÀÄPÀÄ ºÁPÀvÉÆqÀVvÀÄ. E£ÀßzsÀð UÀAmÉUÉ ¥ÀÆwð PÀvÀÛ¯ÁUÀ§ºÀÄzÉãÉÆÃ… CªÀ¸ÀgÀ¢AzÀ ºÉÆÃV ¹éZï MwÛzÀ¼ÀÄ ±Á°¤. ¢Ã¥À §gÀ°®è, EzÉãÀÄ ¥ÀæwÃPï ºÉýzÀÝ£À¯Áè ಎವೆರಿಥಿಂಗ್ ಇಸ್ ಪರ್ಫ಼ೆಕ್ಟ್...ಪವರ್,ವಾಟರ್,ಗೀಸರ್ J®è ZÉPï ªÀiÁr¢Ýä…’’ CAvÀ, EzÉãÀÄ UÀæºÀZÁgÀ, PÀgÉAlÄ J®è PÀqÉ ºÉÆÃVzÉAiÉÆà CxÀªÁ F ªÀÄ£ÉAiÀįÉèà K£ÁzÀgÀÆ vÉÆAzÀgÉAiÉÆÃ… QlQ¬ÄAzÀ ºÀtÂQzÁUÀ zÀÆgÀzÀ°è ¸Àé®à JvÀÛgÀzÀ°èzÀÝ ¥ÀÄlÖ ªÀÄ£ÉAiÉÆAzÀgÀ°è ¢Ã¥À «ÄtÄPÀÄwÛvÀÄÛ… ºÁUÁzÀgÉ E°è ªÀiÁvÀæ PÀgÉAmï ºÉÆÃVzÉAiÉÄÃ… FUÀ ªÀiÁqÀĪÀÅzÁzÀgÀÆ K£ÀÄ… ¨É¼ÀV£ÀªÀgÉUÀÆ PÉ®¸ÀzÀªÀgÀÆ §gÀĪÀÅ¢®è. ¥sÉÆãï E®è… CªÀ½UÉ ¨sÀAiÀĪÁ¬ÄvÀÄ.
¸ÀÄvÀÛªÀÄÄvÀÛ®Æ PÁåAqÀ¯ï ¸ÁÖöåArUÁV ºÀÄqÀÄPÁrzÀ¼ÀÄ. ªÀÄAZÀzÀ ¥ÀPÀÌzÀ ªÉÄÃf£À ªÉÄïÉ, ºÀ¼ÉAiÀÄ PÁ®zÀ PÀ¥ÀÄà ¯ÉÆúÀzÀ PÀĸÀÄj PÉ®¸À ªÀiÁrzÀ PÁåAqÀ¯ï ¸ÁÖöåAqÉÆAzÀÄ ¤AwvÀÄÛ. CzÀgÀ°è CzsÀð GjzÀÄ ºÁUÉà ¤AwzÀÝ PÁåAqÀ¯ï, CzÀgÀÄzÀÝPÀÆÌ ¸ÀÄjzÀÄ ºÉ¥ÀÄàUÀnÖzÀÝ ªÉÆÃA§wÛAiÀÄ ªÀÄtÂUÀ¼ÀÄ, ¥ÀPÀÌzÀ¯Éèà MAzÀÄ ¨ÉAQ ¥ÉÆlÖt. EAzÀÄ ¨É½UÉÎAiÉÄÃzsÀ AiÀiÁgÉÆà JzÀÝ vÀPÀët CzÀ£ÀÄß H¢ Dj¹ ºÉÆgÀUÉ ºÉÆÃVzÀÝ ºÁUÉ… ªÀÄvÉÛ QlQAiÀÄ ºÀwÛgÀ £ÀqÉzÀÄ §VÎ £ÉÆÃrzÀ¼ÀÄ ±Á°¤. DPÁ±À «avÀæ PÉA¥ÀÄ… ¤Ã° §tÚ vÀ¼ÉAiÀÄÄwÛvÀÄÛ. ¥Àæ¥ÁvÀzÀ vÀÄ¢AiÀÄ°è ¤AwzÀÝ gÉÆÃqÉÆÃqÉAqïgÁ£ï PÉêÀ® ¤ZÀѼÀ PÀ¥ÀÄà DPÀÈwAiÀiÁVvÀÛ. CzÀgÀ PÀqÀÄPÉA¥ÀÄ ºÀÆUÀ¼ÀÄ zÀlÖ ºÀ¹gɯÉUÀ¼À°è °Ã£ÀªÁV ºÉÆÃVzÀݪÀÅ. vÉgÉzÀ QlQ¬ÄAzÀ ªÉÄʸÀªÀj ºÉÆÃzÀ vÀtÚ£ÉAiÀÄ UÁ½ ¸ÀtÚ £ÀqÀÄPÀ ºÀÄnÖ¹vÀÄ. ¨ÁåV£À°è ¹UÀĪÀAvÉAiÉÄà ElÄÖPÉÆArzÀÝ PÉÆÃlÄ, ºÁQPÉÆAqÀÄ ªÀÄ¥sÀègï ¸ÀÄwÛPÉÆAqÀ¼ÀÄ. ¥ÀæwÃPï ºÉýgÀ°®èªÉà ``¤AUÉ C£ÀĨsÀªÀ«®è, CzÀÄ JAxÁ ZÀ½AiÉÄAzÀÄ. ¸ÀAeÉAiÀiÁUÀÄvÀÛ¯Éà ¨ÉZÀÑUÉ §mÉÖ ºÁQPÉÆAqÀÄ ©qÀÄ. E®è¢zÀÝgÉ ªÀÄÄdÄUÀgÀªÁ¢ÃvÀÄ’’ JAzÀÄ. ¥ÀæwÃPï£À ªÀÄzÀÄÝ, ¸À¤ºÀPÁÌV E£ÀÆß JµÀÄÖ PÁAiÀĨÉÃPÀÄ. ¥ÀæwÃPï, ¥ÀæwÃPï… CªÀ£ÀÄ ºÀÄnÖzÀA¢¤AzÀ vÀ£Àß eÉÆvÉAiÉÄà EzÀÝ ºÁUÉÃ…
K£ÁUÀÄwÛzÉ… J°è §AzÉ… K£À£À£ÀßgÀ¹ §AzÉ… ¥ÀæwÃPï ¤Ã£ÀÄ AiÀiÁgÀÄ £À£ÀUÉ… EµÀÄÖ zÀÆgÀ… JAxÁ ºÀÄZÀÄÑ…
»AwgÀÄV £ÉÆÃrzÁUÀ gÀÆ«Ä£À vÀÄA¨Á PÀvÀÛ®Ä vÀÄA©vÀÄÛ. QlQ¬ÄAzÀ §gÀÄwÛzÀÝ C®à¸Àé®à ¨É¼ÀQ£À°è ªÉÄÃdÄ, PÀÄað, C°èzÀÝ J®è ªÀ¸ÀÄÛUÀ¼ÀÆ fêÀAvÀ DPÀÈwUÀ¼ÀAvÉ PÀAqÀÄ ¨sÀAiÀĪÁ¬ÄvÀÄ. ±Á°¤ ºÉÆÃV PÁåAqÀ¯ï ºÀwÛ¹zÀ¼ÀÄ. vÀPÀët »AzÉ UÉÆÃqÉAiÀÄ ªÉÄÃ¯É ªÀÄÆrzÀ. vÀ£Àß ¸ÉÆlÖ £ÉgÀ¼À£ÀÄß PÀAqÀÄ ¨ÉaÑzÀ¼ÀÄ. EzÀĪÀgÉUÀÆ PÀArgÀzÉà EzÀÝ ºÀÆzÁ¤AiÉÆAzÀÄ PÀArvÀÄ. C¯Éèà mÉç¯ï ªÉÄïÉ. ©½AiÀÄ ¥ÉÆøÀð¯ÉÊ£ï ªÉÄÃ¯É avÁÛgÀ ©r¹zÀ ¸ÀÄAzÀgÀ ºÀÆzÁ¤… CzÀgÀ°è JAzÉÆà eÉÆÃr¹nÖzÀÝ gÉÆÃqÉÆÃqÉAqÀgÁ£ï ºÀÆUÀ¼ÀÄ… CªÀÅUÀ¼À ¥ÀPÀ¼ÉUÀ¼ÀÄ, J¯ÉUÀ¼ÀÄ MtV ¸ÀÄvÀÛ®Æ GzÀÄjvÀÄÛ. vÀ¯É JwÛzÁUÀ JzÀÄgÀÄ QlQAiÀiÁZÉ zÀÆgÀzÀ°è ªÀÄAPÀÄ ©Ã¢ ¢Ã¥ÀªÉÇAzÀÄ PÀtÄÚ «ÄlÄQ¸ÀÄvÀÛ¯Éà EvÀÄÛ.
±Á°¤ ºÁUÉà PÀÄaðAiÀÄ ªÉÄÃ¯É PÀĽvÀ¼ÀÄ. ¥ÀPÀÌzÀ¯Éèà EnÖzÀÝ, PÀnÖ¹PÉÆAqÀÄ vÀA¢zÀÝ ¸ÁåAqï«Zï PÀtÂÚUÉ ©vÀÄÛ. E£ÀÆß ¸Àé®à ºÉÆvÁÛzÀ ªÉÄÃ¯É w£ÉÆßÃt JAzÀÄ PÉÆAqÀ¼ÀÄ.
¸ÀÄvÀÛ®Æ fÃgÀÄAqÉUÀ¼À ±À§Ý, ¥ÀQëUÀ¼À PÀ®gÀªÀ. ¥Àæ¥ÀAZÀzÀ AiÀiÁªÉÇzÉÆà ªÀÄƯÉUÉ §AzÀAvÉ. ¥ÀPÀÌzÀ°è EzÀÝ ¥sÀAiÀÄgï ¥Éèøï£À°è ºÁUÉà ©¢ÝzÀÝ E¢Ý®Ä… CzÉÃPÉÆà CzÀgÀ PÁ«£ÀÆß DgÉà E®è, ºÀwÛgÀ ºÉÆÃzÀgÉ ¨ÉZÀÑVgÀħºÀÄzÀÄ J¤ß¹vÀÄ. F ªÀÄgÀzÀ £É, CzÀgÀ ªÉÄð£À ºÀÆzÁ¤, PÁ¥Éðmï, ªÀÄgÀzÀ ¸ÀÆgÀÄ, zÉÆqÀØ UÁf£À QlQUÀ¼ÀÄ, ¥ÉÆÃnðPÉÆÃzÀ°è ¸ÀÛ§ÞªÁVgÀĪÀ ¥ÉîªÀ ºÀƧ½îUÀ¼ÀÄ, ¸ÀÄvÀÄÛAiÀĪÀjzÀ zÉêÀzÁgÀÄ ªÀÄgÀUÀ¼ÀÄ… CzÉÃPÉÆà EzÀÄ vÀ£Àß eÁUÀªÀ®è… vÁ£ÀÄ »ÃUÉ PÀÆwgÀĪÀÅzÀÄ AiÀiÁjUÉÆà EµÀÖªÁUÀÄwÛ®è… ¨ÉÃqÀzÀ Cwy §AzÁUÀ ¸À»¸ÀĪÀAvÉ ¸ÀĪÀÄä¤zÁÝgÉ… J¤¹vÀÄ.
zÀÆgÀzÀ°è PÁgÉÆAzÀÄ QgÀæ£É ±À§Ý ªÀiÁqÀÄvÁÛ wgÀÄVzÀ ±À§Ý-±Á°¤ vÀ£Àß ªÀÄÄzÀÄrzÀ ¹ÃgÉAiÀÄvÀÛ £ÉÆÃrPÉÆAqÀ¼ÀÄ. CgÉ, E£ÀÆß §l   l §zÀ¯Á¬Ä¹®è, ªÀÄÄR vÉƼɢ®è-JzÀÄÝ ¤zsÁ£ÀªÁV ¨ÁåV¤AzÀ ¸ÉÆÃ¥ÀÄ, UÀįÁ© §tÚzÀ lQð±ï lªÉ¯ï vÉUÉzÀÄPÉÆAqÀÄ, ¥ÀPÀÌzÀ°èzÀÝ CmÁåZï ¨ÁvïgÀÆ«Ä£ÀvÀÛ £ÀqÉzÀ¼ÀÄ.
¨ÁV®Ä QgÉæ£ÀÄßvÁÛ vÉUÉzÀÄPÉÆArvÀÄ. ºÁ®Ä ©½AiÀÄ mÉÊ®ÄUÀ¼À ºÉÆ¢PÉAiÀÄ «±Á®ªÁzÀ ¨ÁvïgÀÆ«Ä£À vÀÄA¨Á ºÀgÀrzÀÝ, QlQ¬ÄAzÀ vÀÆj§AzÀ ªÀĸÀÄPÀÄ ¨É¼ÀPÀÄ. zÉÆqÀØ ªÁµï ¨Éù£ï, C®APÀÈvÀ ZËPÀnÖ£À PÀ£Àßr, ±ÀªÀgï, VøÀgï… CUÀ®ªÁzÀ ¨Ávï l¨ï. CzÉÃPÉÆà D ¨Ávïl¨ï PÀAqÀÄ CªÀ¼ÀÄ »AdjzÀ¼ÀRÄ. DUÀ¯Éà CªÀ¼ÀÄ PÀAqÀzÀÄÝ. JzÀÄjVzÀÝ PÀ£ÀßrAiÀÄ ªÀÄÆ®PÀ… ±Á°¤ ºÁUÉà PÀ¯ÁèzÀ¼ÀÄ…
UËgÀªÀtðzÀ ZɮĪÉ. ¤Ã¼ÀªÁzÀ vɼÀĪÁzÀ ±ÀjÃgÀ. PÀuÉì¼ÉAiÀÄĪÀ ªÉÄʪÀiÁl, ºÉƼÀ¥ÁzÀ ºÉÆAUÀÆzÀ®Ä, ¤Ã°PÀtÄÚ, PÀtÂÚ£À vÀÄA¨Á PÀ£À¸ÀÄ, PÉA¥ÀÄ vÀÄnUÀ¼ÀAa£À°è ºÀÆ£ÀUÉ… DUÀvÁ£Éà ¸ÁߣÀ ªÀÄÄV¹zÀÝjAzÀ PÉA¥ÁVzÀÝ CªÀ¼À ªÉÄʬÄAzÀ ºÀ¨É K¼ÀÄwÛvÀÄÛ. MAzÉgÀqÀÄ ºÉeÉÓ ªÀÄÄA¢lÄÖ PÉÊZÁa C¯Éèà £ÉÃvÁqÀÄwÛzÀÝ w½¤Ã° §tÚzÀ lªÉ¯ï J¼ÉzÀÄPÉÆAqÀÄ CzÀjAzÀ ªÉÄÊAiÉÆågɹPÉÆAqÀ¼ÀÄ… ¥ÀPÀÌzÀ¯Éèà EzÀÝ ¥ËqÀgï qÀ©â vÉUÉzÀÄ, ªÉÄÊ ªÉÄïɯÁè ¥ËqÀgï ¹A¥Àr¹PÉÆAqÀ¼ÀÄ… «avÀæ ªÁ¸À£É… CzÀgÀ°è vÁ£ÉAzÀÆ CjAiÀÄzÀ MAzÀÄ jÃwAiÀÄ ªÀiÁzÀPÀvÉ… C¯Éè £ÉÃvÁqÀÄwÛzÀÝ ¥ÀÄAiÀÄlÖ ¥ÀÄlÖ ºÀÆUÀ½zÀÝ ©½AiÀÄ UË£ï J¼ÉzÀÄPÉÆAqÀÄ ºÁQPÉÆAqÀ¼ÀÄ… ºÁUÉà ªÀÄÄAzÉ §AzÀÄ ºÉƹۮ¯Éèà ©nÖzÀÝ ¤Ã° ¨ÁvïgÀÆA ZÀ¥Àà°UÀ¼À£ÀÄß ªÉÄnÖzÀݼÀÄ… lªÉ¯ï¤AzÀ vÀ¯ÉAiÉÆj¹PÉƼÀÄîvÀÛ¯Éà ¨ÉqïgÀÆ«ÄUÉ £ÀqÉzÀ¼ÀÄ…
ºÁUÉ §AzÀÄ ¨ÉqïgÀÆ«Ä£À ¤®ÄªÀÅUÀ£ÀßrAiÀÄ ªÀÄÄAzÉ ¤AvÀ¼ÀÄ… qÁæAiÀÄj¤AzÀ §æ±ï vÉUÉzÀÄ vÀ£Àß ºÉÆAUÀÆzÀ®£ÀÄß ¨ÁazÀ¼ÀÄ… CzÀÄ C¯ÉC¯ÉAiÀiÁV £ÀÄtÄ¥ÁUÀĪÀªÀgÉUÀÆ… vÀ£Àß ¸ËAzÀAiÀÄðPÉÌ vÁ£Éà ªÀiÁgÀÄ ºÉÆÃV ºÁUÉà vÀ£ÀßvÀÛ ¢nÖ¹zÀ¼ÀÄ… M¼ÀV¤AzÀ ¥ÀÄlÖ ¥À¥sÉÆÃðªÀiï ¨Ál¯ÉÆAzÀ£ÉßwÛ MAzÉÆAzÀÄ ºÀ¤ Q«UÀ¼À »AzÉ, PÀwÛ£Àr ºÀaÑPÉÆAqÀ¼ÀÄ… ªÀÄvÉÆÛªÉÄä vÀ£Àß ¥Àæw©A§zÀvÀÛ ªÉÄZÀÄÑUɬÄAzÀ £ÉÆÃrzÀ¼ÀÄ… CªÀ¼À UÀªÀÄ£À mÉç°£ÀvÀÛ ºÀj¬ÄvÀÄ… CªÀ¼ÀÄ CvÀÛ ¨ÁVzÁUÀ JzÀgÀÄUÀqÉAiÉÄà EzÀÝ PÁåAqÀ¯ï ¨É¼ÀQ£À°è CªÀ¼À ªÀÄÄR «avÀæªÁV PÁtvÉÆqÀVvÀÄ… PÀtÄÚUÀ¼ÀÄ ºÉƼÉAiÀÄÄwÛzÀݪÀÅ… CªÀ¼ÀÄ C°èAiÉÄà EzÀÝ UÁf£À ºÀÆzÁ¤AiÀÄ°è ºÀÆUÀ¼À£ÀÄß CAzÀªÁV eÉÆÃr¸ÀvÉÆqÀVzÀ¼ÀÄ… CZÀÑ ©½AiÀÄ ºÀÆzÁ¤AiÀÄ°è zÀlÖ ºÀ¹gɯÉUÀ¼À £ÀqÀÄªÉ PÀqÀÄPÉA¥ÀÄ gÉÆÃqÉÆÃAqÉAqÀgÁ£ï ºÀÆUÀ¼ÀÄ… CªÀ¼À ©½AiÀÄ ¨ÉgÀ¼ÀÄUÀ¼ÀÄ ªÉÆÃA§wÛ ¢Ã¥ÀzÀ°è E£ÀÆß ¨É¼ÀîUÉ PÁtÄwÛzÀݪÀÅ- ¥ÉÆøÀð¯ÉÊ£ï ¨ÉgÀ¼ÀÄUÀ¼ÀAvÉ… CªÀÅUÀ¼ÀÄ C®ÄVzÁUÀ CzÀgÀ°èzÀÝ ªÀdæ zÀÄAUÀÄgÀ ¥sÀ¼À¥sÀ¼À£É ºÉƼÉAiÀÄÄwÛvÀÄÛ. EªÀ¼ÁgÀÄ… «Ä¸É¸ï ªÉ¸ïÖ… CzÉÃPÉ EªÀ¼À£ÀÄß J¯ÉÆèà £ÉÆÃrzÀAvɤ¸ÀÄvÀÛzÉ… ºÀÆzÁ¤AiÀĤßlÄÖ MAzÉgÀqÀÄ ºÉeÉÓ »AzÉ §AzÀÄ ªÉÄZÀÄÑUɬÄAzÀ MAzÀÄ PÀët £ÉÆÃrzÀ¼ÀÄ… EzÀÝQÌzÀÝAvÉ ¨Á°®Ä §rzÀ ±À§ÝPÉÌ ¨ÉaÑzÀ¼ÀÄ… vÀPÀët ¸ÁªÀj¹PÉÆAqÀÄ come in JAzÀ¼ÀÄ. CªÀ¼ÀÄ »A¢gÀÄV £ÉÆÃqÀĪÀ ºÉÆwÛUÉ CªÀ£ÀÄ ¨ÁV®°è ¤AwzÀÝ. næªÀiÁäV AiÀÄƤ¥sÁªÀiïð zsÀj¹zÀ PÀlÄÖªÀĸÁÛzÀ JuÉÚUÉA¦£À AiÀÄĪÀPÀ. ªÀÄÄR ¸ÀjAiÀiÁV PÁtzÉ, zÉúÀzÀ DPÁgÀ ªÀiÁvÀæ ªÀÄÆrvÀÄÛ ¨ÁV® ZËPÀnÖ£À°è.
``¸Áj ªÀiÁåªÀiï… £À£ÀUÉÆÎwÛgÀ°®è…’’ PÀëªÉÄ PÉýzÀ.
``¥ÀgÀªÁV®è, M¼ÀUÉ ¨Á’’
CªÀ¼À vÀÄnAiÀÄAa£À°è QgÀÄ£ÀvÉ ªÀÄÆrvÀÄ.
ºÁUÉà ¤AwzÀÝ CªÀ£À PÉÊAiÀÄ°è w½UÉA¥ÀÄ ¥ÉÆøÀð¯ÉÊ£ï PÀ¥ÀÄà ¸Á¸Àgï, nà PÉÆÃf ºÉÆ¢¹zÀ ¥Ámï.
CªÀ¼ÀÄ ªÀÄÄAzÉgÀqÀÄ ºÉeÉÓ ElÖ¼ÀÄ.
``£Á£ÀÄ… ¤£ÀUÁVAiÉÄà PÁ¢zÉÝ… ¨Á’’ JAzÀ¼ÀÄ ªÉÄ®è£É. CªÀ£ÀÄ K£ÀÆ CxÀðªÁUÀzÉ UÀ°©°UÉÆAqÀ.
``E®è… ªÀiÁåªÀiï…’’
``ªÀiÁåªÀiï C£ÀߨÉÃqÀ…’’
CªÀ£À PÀ¹«¹ ºÉZÁѬÄvÀÄ. CªÀ¼ÀÄ CªÀ£À ºÀwÛgÀ ºÀwÛgÀ §AzÀ¼ÀÄ. ªÉÆÃA§wÛAiÀÄ ¢Ã¥ÀzÀ°è CªÀ¼ÀÄ £ÀqÉAiÀÄÄwÛgÀĪÀ ¥ÉÆøÀð¯ÉÊ£ï ¨ÉÆA¨ÉAiÀÄAvÉ PÀAqÀ¼ÀÄ- ªÀÄÄnÖzÀgÉ MqÉzÀÄ ºÉÆÃUÀĪÀ ¨ÉÆA¨ÉAiÀÄAvÉ. CªÀ£ÀÄ C¯ÁèqÀzÉà ¤AwzÀÝ. CªÀ¼ÀÄ CªÀ£À PÉʬÄåAzÀ mÉæà vÉUÉzÀÄ mÉç¯ï ªÉÄðlÖ¼ÀÄ. CªÀ£À ºÀwÛgÀ §AzÀÄ CªÀ£ÀvÀÛ ªÀÄÄR ªÀiÁr ¤AvÀ¼ÀÄ.
``£À£Àß ºÉ¸ÀgÀÄ ¸ÁgÁ… £À£ÀߣÀÄß ºÁUÉà PÀj…’’
CªÀ¼À zsÀé¤ ªÀiÁzÀPÀªÁVvÀÄÛ. PÀtÄÚUÀ¼ÀÄ ºÉƼÀ¥ÉÃjzÀݪÀÅ. JzÉ ªÉÄ®è£É Kj½AiÀÄÄwÛvÀÄÛ.
``ªÀiÁåªÀiï’’
``ªÀÄvÉÛ ªÀÄvÉÛ ªÀiÁåªÀiï J£ÀߨÉÃqÀ’’
CªÀ¼ÀÄ vÀ£ÉßgÀqÀÄ PÉÊUÀ¼À£ÀÆß CªÀ£À ¨sÀÄdzÀ ªÉÄðlÖ¼ÀÄ.
``JµÀÄÖ ¢£À¢AzÀ £ÉÆÃqÀÄvÀÛ¯Éà E¢Ã¤ ¤£Àß… ¤£Àß PÀAqÀA¢¤AzÀ PÀ£À¹£À®Æè ¤Ã£ÉÃ…’’
CªÀ£ÀÄ ºÉzÀj CwÛvÀÛ £ÉÆÃrzÀ.
``ºÉzÀgÀ¨ÉÃqÀ… ¸Á¨ï E£ÀÆß 3 ¢£À HjUÉ §gÀĪÀÅ¢®è… F UÀ½UÉUÁV JµÀÄÖ vÀªÀPÀ ¥ÀnÖzÉÝãɅ’’
CªÀ¤ÃUÀ ¨sÀAiÀÄUÉÆAqÀ. K£ÀÆ ªÀiÁqÀ®Æ vÉÆÃZÀzÉ ¸Àé®à »AzÉ ¸ÀjzÀ, PÉÊ »¸ÀÄQPÉÆAqÀ.
``ªÀiÁåªÀiï… £Á£ÀÄ ¤ªÀÄä… ¤ªÀÄä… ¤ÃªÀÅ… £À£Àß… EzÀÄ ¸ÀjAiÀĮ腒’
``¥ÉæêÀÄzÀ°è J®èªÀÇ ¸Àj… ¤£ÀUÁV JµÀÄÖ ¥ÀjvÀ¦¹zÉÝãɅ UÉÆvÁÛ, ¤Ã£ÀÄ PÁrzÀAvÉ £À£ÀߣÁåªÀ UÀAqÀ¸ÀÆ PÁr®è. CvÀÛ £ÉÆÃqÀÄ… D QlQ DZÉ ¤AwzÉAiÉįÁè D qÉÆÃqÉÆÃqÉAqïgÁ£ï ªÀÄgÀ… ªÉÄÊ vÀÄA¨Á §AiÀÄPÉ ºÉÆvÀÄÛ… PÁAiÀÄÄvÁÛ… ªÀµÀðUÀ½AzÀ… ºÁUÉà £À£ÀUÉ ¤£ÀߣÀÄß £ÉÆÃrzÁUÀ¯É¯Áè C¤ß¸ÀÄwÛvÀÄÛ… JµÀÄÖ AiÀÄÄUÀUÀ½AzÀ ¤£ÀUÁV PÁAiÀÄÄwÛzÉÝãÉÆà JAzÀÄ…’’
CªÀ¼À zsÀé¤ ªÉÄzÀĪÁV, ªÀiÁzÀðªÀ ºÉZÁѬÄvÀÄ. CªÀ¼À vÉÆüÀÄUÀ¼ÀÄ CªÀ£À PÀwÛ£À ¸ÀÄvÀÛ ©VAiÀiÁzÀªÀÅ. CªÀ£ÀÄ »AdjzÀAvÉ CªÀ¼À »rvÀ §®ªÁ¬ÄvÀÄ. CªÀ¼ÀÄ JµÀÆÖ ºÉÆvÀÄÛ ºÁUÉà CªÀ£À PÀtÂÚ£À°è PÀtÂÚlÄÖ £ÉÆÃrzÀ¼ÀÄ. CªÀ£À£ÀÄß vÀ£Àß°è PÀgÀV¹PÉƼÀÄîªÀAvÉ. ºÁUÉà vÀ£Àß ªÀÄÄRzÀ ªÉÄÃ¯É eÁjzÀ ºÉÆAUÀÆzÀ®£ÀÄß vÀ½î CªÀ£À PÉ£Éß ¸ÀªÀjzÀ¼ÀÄ. CªÀ£À vÀ¯ÉUÀÆzÀ®£ÀÄß vÀ£Àß ªÀÄĶ×AiÀÄ°è »rzÀÄ CªÀ£À ªÀÄÄRªÀ£ÀÄß ºÀwÛgÀPÉ̼ÉzÀÄPÉÆAqÀ¼ÀÄ. CgÉ©jzÀ vÀÄnUÀ¼À£ÀÄß CªÀ£À ºÀwÛgÀ vÀgÀvÁÛ ºÉýzÀ¼ÀÄ… ``£À£ÀUÉ ¤Ã£ÀÄ ¨ÉÃPÀÄ…’’ DUÀ EzÀÝQÌzÀÝAvÉ CªÀ£ÀÄ ¸ÉmÉzÀ. vÀ£Àß PÀwÛ£À ¸ÀÄvÀÛ §¼À¹zÀ CªÀ¼À vÉÆüÀÄUÀ¼À£ÀÄß QvÉÛ¸ÉzÀÄ CªÀ¼À£ÀÄß ªÉÄ®è£É »AzÉ vÀ½îzÀ. ªÉÄʪÀÄgÉwzÀÝ CªÀ¼ÀÄ DAiÀÄvÀ¦à ªÁ° ºÁUÉà PÁ¥ÉðnÖ£À ªÉÄÃ¯É ©zÀݼÀÄ. CªÀ¼À ºÉÆAUÀÆzÀ®Ä ªÀÄÄR ªÀÄÄaÑvÀÄ. ©zÀÝ gÀ¨sÀ¸ÀPÉÌ CªÀ¼À ºÀuÉ ªÀÄAZÀzÀ PÁ°UÉ ºÉÆqÉzÀÄ ªÉÄ®èUÉ gÀPÀÛ M¸ÀgÀ vÉÆqÀVvÀÄ. ¢UÀãçªÉÄUÉÆAqÀ CªÀ¼ÀÄ PÉÆAqÀ ºÉÆvÀÄÛ ºÁUÉà PÀĽwÛzÀݼÀÄ. ¸ÁªÀj¹PÉÆAqÀÄ vÀ¯É JwÛzÁUÀ CªÀ¼À PÀtÄÚUÀ¼ÀÄ PÉAqÀ PÁgÀÄwÛzÀݪÀÅ. vÀÄnUÀ¼ÀÄ ©¼ÀÄ¥ÉÃjvÀÄÛ. ZÉÃvÀj¹PÉÆAqÀÄ ¤zsÁ£ÀªÁV ªÉÄïÉzÁÝUÀ zÉúÀ PÉÆÃ¥À¢AzÀ PÀA¦¸ÀÄwÛvÀÄÛ. vÀÄnUÀ¼ÀÄ £ÀqÀÄUÀÄwÛzÀݪÀÅ. ¤AvÀ°èAzÀ¯Éà CªÀ¼À zÀ馅 C°è E°è ºÀj¬ÄvÀÄ. PÉÆ£ÉUÉ ¯ÉÆúÀzÀ PÁåAqÀ¯ï ¸ÁÖöåAr£À ªÉÄÃ¯É £ÉnÖvÀÄ. CªÀ¼ÀÄ CzÀgÀvÀÛ ¤zsÁ£ÀªÁV £ÀqÉzÀ¼ÀÄ. MAzÀÄ PÀët CzÀ£ÀÄß ¢nÖ¹zÀ¼ÀÄ. CzÀ£ÀÄß JwÛ »rzÀ¼ÀÄ. CªÀqÀÄUÀaÑ CªÀ£À£ÀÄß zÀÄgÀÄUÀÄlÄÖvÁÛ £ÉÆÃrzÀ¼ÀÄ. ªÀÄgÀÄPÀët vÀ£É߯Áè ±ÀQÛ G¥ÀAiÉÆÃV¹ CªÀ£ÀvÀÛ J¸ÉzÀ¼ÀÄ. CzÀÄ £ÉÃgÀªÁV CªÀ£À ºÀuÉUÉ ºÉÆqÉzÀAvÉ, CªÀ£ÀÄ vÀvÀÛj¹ PɼÀUÉ ©zÀÝ. JZÀÑgÀ vÀ¦àzÀ. D KnUÉ QvÀÄÛPÉÆAqÀÄ ºÉÆÃzÀ PÁåAqÀ¯ï CªÀ£À ªÀÄÄRzÀ ¥ÀPÀÌzÀ°è ©zÀÄÝ, MAzÀÄ PÀët vÉÃdªÁV GjzÀÄ DjºÉÆìÄvÀÄ. D MAzÀÄ PÀët CªÀ£À ªÀÄÄR ±Á°¤UÉ ¤ZÀѼÀªÁV PÀArvÀÄ… ºÀÄ©â£À £ÀqÀÄ«¤AzÀ ºÀ¤ºÀ¤AiÀiÁV gÀPÀÛ M¸ÀgÀÄwÛzÀÝ ªÀÄÄR… ¥ÀæwÃPÀ£À ªÀÄÄR… CzÉà zÀlÖ ºÀħÄâUÀ¼ÀÄ, CzÉà ¥ÉÆzÉ «ÄøÉ, CzÉà JqÀUÉ£ÉßAiÀÄ ªÉÄð£À ªÀÄZÉÑ… ``¥ÀæwÃPï!’’ ±Á°¤ QlÖ£É QgÀÄazÀ¼ÀÄ. CªÀ½UÉ vÀ¯É wgÀÄV PÀtÄÚ PÀvÀÛ°nÖvÀÄ…
±Á°¤ PÀtÄÚ ©mÁÖUÀ gÀÆ«Ä£À¯Éè¯Áè ¨É¼ÀPÀÄ. ¥ÀPÀÌzÀ QlQ¬ÄAzÀ ªÀÄAzÀ ©¹°£À PÉÆîÄUÀ¼ÀÄ. ªÉÄÊZÀ½¬ÄAzÀ ¸ÉmÉzÀÄ ºÉÆÃVvÀÄÛ. ¥ÀæwÃPï J°è… vÁ£É°èzÉÝãɅ PÁ¥Éðmï ªÉÄÃ¯É ºÁUÉà ©¢ÝzÀÝ ±Á°¤ ¤zsÁ£ÀªÁV ¸ÁªÀj¹PÉÆAqÀÄ JzÀݼÀÄ… vÁ¤°è AiÀiÁªÁUÀ §AzÉ… PÀ£À¸ÀÄ PÁtÄwÛzÉÝãÉAiÉÄà MAzÀÆ CxÀðªÁUÀ°®è. ¸ÀÄvÀÛ®Æ PÀuÁÚr¹zÁUÀ gÀÆ«Ä£À°èzÀÝ ªÀ¸ÀÄÛUÀ¼É¯Áè ZÉ£ÁßV PÀAqÀÄ §AzÀªÀÅ. ¤zsÁ£ÀªÁV »A¢£À ¸ÀAeÉ £É£À¥ÁUÀvÉÆqÀVvÀÄ. JzÀÄÝ ¤AvÀÄ PÁ°£À eÉÆêÀÄÄ ©r¹PÉƼÀÄîvÁÛ PÀÄAlÄvÁÛ QlQAiÀÄ ºÀwÛgÀ £ÀqÉzÀ¼ÀÄ. ¥ÀgÀzÉUÀ¼À£ÀÄß ¸ÀgÀPÀÌ£É vÉgÉzÀ¼ÀÄ. JzÀÄgÀÄ PÀAqÀ zÀȱÀåPÉÌ ¨ÉaÑzÀ¼ÀÄ. J¯Éè®Æè ©½. ªÀÄgÀUÀ¼ÀÄ, ªÀÄ£ÉUÀ¼ÀÄ, ºÀÄ®Äè, ¨Éð, ¢Ã¥ÀzÀ PÀA§ J®èzÀgÀ ªÉÄÃ®Æ ºÁ°â½ »ªÀÄzÀ ºÉÆ¢PÉ. CªÀ½UÉ ºÀÈzÀAiÀÄ ¨Á¬ÄUÉ §AzÀAvÁ¬ÄvÀÄ. ºÁUÉà ªÀÄAZÀzÀ ¥ÀPÀÌzÀ QlQAiÀÄvÀÛ £ÀqÉzÀÄ ºÉÆgÀUÉ ¢nÖ¹zÀ¼ÀÄ. ªÀÄgÀUÀ¼À MAzÉÆAzɯÉAiÀÄ ªÉÄîPÀÆ »ªÀÄ… ºÁUÉà ¥ÀÄlÖ UÉÃn£ÁZÉ ¥Àæ¥ÁvÀzÀvÀÛ ¨Áa ¤AwzÀÝ gÉÆÃqÉÆÃqÉAqïgÁ£ï ªÀÄgÀzÀ ªÉÄîƅ D ªÀÄgÀªÀ£ÀÄß UÀÄgÀÄw¸À®Æ PÀµÀÖªÁUÀĪÀAvÉ…
CzÀgÀ PɼÀUÉ ºÀÄ°è£À ªÉÄÃ¯É ºÀgÀr ºÉÆÃVzÀÝ ©½©½ »ªÀÄzÀ ºÁ¸ÀÄ… CzÀgÀ ªÉÄÃ¯É DUÀvÁ£Éà GzÀÄjzÀÝ DgÀPÀÛ gÉÆÃqÉÆÃqÉAqïgÁ£ï ºÀÆUÀ¼ÀÄ…

ಉಮಾ ರಾವ್(ಪ್ರಜಾವಾಣಿ)

Saturday, November 15, 2014

ಮುಂಬೈ ಅನುಭವ!ಮುಂಬೈ ಅನುಭವ!

ಆ ಹುಡುಗನನ್ನು ನಾನು ಮುಂಬೈನಲ್ಲಿ ಎಲ್ಲಿಯೂ ನೋಡಿರಬಹುದಾಗಿತ್ತು. ಸೀಮೆಎಣ್ಣೆಗಾಗಿ ಪುಟ್ಟ ತಂಗಿಯರೊಡನೆ ಗಂಟೆಗಟ್ಟಳೆ ರೇಶನ್ ಅಂಗಡಿಯ ಮುಂದೆ ಕ್ಯೂ ನಿಲ್ಲುವ, ದೀಪ ಕೆಂಪಾಗುತ್ತಲೂ “ಹರ್ಷದ್ ಮೆಹ್ತಾ ಲಾಕಪ್ ಮೇ... ಮಿಡ್ಡೇ-ಆಫ್ಟರ್‌ನೂನ್, ಮಿಡ್ಡೇ-ಆಫ್ಟರ್‌ನೂನ್...” ಎಂದು ಕೂಗುತ್ತಾ ಟ್ಯಾಕ್ಸಿಯತ್ತ ಧಾವಿಸಿ ಬರುವ, ಮುನಿಸಿಪಲ್ ಶಾಲೆಯ ಕಡುನೀಲಿ... ಬಿಳಿ ಮಾಸಲು ಯೂನಿಫಾರಂನಲ್ಲಿ, ಪುಸ್ತಕಗಳ ಭಾರಕ್ಕೆ ಬೆನ್ನು ಬಗ್ಗಿಸಿಕೊಂಡೇ ಶ್ರೀದೇವಿಯ ಬೃಹತ್ ಹೋರ್ಡಿಂಗಿನ ಮುಂದೆ ಮೈಮರೆತಿರುವ, ಗಣಪತಿ ಬಾಪ್ಪಾ ಮೋರ‍್ಯಾ ಎಂದು ಮೈಮರೆತು ಕುಣಿಯುವ, “ಆಯೀ ಕಾಮ್ ಪರ್ ದೋ ತೀನ್ ದಿನ್ ನಹೀಂ ಆಯೇಗಿ...’ ಎಂದು ಬಾಗಿಲು ತೆಗೆಯುತ್ತಲೇ ಬಡಬಡಿಸುವ- ಯಾವ ಹುಡುಗನೂ ಅವನಾಗಿರಬಹುದಾಗಿತ್ತು.
ಆದರೆ ನಾನು ಅವನನ್ನು ಕಂಡಿದ್ದು ಚೆಂಬೂರಿನ ಚಿಲ್ಡನ್ಸ್ ಹೋಮ್‌ನಲ್ಲಿ ವಾರಕ್ಕೊಮ್ಮೆ ಅಲ್ಲಿಯ ಮಕ್ಕಳನ್ನು ಭೇಟಿಯಾಗಿ ಮಾತುಕತೆಯಾಡಲು ಹೋಗುತ್ತಿದ್ದಾಗ. ಅವನ ವಯಸ್ಸು ಎಂಟು. ದುಂಡುಮುಖ, ಹೊಳೆಯುವ ಕಣ್ಣುಗಳು, ಮಟ್ಟಸವಾದ ಮೈಕಟ್ಟು, ಚಿಕ್ಕದಾಗಿ ಕತ್ತರಿಸಿದ ಕೂದಲು, ಮೊದಲು ಸಂಕೋಚಪಟ್ಟರೂ ಆಮೇಲೆ ನಿರಾಳವಾಗಿ ಮಾತಾಡಿದ.
“ನಿನ್ನ ಹೆಸರು...?”
“ವಿನಾಯಕ್, ವಿನಾಯಕ್ ಪಾಖರೆ”
“ನಿಮ್ಮ ಮನೆ ಎಲ್ಲಿದೆ?”
“ಮಲಾಡ್‌ನಲ್ಲಿ, ಅಲ್ಲಿ ನನ್ನ ಅಪ್ಪನ ‘ಮಟನ್ ಶಾಪ್’ ಇದೆ. ಆಯಿ ಎಲ್ಲೂ ಕೆಲಸಕ್ಕೆ ಹೋಗುವುದಿಲ್ಲ. ಮನೆಯಲ್ಲೇ ಇರುತ್ತಾಳೆ. ಅಡಿಗೆ ಮಾಡುತ್ತಾಳೆ. ನನ್ನ ತಮ್ಮಂದಿರನ್ನು ನೋಡಿಕೊಳ್ಳುತ್ತಾಳೆ.”
“ನೀನೇಕೆ ಮನೆಬಿಟ್ಟು ಓಡಿಬಂದೆ?”
“ಒಂದು ದಿನ ಸ್ಕೂಲಿನಲ್ಲಿ ಮೇಷ್ಟ್ರು ತುಂಬಾ ಹೊಡೆದರು. ತುಂಬಾ ಸಿಟ್ಟು ಬಂತು. ಅದಕ್ಕೆ ಅಲ್ಲಿಂದ ಓಡಿಹೋದೆ. ಲೋಕಲ್ ಹತ್ತಿ ವೀಟಿಗೆ. ತಾಜ್‌ಮಹಲ್ ಹೋಟೆಲ್ ಹತ್ತಿರ ಸ್ವಲ್ಪ ಹೊತ್ತು ಏನೂ ತೋಚದೆ, ಹಾಗೇ ತಿರುಗಾಡುತ್ತಿದ್ದೆ. ಆಗ ಹಸಿವಾಗಹತ್ತಿತ್ತು. ಭಿಕ್ಷೆ ಬೇಡಲು ಶುರು ಮಾಡಿದೆ. ಹಸಿವಾದಾಗಲೆಲ್ಲ ಭಿಕ್ಷೆ ಬೇಡುತ್ತಿದ್ದೆ. ಸ್ವಲ್ಪ ಹಣ ಕೈಸೇರಿದ ತಕ್ಷಣ ಏನಾದರೂ ಕೊಂಡು ತಿನ್ನುತ್ತಿದ್ದೆ. ಫುಟ್‌ಪಾತಿನ ಮೇಲೆ ಮಲಗುತ್ತಿದ್ದೆ. ಸ್ವಲ್ಪ ದಿನಗಳಲ್ಲಿ ನನಗೆ ಅಲ್ಲಿ ಕೆಲವು ಹುಡುಗರೊಂದಿಗೆ ದೋಸ್ತಿ ಆಯಿತು. ಆಮೇಲೆ, ನಾನು ಅವರ ಗ್ಯಾಂಗ್ ಸೇರಿಕೊಂಡೆ. ನಮ್ಮ ಗ್ಯಾಂಗಿಗೆ ಒಬ್ಬ ಲೀಡರ್ ಇದ್ದ. ಕಾಣ್ಯಾ ಥಾ, ಹೀಗೆ ಅವನಿಗೆ ಒಂದೇ ಕಣ್ಣಿತ್ತು. ನಮ್ಮ ಕೆಲಸವೆಂದರೆ ತಾಜ್‌ನ ಎದುರಿನ ಸಮುದ್ರದಲ್ಲಿ ಮುಳುಗುವುದು. ತಳದಿಂದ ಖಾಲಿ ವಿಸ್ಕಿ ಬಾಟಲುಗಳನ್ನು ಹೆಕ್ಕಿ ತರುವುದು. ಲೀಡರ್‌ಗೆ ಕೊಡುವುದು. ಎಲ್ಲರದನ್ನೂ ಕೂಡಿಸಿ ರೂಪಾಯಿಗೆ ಒಂದರಂತೆ ಮಾರಿ ನಾವು ಲಾಭ ಹಂಚಿಕೊಳ್ಳುತ್ತಿದ್ದೆವು. ಆಗಾಗ ಧಂದಾ ಆಗದಿದ್ದರೆ ಭಿಕ್ಷೆ ಬೇಡುತ್ತಿದ್ದೆವು.”
“ಭಿಕ್ಷೆ ಬೇಡಿದರೆ ಸಾಕಷ್ಟು ಹಣ ಸಿಕ್ಕುತ್ತಿತ್ತೆ?”
“ಓ! ನಾವು ಹೆಚ್ಚಾಗಿ ಅರಬ್ಬರು ಮತ್ತು ಗೋರೆಲೋಗ್ ಬಳಿ ಭಿಕ್ಷೆ ಬೇಡುತ್ತಿದ್ದೆವು. ಕರಿಯರು ಕಂಜೂಸಿಗಳು. ಹೆಚ್ಚು ಹಣ ಕೊಡುವುದಿಲ್ಲ. ಅರಬ್ಬರು ತುಂಬಾ ಒಳ್ಳೆಯವರು- ಒಂದೆರಡು ರೂಪಾಯಿ ಕೊಟ್ಟೇಕೊಡುತ್ತಾರೆ. ಒಂದೊಂದು ಸಲ ಹತ್ತು ರೂಪಾಯಿ ನೋಟು ಕೂಡ ಕೊಡುವುದುಂಟು. ಗೋರೆಲೋಗ್ ಭೀ ದಿಲ್ ವಾಲೇ ಹೋತೇ ಹೈ. ಅವರೂ ದುಡ್ಡು, ಚಾಕೋಲೇಟ್ ಎಲ್ಲಾ ಕೊಡ್ತಿದ್ದರು. ಕೆಲವರು ನಮ್ಮನ್ನು ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಖಾನಾ ಕೊಡಿಸುತ್ತಿದ್ದರು. ಅಲ್ಲದೆ ಅರಬ್ಬರನ್ನು ನಾವು ಹತ್ತಿರದಲ್ಲೇ ಇದ್ದ ಇನ್ನೊಂದು ಹೋಟೆಲಿಗೆ ಕರೆದುಕೊಂಡು ಹೋಗಿ, ತುಂಬಾ ದುಡ್ಡು ಮಾಡತ್ತಿದ್ದೆವು. ಆ ಜಾಗದಲ್ಲಿ ಬೆಳ್ಳಗೆ, ಚೆಂದಾಗಿರುವ ತುಂಬಾ ಹುಡುಗಿಯರಿದ್ದರು. ದಿನವೆಲ್ಲಾ ನಾಚ್‌ಗಾನಾ ನಡೆಯುತ್ತಲೇ ಇರುತ್ತಿತ್ತು. ಅಲ್ಲಿಗೆ ಅರಬ್ಬರನ್ನು ಕರೆದುಕೊಂಡು ಹೋದರೆ ಅವರಿಗೆ ತುಂಬಾ ಖುಷಿಯಾಗುತ್ತಿತ್ತು. ಆಗ ಕೈ ತುಂಬಾ ಹಣ ಕೊಡುತ್ತಿದ್ದರು. ಹಾಂ... ಬಹುತ್ ಮಜಾ ಆತಾ ಥಾ... ಮಜವಾಗಿರುತ್ತಿತ್ತು.”
“ನಿನಗೆ ಈ ಜಾಗ ಇಷ್ಟವಾಯಿತಾ? ಸ್ನೇಹಿತರಿದ್ದಾರಾ ಇಲ್ಲಿ?”
“ಹೂಂ. ನಂಗೆ ಈ ಜಾಗ ಇಷ್ಟ. ಸ್ನೇಹಿತರಿದ್ದಾರೆ. ಆದರೆ ನನಗೆ ಸ್ಕೂಲಿಗೆ ಹೋಗೋದಕ್ಕಿಂತ, ದಿನವೆಲ್ಲ ಕ್ರಿಕೆಟ್ ಆಡಲು ಇಷ್ಟ. ನಂಗೆ ನಮ್ಮ ಸಚಿನ್‌ನಂತೆ ಆಡೋಕೆ ಆಸೆ. ಅಲ್ಲದೆ ಕೇರಂ, ಪೈಂಟಿಂಗ್ ಎಲ್ಲಾ ಇಷ್ಟ. ರೇಡಿಯೋದಲ್ಲಿ ಬರುವ ಸಿನಿಮಾ ಹಾಡೆಲ್ಲಾ ಕಲಿತು ಹಾಡ್ತೀನಿ...”
“ಅಪ್ಪ-ಅಮ್ಮ ನೆನಪು ತುಂಬಾ ಆಗುತ್ತಾ? ಅವರು ನೋಡಲು ಬಂದಿದ್ದರಾ?”
“ನಾನಿಲ್ಲಿಗೆ ಬಂದು ಒಂದು ತಿಂಗಳಾಯಿತು. ಆಗಾಗ ಅವರ ನೆನಪಾಗುತ್ತೆ. ಅದೇಕೋ ಇನ್ನೂ ನನ್ನನ್ನು ನೋಡಲು ಬಂದಿಲ್ಲ. ಆದರೆ ಅವರು ಬಂದೇ ಬರ‍್ತಾರೆ, ನಂಗೊತ್ತು. ಇಲ್ಲಿನ ರ್ ಒಪ್ಪಿಗೆ ಕೊಟ್ಟ ಮೇಲೆ ನಾನು ಮನೆಗೆ ವಾಪಸ್ಸು ಹೋಗ್ತೀನಿ...”
ಆಗಲೇ ಅವನ ದೃಷ್ಟಿ ಪಕ್ಕದಲ್ಲೇ ಕ್ರಿಕೇಟ್ ಪ್ರಾರಂಭಿಸಿದ ಹುಡುಗರ ಮೇಲಿತ್ತು. ನಾನು ಅಲ್ಲಿಂದ ನಡೆದುಹೋದಂತೆ, ನನ್ನತ್ತ ಕೈಬೀಸಿದ.
ಇದಾಗಿ ಕೆಲವು ವರ್ಷಗಳಾಯಿತು.
ವಿನಾಯಕ ಪಾಖರೆ.
ನಾನೀಗ ಮುಂಬೈನಲ್ಲಿ ಅವನನ್ನು ಎಲ್ಲೆಡೆ ಕಾಣುತ್ತಲೇ ಇರುತ್ತೇನೆ.

(ಮುಂಬೈ ಡೈರಿ/ಲಂಕೇಶ್ ಪತ್ರಿಕೆ)

Saturday, November 1, 2014

ಮುಂಬೈ ಕಲಾಸಂತೆಯಲ್ಲೊಬ್ಬ ಸಂತ –ಕಮಲಾಕ್ಷ ಶೆಣೈ

ಕಲಾಸಂತೆಯಲ್ಲೊಬ್ಬ ಸಂತ


»AzÉ 40-50gÀ zÀ±ÀPÀUÀ¼À°è ¸Á«gÁgÀÄ PÀ£ÀßrUÀgÀÄ ªÀÄÄA¨ÉÊUÉ ºÉÆmÉÖ¥Ár UÁV ºÉÆÃUÀÄwÛzÀÝgÀÄ. ¢£ÀªÉ¯Áè ºÉÆÃmÉ®ÄUÀ¼À°è zÀÄrzÀ ºÀÄqÀÄUÀgÀÄ gÁwæ ±Á¯ÉUÀ¼À°è PÀ°vÀÄ ªÀÄÄAzÉ §AzÀÄ zÉÆqÀØ zÉÆqÀØ GzÀåªÀÄUÀ¼À£ÀÄß ¸Áܦ¹ Erà gÁdåzÀ J®èjUÉ GzÉÆåÃUÀ ¸À馅 ªÀiÁqÀÄwÛzÀÝgÀÄ. ªÀÄÄA¨ÉÊUÉ CªÀgÀ PÉÆqÀÄUÉ C¥ÁgÀ.  PÀ¯É, ¸ÀA¸ÀÌöÈw, GzÀåªÀÄ, «eÁߣÀ »ÃUÉ ªÀÄÄA¨ÉÊAiÀÄå°è J¯ÁèPÉëÃvÀæUÀ¼À®Æè ¸ÁzsÀ£É ªÀiÁr ¨sÁµÉ , gÁdåzÀ bÁ¥ÀÅUÀ¼À£ÀÄß zÁn ªÀĺÁgÁµÀÖçzÀ°è ¸ÉßúÀ¢AzÀ ¸ÉÃj vÀªÀÄävÀ£ÀªÀ£ÀÆß G½¹PÉƼÀÄîwÛzÀÝgÀÄ.


ಅಂಥವರಲ್ಲಿ ಶ್ರೇಷ್ಠ ಕಲಾವಿದ ಕಮಲಾಕ್ಷ ಶೆಣೈ ಕೂಡಾ ಒಬ್ಬರು.
ನಾನು ಇಂದು ಮಧ್ಯಾಹ್ನ ಜಹಾಂಗೀರ್ ಆರ‍್ಟ್ ಗ್ಯಾಲರಿ ತಲುಪಿದಾಗ ಮುಂಬೈ ಮಳೆಗಾಲ ಮುಗಿದ ಎಲ್ಲಾ ಕುರುಹುಗಳೂ ಇದ್ದುವು. ಅಕ್ಟೋಬರ್ ಧಗೆ ಬೆವರಿಳಿಸುತ್ತಿತ್ತು. ಸುತ್ತಮುತ್ತಲಿನ ಗಿಡಮರಗಳು ಹಚ್ಚ ಹಸಿರಾಗಿದ್ದವು. ಆರ‍್ಟ್ ಪ್ಲಾಜಾ ಮತ್ತೆ ತೆರೆದಿತ್ತು.
ಫುಟ್ ಪಾತಿನ ರೇಲಿಂಗಿಗೆ ಹೊಂದಿಸಿದ ಸ್ಟಾಂಡುಗಳ ಮೇಲೆ ಮೂರು ತರುಣ ಕಲಾವಿದರ ಚಿತ್ರಗಳು ತೂಗುತ್ತಿದ್ದುವು. ಅಲ್ಲಿನ ಮರದ ಕೆಳಗೆ ಹಾಕಿದ್ದ ಕುರ್ಚಿಯ ಮೇಲೆ, ಕಲಾವಿದರ ನಡುವೆ ಕಮಲಾಕ್ಷ ಶೆಣೈ ಕುಳಿತಿದ್ದರು. ಕಂದುಬಣ್ಣದ ಖಾದಿ ಕುರ್ತಾ, ಕರಿ ಪ್ಯಾಂಟಿನ ಗಡ್ಡದಾರಿ ಶೆಣೈರವರ ಕಣ್ಣುಗಳಲ್ಲಿನ ಯಾವಾಗಿನ ಹೊಳಪು, ತುಟಿಯಂಚಿನ ನಗೆ ಸ್ವಾಗತ ಬೀರಿದವು.
‘ನಿಮ್ಮ ಬಗ್ಗೆ, ಆರ‍್ಟ್ ಪ್ಲಾಜಾ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು. ಬನ್ನಿ ಹರಟೆ ಹೊಡೆಯೋಣ’ ಎಂದೆ. ‘ಓಹೋ’ ಎನ್ನುತ್ತಾ ಖುಷಿಯಿಂದ ಎದ್ದರು. ಎದುರಿಗೇ ಇರುವ ವೇ ಸೈಡ್ ಇನ್ ಗೆ ಹೋಗಿ ಕುಳಿತೆವು. ಪಕ್ಕಾ ಪಾರ‍್ಸಿ ವಾತಾವರಣದ, ಮೆಲುಮಾತಿನ, ಒಳ್ಳೆ ಅಭಿರುಚಿಯ ಆ ತಂಪು ಸ್ಥಳದಲ್ಲಿ ಹೆಚ್ಚು ಗಲಾಟೆಯಿರಲಿಲ್ಲ. ತೆರೆದ ಕಿಟಕಿಯ ಹಸಿರು ಗಿಡಗಳಾಚೆ ಮುಂಬೈ ಮಧ್ಯಾಹ್ನ ಬಸವಳಿದಿತ್ತು.
೧೯೫೨ರಲ್ಲಿ ‘ಮುಂಬೈಗೆ ಹೋಗಿ ಏನಾದ್ರೂ ಮಾಡೋಣ’ ಎಂದುಕೊಂಡು ಉಡುಪಿಯಿಂದ ಇಲ್ಲಿಗೆ ಬಂದವರು ಕಮಲಾಕ್ಷ ಶೆಣೈ. ನಂತರ ನೂತನ್ ಕಲಾಮಂದಿರದಲ್ಲಿ ಅಭ್ಯಾಸ. ಸ್ವಲ್ಪದಿನ ವಿದ್ಯುತ್ ಪರಿಕರಗಳ ಅಂಗಡಿಯಲ್ಲಿ ಕೆಲಸ. ನಂತರ ಕಲ್ಕತ್ತಾಗೆ ಪ್ರಯಾಣ. ಅಲ್ಲಿನ ಗೌವರ‍್ನಮೆಂಟ್ ಕಾಲೇಜ್ ಆಫ್ ಆರ‍್ಟ್ಸ್ ಸೇರಿಕೊಂಡವರು, ಕೋರ‍್ಸ್ ಮುಗಿಯುವ ಮೊದಲೇ ಬಿಟ್ಟಿದ್ದರು.  ‘ಹ್ಯಾಡ್ ಟು ಗಿವ್ ಅಪ್ ಕಾಲೇಜ್ ನಾಟ್ ಟು ಗಿವ್ ಅಪ್ ಆರ‍್ಟ್, ಬಟ್ ಟು ಪರ‍್ಸೂ ಆರ‍್ಟ್!’
ನಂತರ ತಾವೇ ಸಾಧನೆಯಲ್ಲಿ ತೊಡಗಿದರು. ಮೊದಲು ಲೈನ್ಸ್ ಪರ್ಫೆಕ್ಟ್ ಮಾಡಿಕೊಳ್ಳಬೇಕಾಗಿತ್ತು. ೩ ವರ್ಷ ಬರಿಯ ರೇಖೆಗಳನ್ನು ಅಭ್ಯಸಿಸಿದೆ. ಬಣ್ಣಗಳನ್ನು ಮುಟ್ಟಲಿಲ್ಲ. ಮೊದಲ ವರ್ಷ ಯಾವ ಪರ್ಪಸ್ ಇಲ್ಲದೆ ಗೆರೆಗಳನ್ನು ಎಳೆದೆ. ನಂತರ ಆಬ್ಜೆಕ್ಟ್ಸ್‌ಗೆ ಮುಂದುವರಿದೆ. ನನ್ನ ಪ್ರೀತಿಯ ಸ್ಥಳಗಳೆಂದರೆ ತಬೇಲಾಗಳು. ಅಲ್ಲಿ ಹೋಗಿ ಎಮ್ಮೆ, ಹಸುಗಳನ್ನು ಸ್ಕೆಚ್ ಮಾಡುವುದು. ಮತ್ತೆ ಸಿಯೆಲ್ಡಾ ಸ್ಟೇಷನ್. ಅಲ್ಲಿ ಉತ್ತರ ಬಂಗಾಳದಿಂದ ಬಂದ ರೈಫ್ಯೂಜಿಗಳು ತಳ ಊರಿದ್ದರು. ಸುಮ್ಮನೆ ದಿನವೆಲ್ಲಾ ಬಿದ್ದುಕೊಂಡಿರುತ್ತಿದ್ದರು. ತುಂಬಾ “ಇಂಟರೆಸ್ಟಿಂಗ್ ಆಬ್ಜೆಕ್ಟ್ಸ್!” ಬರಿಯ ಪ್ರಖ್ಯಾತ ಕಲಾವಿದರಿಗೆ ಅವಕಾಶ ಕೊಡುತ್ತಿದ್ದ ಅಲ್ಲಿನ ಅಕಾಡೆಮಿ ಆಫ್ ಆರ್ಟ್ಸ್‌ನವರು, ಇವರ ಕೃತಿಗಳನ್ನು ಗಮನಿಸಿ, ಪ್ರದರ್ಶನ ಏರ್ಪಡಿಸಿದ್ದರು.
ಮುಂಬೈಗೆ ಮರಳಿದ್ದು ೫ ವರ್ಷಗಳ ನಂತರ. ಇಲ್ಲಿ ಬರುತ್ತಲೇ ಇಲ್ಲಿನ ತರುಣ ಕಲಾವಿದರ ಸ್ಥಿತಿ ಇವರನ್ನು ತಟ್ಟಿತು. ಬರಿಯ ಪ್ರತಿಭಾವಂತರಾಗಿದ್ದ ಉದಯೋನ್ಮುಖ ಕಲಾವಿದರಿಗೆ ದೊಡ್ಡ ಗ್ಯಾಲರಿಗಳನ್ನು ಬಾಡಿಗೆಗೆ ತೆಗೆದುಕೊಳ್ಳುವುದು ಸಾಧ್ಯವಿರುತ್ತಿರಲಿಲ್ಲ, ಆಗ ಮೊಳಕೆಯೊಡೆದ ಚಳವಳಿ “ರಿಪಲ್.” ಜಹಾಂಗೀರ್ ಆರ್ಟ್ ಗ್ಯಾಲರಿ ಹೊರಗಡೆ ಚಿತ್ರಗಳನ್ನು ಮಾರುವ ಪ್ರಯತ್ನ. ಆಗ ಶನಿವಾರ ಮಧ್ಯಾಹ್ನಗಳು ಗೆಳೆಯರಾದ ಜಯಂತ್ ಕಾಯ್ಕಿಣಿ, ಕುಮಾರ ಜೋಶಿ, ಗಜಾನನ ಉಪಾಧ್ಯಾಯ, ಶರದ್, ರಾವ್ ಬೈಲ್ ಮುಂತಾದವರು ಶೆಣೈರವರ ಸ್ಕೆಚ್‌ಗಳನ್ನು ಮಾರಲು ನಿಲ್ಲುತ್ತಿದ್ದುದು ನೆನಪಿದೆ.
‘ಈ ವಿಚಾರಕ್ಕೆ ಎಲ್ಲರ ಸಹಾನುಭೂತಿಯಿತ್ತು. ಆದರೆ ಕಲಾವಿದರು ಬೀದಿಗಿಳಿಯಲು ತಯಾರಿರಲಿಲ್ಲ. ಅದು ಮರ್ಯಾದೆಗೆ ಕಡಿಮೆಯಾದ ಮಾತಾಗಿತ್ತು. ಅಲ್ಲದೆ, ಆಗ ಅಲ್ಲೆಲ್ಲಾ ಭಿಕ್ಷುಕರು ಕುಳಿತಿರುತ್ತಿದ್ದರು. ತುಂಬಾ ಕೊಳಕಾಗಿರುತ್ತಿತ್ತು. ಮುನಿಸಿಪಾಲಿಟಿಗೆ ನಾವು “ಹಾಕರ‍್ಸ್ ಲೈಸೆನ್ಸ್ ಫೀ” ಕೊಡಬೇಕಾಗಿತ್ತು! ಆಗ ನನಗೆ ಇದನ್ನು ‘ಲೀಗಲೈಸ್’ ಮಾಡುವ ಅವಶ್ಯಕತೆ ಕಂಡು ಬಂದಿತು. ನಾನು ಟೌನಿನ ಮುನಿಸಿಪಲ್ ಕಮೀಷನರ್ ಎಸ್.ಎಸ್. ಟಿನೈಕರ್ ಅವರನ್ನು ಭೇಟಿಯಾದೆ. ಅವರ ಪ್ರತಿಕ್ರಿಯೆ ತುಂಬಾ ಅಚ್ಚರಿ, ಖುಷಿ ತಂದಿತು. ಹಿಂದೆಂದೂ ಕಂಡುಬರದ ಈ ವಿಚಾರವನ್ನು ಅವರು ಅತ್ಯಂತ ಉತ್ಸಾಹದಿಂದ ಸ್ವೀಕರಿಸಿದರು. ತಕ್ಷಣ ನನಗೆ ಪರ್ಮಿಷನ್ ಲೆಟರ್ ಟೈಪ್ ಮಾಡಿಸಿಕೊಟ್ಟರು! ಹಾಗೆ ಜನ್ಮ ತಾಳಿದ್ದು ಆರ್ಟ್ ಪ್ಲಾಜಾ.”
“ಆರ್ಟ್ ಪ್ಲಾಜಾ ಬರಿಯ ಗ್ಯಾಲರಿಯಲ್ಲ. ಇದು ಒಂದು ಚಳವಳಿ. ಇದರ ಗುರಿಯೆಂದರೆ ಪ್ರತಿಭಾವಂತರಾದ, ಆದರೆ ಧನಬಲ್ಲವಿಲ್ಲದ ಕಲಾವಿದರಿಗೆ ಪ್ರದರ್ಶನಗಳನ್ನು ಏರ್ಪಡಿಸಲು ಅವಕಾಶ ಕೊಡುವುದು. ನಾವು ಅದಕ್ಕಾಗಿ ಅವರಿಂದ ಒಂದು ಕಾಸೂ ತೆಗೆದುಕೊಳ್ಳುವುದಿಲ್ಲ. ಅಲ್ಲದೆ, ಚಿತ್ರಗಳನ್ನು ಸಾಮಾನ್ಯ ಜನರಿಗೆ ನಿಲುಕುವ ಬೆಲೆಯಿಟ್ಟು ಮಾರುವುದು. ಅವರಿಂದ ಕಲೆಯನ್ನು ಸರ್ವಸಾಮಾನ್ಯರಿಗೆ ಕೊಂಡೊಯ್ಯುವುದು.”
“ಆರ್ಟ್ ಪ್ಲಾಜಾ ಸ್ವೀಕೃತವಾಗಲು ಸಮಯ ಹಿಡಿಯಿತು. ಪ್ರಾರಂಭವಾದಾಗ ಅನೇಕ ಪ್ರಖ್ಯಾತ ಕಲಾವಿದರು “ಶೆಣೈ ಕಲೆಯನ್ನು ಬೀದಿಗೆಳೆದಿದ್ದಾರೆ” ಎಂದು ಬೈದರು. ಮೊದಮೊದಲು ತರುಣ ಕಲಾವಿದರು ಅಲ್ಲಿ ಪ್ರದರ್ಶಿಸಲು ಹಿಂಜರಿದರು. ನಂತರ ಕೆಲವರು “ನಮ್ಮ ಪೇಟಿಂಗ್‌ಗಳನ್ನು ಕಳಿಸುತ್ತೇವೆ. ಆದರೆ ನಾವು ಕೂಡುವುದಿಲ್ಲ” ಎಂದರು! ಈಗ ಅಕ್ಟೋಬರ್‌ನಿಂದ ಮಳೆಗಾಲದವರೆಗೂ ಪೂರ್ತಿ ಪ್ರದರ್ಶನಗಳಿದ್ದೇ ಇರುತ್ತದೆ. ಟಿನೈಕರ್ ಹಾಕರ‍್ಸ್ ಲೈಸನ್ಸ್ ಫೀ ಬಂದ್ ಮಾಡಿಸಿ, ಕಲಾವಿದರಿಗೆ ಸಲ್ಲಬೇಕಾಗಿದ್ದ ಗೌರವ ಕೊಡಿಸಿದರು. ಮುನಿಸಿಪಾಲಿಟಿ ಪ್ರದರ್ಶನಕ್ಕೆ ಬರುವ ಪೇಟಿಂಗ್‌ಗಳನ್ನು ಇಡಲು ಸ್ಥಳ ಕೊಟ್ಟರು. ಏಪ್ರಿಲ್ ೮೮ರಲ್ಲಿ ಮೊದಲ ಪ್ರದರ್ಶನ ಮಾಡಿದ್ದೆವು. ಪ್ರಯೋಗಕ್ಕಾಗಿ. ಅದು ಯಶಸ್ವಿಯಾದ ಮೇಲೆ ಆರ್ಟ್ ಪ್ಲಾಜಾದಲ್ಲಿ ಪ್ರದರ್ಶನಗಳು ಶುರುವಾಯಿತು. ಕಲೆಯನ್ನು ಪ್ರಮೋಟ್ ಮಾಡಲು ತುಂಬಾ ಸಂಸ್ಥೆಗಳಿವೆ. ನಮ್ಮ ಉದ್ದೇಶ ಕಲಾವಿದರನ್ನು ಪ್ರಮೋಟ್ ಮಾಡುವುದು.”
ಶೆಣೈ ಈಗ ಬದಲಾಗಿರುವ “ಆರ್ಟ್ ಸೀನ್” ಬಗ್ಗೆ ತುಂಬಾ ಕಳಕಳಿಯಿಂದ ಮುಂದುವರಿದರು. “೨೫ ವರ್ಷಗಳ ಹಿಂದೆ ಯಾರೂ ಪೇಟಿಂಗ್‌ಗಳನ್ನು ಕೊಳ್ಳುತ್ತಿರಲಿಲ್ಲ. ಆದರೆ ಈಗ ಸಂಸ್ಕೃತಿ ಬದಲಾಗಿದೆ. ದೊಡ್ಡ ಕಂಪೆನಿಗಳವರು, ಹೊಸ ಸಿರಿವಂತರು ಸಾವಿರಾರು ರೂಪಾಯಿ ಕೊಟ್ಟು ಕೊಳ್ಳುತ್ತಾರೆ. ಆದರೆ ಅವರು ಬೆಲೆ ನೋಡಿಕೊಳ್ಳುತ್ತಾರೆ. ಅವರೆಲ್ಲಾ ಆರ್ಟ್ ಪ್ಲಾಜಾದಿಂದ ಕೊಳ್ಳುವವರಲ್ಲ. ಈಗ ಕಲಾವಿದರೂ ಬದಲಾಗಿದ್ದಾರೆ. ತಮ್ಮ ಯಶಸ್ಸನ್ನು ಎಷ್ಟು ಪೇಟಿಂಗ್‌ಗಳು ಮಾರಾಟವಾದುವು ಎನ್ನುವುದರ ಮೇಲೆ ಅಳೆಯುತ್ತಾರೆ. ಈಗ ಅವರು ಸಾಮಾನ್ಯ ಜನರನ್ನು ತಲುಪಬೇಕು. ನಮ್ಮ ಮುಂದಿನ ಯೋಜನೆ ‘ಆರ್ಟ್ ಅಟ್ ಯುವರ್ ಡೋರ್ ಸ್ಟೆಪ್.’ ಹೌಸಿಂಗ್ ಸೊಸೈಟಿಗಳು, ಕಾಲೋನಿಗಳಲ್ಲಿ ಪ್ರದರ್ಶನಗಳಿಡಬೇಕು. ಇದಕ್ಕಾಗಿ ಬದ್ಧರಾದ ಜನರ ಸಹಾಯ ಬೇಕು. ಅದು ಕಷ್ಟ... ಇದಕ್ಕೆಲ್ಲಾ ಭದ್ರ ಬುನಾದಿ ಹಾಕಲು ಈಗ ಆರ್ಟ್ ಪ್ಲಾಜಾ ಆರ್ಟಿಸ್ಟ್ಸ್ ಅಸೋಸಿಯೇಷನ್ ಮಾಡಿಕೊಂಡಿದ್ದೇನೆ...”
ಇಷ್ಟು ವರ್ಷಗಳಿಂದ ತಮ್ಮ ತಪಸ್ಸನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಕಮಲಾಕ್ಷ ಶೆಣೈ ಅವರು ಒಂಟಿಯಾಗಿ ದೊಂಬಿವಿಲಿಯಲ್ಲಿ ವಾಸಿಸುತ್ತಾರೆ. “ನಾನು ೧೪ ವರ್ಷದಿಂದ ಈ ಮನೆಯಲ್ಲಿ ವಾಸಿಸುತ್ತೇನೆ. ಆ ಮನೆಗೆ ಹೋದಾಗ ತಿಂಗಳಿಗೆ ೪೫ ರೂಪಾಯಿ ಬಾಡಿಗೆ ಕೊಡುತ್ತಿದ್ದೆ. ಮನೆಯ ಮಾಲೀಕ ಗಜಾನನ ಅಂಬೋಮ್ಹಾತ್ರೆ. ಓದು-ಬರಹ ಬಾರದ ಮುಗ್ಧ. ಬಿಲ್ಡಿಂಗಿನ ಬೇರೆಲ್ಲರಿಗೂ ಬಾಡಿಗೆ ಹೆಚ್ಚು ಮಾಡಿದಾಗಲೂ ನನಗೆ ಏರಿಸುತ್ತಿರಲಿಲ್ಲ. ಅವರೆಲ್ಲಾ ಹಾಗೇಕೆಂದು ಕೇಳಿದರೆ “ಅವನೊಬ್ಬ ಸನ್ಯಾಸಿ. ನೀವೂ ಹಾಗೇ ಇರಿ. ನಿಮಗೂ ಜಾಸ್ತಿ ಮಾಡೊಲ್ಲ” ಅಂತಿದ್ದ; ಆರ್ಟ್ ಪ್ಲಾಜಾ ಪ್ರಾರಂಭವಾದಾಗ ಅದರ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ ವಿವರಗಳು ಬಂದಿದ್ದವು. ಒಂದು ಮರಾಠಿ ಪತ್ರಿಕೆಯಲ್ಲಿ ನನ್ನ ಫೋಟೋ ನೋಡಿ, ಯಾರಿಂದಲೋ ಓದಿಸಿ ಅದೇನೆಂದು ತಿಳಿದುಕೊಂಡ. ರಾತ್ರಿ ಮನೆಗೆ ಬಂದವನೇ ನನ್ನನ್ನು ಕರೆಸಿ “ನೀವು ಇನ್ನು ಮೇಲೆ ಬಾಡಿಗೆ ಕೊಡಕೂಡದು. ನಿಮ್ಮಂಥವರಿಂದ ಬಾಡಿಗೆ ತೆಗೆದುಕೊಳ್ಳಲಾರೆ” ಎಂದು ಹೇಳಿಬಿಟ್ಟ. ಅಂದಿನಿಂದ ನನ್ನಿಂದ ಒಂದು ಪೈಸೆ ತೆಗೆದುಕೊಂಡಿಲ್ಲ. ಈಗಲೂ ಇಂಥವರು ಇದ್ದಾರೆ. ಅವರು ಬದಲಾಯಿಸಿಲ್ಲ. ಹಿಂದೆ ಕಲಾವಿದರಿಗೆ, ಸಾಹಿತಿಗಳಿಗೆ ಸಂಗೀತಗಾರರಿಗೆ ಸಮಾಜದಲ್ಲಿ ವಿಶೇಷ ಸ್ಥಾನವಿತ್ತು. ಗೌರವವಿತ್ತು. ಏಕೆಂದರೆ ಅಶರು ಎಲ್ಲರಿಗಿಂತ ಬೇರೆಯಾಗಿ ಬದುಕುತ್ತಿದ್ದರು. ಈಗ ೯೯% ಕಲಾವಿದರು ಬಿಸಿನೆಸ್‌ಮೆನ್ ಆಗಿಬಿಟ್ಟಿದ್ದಾರೆ. ಅವರೂ ಎಲ್ಲರಂತೆಯೇ ಬದುಕುವುದರಿಂದ ಆ ಸ್ಥಾನ ಕಳೆದುಕೊಂಡು ಬಿಟ್ಟಿದ್ದಾರೆ...”
ಅವರೊಡನೆ ಮಾತಾಡುತ್ತಿದ್ದಾಗ ಸಮಯ ಹೋದದ್ದೇ ತಿಳಿಯಲಿಲ್ಲ. ಹೊರಡುವ ಮೊದಲು ಶೆಣೈ ಅವರನ್ನು ಅನುಮಾನಿಸುತ್ತ ಕೇಳಿದೆ:
“ನಿಮ್ಮನ್ನೊಂದು ವೈಯಕ್ತಿಕ ಪ್ರಶ್ನೆ ಕೇಳಲೇ?”
“ಓಹೋ.”
“ನೀವೇಕೆ ಮದುವೆಯಾಗಿಲ್ಲ?”
“ಐ ಡೋಂಟ್ ನೋ. ಐ ವಸ್ ನೆವರ್ ಇನ್ ಎ ಪೊಸಿಷನ್ ಟು ಗೆಟ್ ಮ್ಯಾರೀಡ್!” ಎಂದು ನಕ್ಕುಬಿಟ್ಟರು.
ನನಗೆ ಕೈ ಬೀಸಿ, ತಮಗಾಗಿ ಕಾದಿದ್ದ ಕಲಾವಿದರನ್ನು ಸೇರಲು ಅವರು ರಸ್ತೆ ದಾಟಿದರು. ಮಳೆಗಾಲದ ಖುಷಿಯಲ್ಲಿ ಹುಚ್ಚಾಪಟ್ಟೆ ಬೆಳೆದು ಅರಳಿನಿಂತ ಮರಗಳನ್ನು ರಸ್ತೆಯ ಅಂದಚೆಂದಕ್ಕೆ ಹೊಂದುವಂತೆ, ಎತ್ತರವಾದ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕತ್ತರಿಸಿ ಮಟ್ಟಸ ಮಾಡುವ ಬೆಸ್ಟ್‌ನ (ಃesಣ) ವಿಚಿತ್ರ ವಾಹನ ರಸ್ತೆಯ ಕೊನೆಗೆ ಹಾಜರಾಗಿತ್ತು.

-ಉಮಾ ರಾವ್. (ಮುಂಬೈ ಡೈರಿ, ಲಂಕೇಶ್ ಪತ್ರಿಕೆ,೧೯೯೪)
ಚಿತ್ರ: ಶೆಣೈ ತಮ್ಮನ್ನು ತಾವು ಕಂಡಂತೆ

Wednesday, October 15, 2014

ಜೆಂಡರ್ ಬಯಸ್--ಒಂದೊಂದು ಕಡೆ ಒಂದೊದು ಥರಾ...ಕಂಬದ ಬದಿ ನಿಂತರೆ

ನನ್ನ ಗೆಳೆತಿಯನ್ನು ವಿ.ಟಿ.ಸ್ಟೇಷನ್ನಿನಲ್ಲಿ ಭೇಟಿ ಮಾಡಿ, ಅಲ್ಲಿಂದ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿದ್ದ ಭೂಪೆನ್ ಕಕ್ಕಡ್ ಅವರ ಚಿತ್ರ ಪ್ರದರ್ಶನಕ್ಕೆ ಹೋಗುವುದಿತ್ತು. ಹಾರ್ಬರ್ ಲೈನ್ ಇಂಡಿಕೇಟರ್ ಹತ್ತಿರ .೩೦ಕ್ಕೆ ಸೇರುವುದೆಂದು ಗೊತ್ತುಪಡಿಸಿಕೊಂಡಿದ್ದೆವು.
ಕೆಲಸ ಮುಗಿಸಿ, ವಿ.ಟಿ. ತಲುಪಿದಾಗ ಇನ್ನೂ ೧೦ ನಿಮಿಷವಿತ್ತು. ಮನೆಗೆ ಮರಳುವವರ ನೂಕುನುಗ್ಗಲು, ಗಲಾಟೆ. ಟ್ರೈನುಗಳತ್ತ ಓಡುವವರು. ಪಟಪಟ ಬದಲಾಗುತ್ತಿದ್ದ ಇಂಡಿಕೇಟರ್ಗಳು. ಭೋಂ, ಭೋಂ ಮಾಡುತ್ತಿದ್ದ ಟ್ರೈನುಗಳು. ಆವರಿಸುತ್ತಿದ್ದ ನೀಲಿ-ಹಳದಿ ಬೆಳಕು. ಎಲ್ಲಾ ವಿಚಿತ್ರವಾಗಿತ್ತು. ತಳ್ಳಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಸರಿದು ಪಕ್ಕದಲ್ಲಿದ್ದ ಕಂಬದ ಬದಿ ನಿಂತೆ, ಬರಹೋಗುವವರನ್ನು ನೋಡುತ್ತಾ. ಇದ್ದಕ್ಕಿದ್ದಂತೆ, ಸುತ್ತಮುತ್ತಲಿನ ಕೆಲವರು ನನ್ನ ಹತ್ತಿರವಾದಂತೆ ನಡಿಗೆ ನಿಧಾನಮಾಡಿ, ನನ್ನತ್ತ ದಿಟ್ಟಿಸಿ ಮುಂದುವರಿಯುತ್ತಿದ್ದಂತೆ ಭಾಸವಾಯಿತು. ಒಂದು ಕೆಂಪು ಟೀ ಶರಟಿನ ವ್ಯಕ್ತಿ ನನ್ನಿಂದು ಒಂದೆರಡು ಅಡಿ ದೂರ ನಿಂತು ಬಾರಿಬಾರಿ ನನ್ನತ್ತ ನೋಡತೊಡಗಿದ. ಟಿಕೆಟ್ ಕ್ಯೂಗಳಲ್ಲಿ ಗಂಡಸರು, ಹೆಂಗಸರು ಒಟ್ಟಿಗೆ ನಿಲ್ಲುವ ಬಗ್ಗೆಬೆಸ್ಟ್ ಬಸ್ಸುಗಳಲ್ಲಿ  ಲೇಡೀಸ್ ಓನ್ಲಿ ಜಾಗಗಳನ್ನು ಹೆಂಗಸರು ಉಪಯೋಗಿಸದ ಬಗ್ಗೆ, ರಾತ್ರಿ ೧೦ ಗಂಟೆಗೂ ಟ್ಯಾಕ್ಸಿಯಲ್ಲಿ ಒಬ್ಬಂಟಿ ಓಡಾಡಬಹುದಾದ ಸ್ವಾತಂತ್ರ್ಯದ ಬಗ್ಗೆ, ಮುಂಬೈಯಲ್ಲಿ ಹೆಣ್ಣಿಗಿರುವ ಸುರಕ್ಷತೆ ಬಗ್ಗೆ, ಖುಷಿ ಪಡುತ್ತಿದ್ದ ನನಗೆ, ಎಷ್ಟೋ ಜೊತೆ ಅಪರಿಚಿತ ಕಣ್ಣುಗಳಲ್ಲಿ ಇಲ್ಲೇಕೆ ಸಿಕ್ಕಿದೆನೆನ್ನಿಸಿ ಕಸಿವಿಸಿ. ನನ್ನ ಗೆಳತಿಯ ಪತ್ತೆ ಇಲ್ಲ. ಒಂದೆರಡು ಹೆಜ್ಜೆ ಹಾಕಿ ಠಾಣಾ ಲೋಕಲ್ಲಿನಿಂದ ಬಂದ ಹೆಂಗಸರ ಪ್ರವಾಹದ ಮೇಲೆ ಕಣ್ಣಾಡಿಸುತ್ತಿದ್ದಂತೆ, ಕೆಂಪು ಶರಟಿನವನು ಏನೋ ಗೊಣಗತೊಡಗಿದ. ಮುಜುಗರ ಹೆಚ್ಚಾಗಿ ಬುಕ್ ಸ್ಟಾಲ್ನತ್ತ ಹೆಜ್ಜೆ ಹಾಕಿದೆ. ಆಗಲೇ ಗೆಳತಿ ಪ್ರತ್ಯಕ್ಷ. ತಡ ಮಾಡಿದ್ದಕ್ಕೆ ಅವಳನ್ನು ಬೈದು, ನನ್ನ ಗೋಳು ಹೇಳಿಕೊಂಡೆ. ಅವಳು ನಗುತ್ತಾಸ್ಟುಪಿಡ್, ೨೦ ವರ್ಷದಿಂದ ಮುಂಬೈಯಲ್ಲಿದ್ದು ಇಷ್ಟೂ ಗೊತ್ತಿಲ್ಲವಾ? ಕಂಬದಡಿ ನಿಲ್ಲುವವರು ಕಾಲ್ಗರ್ಲ್ಸ್. ವಿ.ಟಿಯಲ್ಲಿ ರೀತಿ ಗುರುತಿಸುವ ಎಷ್ಟೋ ಕಂಬಗಳಿವೆ. ಅಲ್ಲಿ ನಿಂತರೆ ಏನಾಗುತ್ತೆ?” ಎಂದಳು.

ಬಿಂದಿಯ ಗುಟ್ಟೇನು?

ಆಗ ವ್ಯಾಂಕೋವರ್ನಲ್ಲಿ ಇತ್ತೀಚೆಗೆ ಆದ ಒಂದು ಅನುಭವ ನೆನಪಾಯಿತು. ಅಲ್ಲಿದ್ದ ತಿಂಗಳೂ ಪ್ರತಿ ಶನಿವಾರ, ಭಾನುವಾರ ಊರು ತಿರುಗಲು ಹೋಗುತ್ತಿದ್ದೆ. ಅಂದು ಗ್ಯಾಸ್ಟೌನಿಗೆ ಹೋಗುವ ಪ್ಲ್ಯಾನ್ ಹಾಕಿಕೊಂಡೆ. ಗ್ಯಾಸ್ಟೌನ್ ಶತಮಾನಕ್ಕೂ ಹಿಂದೆ ವ್ಯಾಂಕೋವರ್ ಹುಟ್ಟಿಕೊಂಡ ಸ್ಥಳ. ಇಂದಿಗೂ ಅದನ್ನು ಹಾಗೇ ಕಾಪಾಡಿಕೊಂಡು ಬಂದಿದ್ದಾರೆ. ಅಲ್ಲಿಗೆ ಹೋಗುವ ಮೊದಲು ಸ್ನೇಹಿತರು ಎಚ್ಚರಿಸಿದ್ದರು. “ಕತ್ತಲಾದ ಮೇಲೆ ಅಲ್ಲಿರಬೇಡ, ಯಾರಾದರೂ ಮಾತಾಡಿಸಿದರೆ ಮಾತಾಡಬೇಡ. ಇಟ್ಸ್ ಫುಲ್ ಆಫ್ ಶೇಡಿ ಕ್ಯಾರೆಕ್ಟರ್ಸ್ ಎಂಡ್ ಡ್ರಗ್ ಅಡಿಕ್ಟ್ಸ್...” ಎಂದೆಲ್ಲಾ. ಅಂದು ಹೆಚ್ಚು ಜನರಿರಲಿಲ್ಲ. ಸಣ್ಣ ಮಳೆ ಬೇರೆ. ಸಾಮಿಲ್ ಕೆಲಸಗಾರರಿಗೆ ಸಾರಾಯಿ ಮಾರುವುದರ ಮೂಲಕ, ಗ್ಯಾಸ್ಟೌನ್ ಸ್ಥಾಪನೆಗೆ ಕಾರಣನಾದ ಗ್ಯಾಸಿ ಜ್ಯಾಕ್ ಪ್ರತಿಮೆ ನೋಡಿಕೊಂಡು, ಜಗತ್ಪ್ರಸಿದ್ಧ ಸ್ಟೀಮ್ಕ್ಲಾಕ್ ಹೊಡೆಯಲು ಕಾಯುತ್ತಾ ನಿಂತಿದ್ದಾಗ, ಅವಳು ನನ್ನನ್ನು ದಿಟ್ಟಿಸುತ್ತಿದ್ದ ಅನುಭವವಾಯಿತು. ಹಳೆಯ ಜೀನ್ಸ್, ಜ್ಯಾಕೆಟ್ಟಿನಲ್ಲಿದ್ದ ೩೦-೩೫ ವಯಸ್ಸಿನ ಏಷಿಯನ್ ಹೆಣ್ಣು. ಥೈಲ್ಯಾಂಡಿನವಳೇನೋ, ಮುಖದ ತುಂಬಾ ಅದಕ್ಕೇ ಸೇರಿದ್ದೇ ಅಲ್ಲವೇನೋ ಎನ್ನುವ ರೀತಿಯ ಮೇಕಪ್, ರೂಜ್, ಲಿಪ್ಸ್ಟಿಕ್, ಮೂಗುಬಟ್ಟು, ಕೈತುಂಬಾ ಬೆಳ್ಳಿ ಬಳೆಗಳು. ಹತ್ತಿರ ಬಂದುಯೂ, ಇಂಡಿಯನ್?” ಎಂದಳು.
ಎಸ್...”
ಡೋಂಟ್ ವೇರ್ ಸ್ಯಾರಿ?” ನನ್ನ ಜೀನ್ಸ್ ಮೇಲೆ ಕಣ್ಣಾಡಿಸುತ್ತಾ ಕೇಳಿದಳು.
ಡೂ, ಅಕೇಶನಲಿ... ನಾಟ್ ಎವ್ರಿಡೇ...” ಎಂದೆ.
ಮ್ಯಾಮ್, ಡು ಯೂ ಹ್ಯಾವ್ ಸಮ್ ಚೇಂಜ್...?” ಎನ್ನುತ್ತಾ ಹಿಂದೆ ಹಿಂದೆ ಬಂದಳು.
ಸಾರಿ.” ನಾನು ಅಲ್ಲಿಂದ ನಡೆದು ಸ್ವಲ್ಪ ದೂರದಲ್ಲಿ ನಿಂತಿದ್ದ - ಜನರ ಗುಂಪಿನ ಸುರಕ್ಷತೆಗೆ ಶರಣಾಗಲು ಬೇಗಬೇಗ ಕಾಲು ಹಾಕಿದೆ.
ಇದ್ದಕ್ಕಿದ್ದಂತೆ ಅವಳು ನನ್ನೆದುರು ಬಂದು ನಿಂತಳು. ನನ್ನ ಕುಂಕುಮದ ಮೇಲೆ ಬೆರಳಿಟ್ಟುವಾಟ್ ಡಸ್ ಇಟ್ ಮೀನ್? ಸೇ... ಡಸ್ ಇಟ್ ಮೀನ್ ಯೂ ಆರ್ ಟೇಕನ್?” ಎಂದಳು.

ಪ್ರಶ್ನೆಯಿಂದ ಚೇತರಿಸಿಕೊಳ್ಳಲು ದಿನಗಳೇ ಬೇಕಾಯಿತು.

-ಮುಂಬೈ ಡೈರಿ, ಲಂಕೇಶ್ ಪತ್ರಿಕೆ, ೧೯೯೪

Thursday, September 18, 2014

ದೇವಯಾನಿ ಚೌಬಳ್. ಸಿನೆಮಾ ಗಾಸಿಪ್ ಬರವಣಿಗೆಗೆ ಹೊಸ ಚೆಹರೆ ತಂದ ದಿಟ್ಟ ಚೆಲುವೆ


ಫ್ಲ್ಯಾಶ್ ಬಲ್ಬ್‌ಗಳ ನಡುವೆ ಒಂದು ಕೆಂಪು ಗುಲಾಬಿ


ಬೂದು ಬಣ್ಣದ ಆಕಾಶ. ಎಡೆಬಿಡದೆ ಸುರಿಯುವ ಮಳೆ. ತೆವಳುತ್ತಾ ಸಾಗುವ ರೈಲುಗಳು. ಸೀಟೆಲ್ಲಾ ಒದ್ದೊದ್ದೆ. ರೈಲು ಹತ್ತಿ ಮುದುಡಿ ಹೋಗಿದ್ದ ‘ಆಫ್ಟರ್ ನೂನ್’ ತೆಗೆದಾಗ ಕಣ್ಣಿಗೆ ಬಿದ್ದಿದ್ದು ದೇವಿಯ ಚಿತ್ರ. ದೇವಯಾನಿ ಚೌಬಳ್ ಇನ್ನಿಲ್ಲ.
ಮುಂಬೈಯಲ್ಲಿರದಿದ್ದರೆ, ದೇವಯಾನಿ ಚೌಬಳ್ ಬಹುಶಃ ದೇವಿಯಾಗುತ್ತಿರಲಿಲ್ಲ. ಸಿರಿವಂತ ರೇಸಿಂಗ್ ಕುಟುಂಬ ಒಂದರಲ್ಲಿ ಹುಟ್ಟಿದ ಈ ಹುಡುಗಿಗೆ ಚಿಕ್ಕಂದಿನಿಂದಲೇ ಸಿನಿಮಾ ಹುಚ್ಚು. ಗೆಳತಿಯರೊಡನೆಯೂ ಅದೇ ಹರಟೆ. ಸ್ಕೂಲು ತಪ್ಪಿಸಿ ಸಿನಿಮಾಗೆ ಹೋಗುವ ಅಭ್ಯಾಸ. ದಿನಾ ಎದುರಿಗೇ ಸಿಗುತ್ತಿದ್ದರೂ ಮುಚ್ಚಿದ ಗೇಟು ತೆರೆದು ಒಳಗೆ ಹೋಗುವ ಧೈರ್ಯ ಮಾಡದ ದೇವಿ, ಕೊನೆಗೊಂದು ದಿನ ಗೆಳತಿಯ ಜೊತೆ ಮೀನಾಕುಮಾರಿಯ ಮನೆಯ ಒಳಗೆ ಹೊಕ್ಕಗಳಿಗೆ ಅವಳ ಬದುಕು ಹೊಸ ತಿರುವು ಪಡೆದಿತ್ತು. ಈ ಹಾಲು-ಕೇಸರಿ ಕೆನ್ನೆಯ, ಹದಿಹರೆಯದ, ಸ್ಕರ್ಟಿನ ಚೆಲುವೆಯನ್ನು ಮೀನಾಕುಮಾರಿ ಆದರದಿಂದ ಬರಮಾಡಿಕೊಂಡಿದ್ದರಂತೆ. ಅವಳ ಸುಂದರ ನೀಳ ಬೆರಳುಗಳಿಗೆ ತಾವೇ ಮೆಹಂದಿ ಹಚ್ಚಿದ್ದರಂತೆ. ತಮಗಾಗಿ ತರಿಸಿಕೊಂಡಿದ್ದ ಗಜರಾ ಅವಳ ಉದ್ದನೆಯ ಎರಡು ಜಡೆಗಳಿಗೆ ಮುಡಿಸಿ ಕಳಿಸಿದ್ದರಂತೆ. ನಂತರ ದೇವಿ ಆಗಾಗ ಅವರ ಮನೆಗೆ ಹೋಗುತ್ತಿದ್ದಳು.
ಆಗ ಮೀನಾಕುಮಾರಿ ಏನೇನೋ ಹರಟುತ್ತಿದ್ದರಂತೆ. ಅವಳಿಗೆ ಅರ್ಥವಾಗದ ತಮ್ಮ ಕವಿತೆಗಳನ್ನು ಓದುತ್ತಿದ್ದರಂತೆ. ಹುಡುಗರನ್ನು ಆಕರ್ಷಿಸಬೇಕಾದರೆ ಅವರತ್ತ ಹೇಗೆ ನೋಡಬೇಕು- “ಸೀದಾ ದಿಟ್ಟಿಸಬಾರದು. ತಗ್ಗಿಸಿದ ಕಣ್ಣುಗಳನ್ನು ಛಕ್ಕನೆ ಎತ್ತಿ ಒಂದೆರಡು ಬಾರಿ ಪಟಪಟನೆ ರೆಪ್ಪೆ ಮಿಟುಕಿಸಿ, ಮತ್ತೆ ಕೆಳಗಿಳಿಸಬೇಕು. ಅವನು ಸೆರೆಯಾದಂತೆಯೇ” ಎಂದೆಲ್ಲಾ ಹೇಳಿಕೊಡುತ್ತಿದ್ದರಂತೆ. ದೇವಿ ಅದನ್ನು ಅಭ್ಯಾಸ ಮಾಡಲು ಹೋಗಿ, ಸಾಧ್ಯವಾಗದೆ ಬಿದ್ದುಬಿದ್ದು ನಗುತ್ತಿದ್ದಳಂತೆ!
ಒಂದು ದಿನ ಮಹಾಲಕ್ಷ್ಮಿ ರೇಸ್‌ಕೋರ್ಸಿನಲ್ಲಿ ರಾಜ್‌ಕಪೂರ್ ದೇವಿಯನ್ನು ಕಂಡಾಗ, “ಹೂ ಈಸ್ ದಟ್ ಲವ್ಲೀ ಗರ್ಲ್?” ಎಂದು ಉದ್ಗರಿಸಿದ್ದರಂತೆ. ಅಂಥಾ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ದೇವಿ ಬೆಳ್ಳಿತೆರೆಯ ಮೇಲೂ ತಾರೆಯಾಗಿ ಮಿಂಚಬಹುದಿತ್ತು. ಆದರೆ ಅವಳು ಹಾಗೆ ಮಾಡಲಿಲ್ಲ. ಬದಲು, ಸಿನಿಮಾ ತಾರೆಯರ ಹೊಗಳಿಕೆಗೇ ಮೀಸಲಾಗಿದ್ದ ಪತ್ರಿಕೆಗಳು ತುಂಬಿಹೋಗಿದ್ದ ಆ ಕಾಲದಲ್ಲಿ, ಮೊದಲ ಬಾರಿ ಕತ್ತಿ ಅಲಗಿನಂತಹ “ಗಾಸಿಪ್ ಕಾಲಂ” ಪ್ರಾರಂಭ ಮಾಡಿದ್ದಳು. “ಸ್ಟಾರ್ ಅಂಡ್ ಸ್ಟೈಲ್” ಮತ್ತು “ಈವ್ಸ್ ವೀಕ್ಲಿ”ಗಳಲ್ಲಿ ಭರಾಟೆಯಿಂದ ಬರತೊಡಗಿದ ಅವಳ “ಫ್ರಾಂಕ್ಲೀ ಸ್ಪೀಕಿಂಗ್” ಎಷ್ಟು ಜನಪ್ರಿಯವಾಯಿತೆಂದರೆ, ಅದರ ಆಧಾರದ ಮೇಲೆ “ಸ್ಟಾರ್ ಅಂಡ್ ಸ್ಟೈಲ್” ನಡೆಯುತ್ತಿತ್ತು. ಸಿನಿಮಾ ತಾರೆಯರ ವೈಯಕ್ತಿಕ ಬದುಕು, ಚಿತ್ರರಂಗದಲ್ಲಿ ಅವರ ಭವಿಷ್ಯ, ಅವರ ಯಶಸ್ಸು-ಅಪಯಶಸ್ಸುಗಳ ಗುಟ್ಟುಗಳು, ಅವರ ಪ್ರೀತಿ-ದ್ವೇಷ-ಸ್ನೇಹ-ಸಣ್ಣತನಗಳು, ಪ್ರೇಮ ಪ್ರಕರಣಗಳು-ಎಲ್ಲದರ ಬಗ್ಗೆ ಬಿಚ್ಚುಮನಸ್ಸಿನಿಂದ ಬರೆಯುತ್ತಿದ್ದಳು. ಅವಳ ಬರವಣಿಗೆಯಲ್ಲಿ ಸ್ವಾರಸ್ಯವಿತ್ತು. ತೀಕ್ಷ್ಣತೆಯಿತ್ತು. ಚಾತುರ್ಯವಿತ್ತು. ನಿಷ್ಕರುಣೆಯಿತ್ತು. ಮಾರ್ದವವಿತ್ತು. ಈ ಎಲ್ಲದರ ಮಧ್ಯೆ, ಈ ಒಳಿತು-ಕೆಡಕು-ಪ್ರೇಮ-ಮತ್ಸರಗಳನ್ನು ಮೀರಿದ ಚಿತ್ರರಂಗದವರೆಲ್ಲಾ ಒಂದೇ ಕುಟುಂಬದವರೆಂಬ ಅನುಭೂತಿಯಿತ್ತು. ಹಾಗಾಗಿ ಅವಳ ಕಾಲಮ್ಮಿಗೆ ಗೃಹಣಿಯರು, ವಿದ್ಯಾರ್ಥಿಗಳು, ಆಫೀಸರುಗಳು, ಡಾಕ್ಟರುಗಳು, ವಿಜ್ಞಾನಿಗಳು, ನಟ-ನಟಿಯರು-ಎಲ್ಲರನ್ನೂ ಸೆಳೆಯುವ ಮಾಂತ್ರಿಕತೆಯಿತ್ತು.
ಚಿತ್ರರಂಗದಲ್ಲಿ ಅವಳನ್ನು ಪ್ರೀತಿಸುವವರಿದ್ದರು. ದ್ವೇಷಿಸುವವರಿದ್ದರು. ಹೆದರುವವರಿದ್ದರು. ಒಬ್ಬ ತಾರೆಯ ಏಳುಬೀಳುಗಳನ್ನು ನಿಯಂತ್ರಿಸುವ ಶಕ್ತಿ ಅವಳ ಲೇಖನಿಯಲ್ಲಿದ್ದುದನ್ನು ಕಂಡುಕೊಂಡಿದ್ದರು. ಧರ್ಮೇಂದ್ರನ ಮಗ ಸನ್ನಿ ಚಿತ್ರರಂಗ ಪ್ರವೇಶಿಸುವುದರಲ್ಲಿದ್ದಾಗ “ಅವನು ಬಿಂದಿಯಾ ಗೋಸ್ವಾಮಿಗೆ ಪ್ಯಾಂಟು ತೊಡಿಸಿದಂತಿದ್ದಾನೆ” ಎಂದು ಬರೆದು, ಅವನ ಬೇಡಿಕೆ ಹತ್ತು ಪಟ್ಟು ಬೀಳಲು ಕಾರಣವಾಗಿದ್ದಳು. ಒಂದು ರಾತ್ರಿ ಯಾವುದೋ ಪಾರ್ಟಿಯಿಂದ ಮರಳುವಾಗ, ಅವಳೊಡನಿದ್ದ ರಾಜ್‌ಕಪೂರ್ ಮತ್ತಿನಲ್ಲಿ “ದುದ್ದೂ, ದುದ್ದೂ...” ಎಂದು ಬಡಬಡಿಸಿದ ರೀತಿಯನ್ನು ವರ್ಣಿಸಿ ಎಲ್ಲರನ್ನೂ ಬೆಚ್ಚಿಸಿದ್ದಳು. “ರೇಖಾ ಪಡೆದಿರುವ ಹೊಸ ತೆಳು ಮೈಕಟ್ಟಿನ ಗುಟ್ಟು “ಜೇನ್ ಫಾಂಡಾ ಪೋಗ್ರಾಮ್” ಅಲ್ಲ. ಡಾ. ಪಾಂಡ್ಯಾ...” ಎಂದು ತೋರಿಸಿ ಸಾಕಷ್ಟು ಚಂಡಮಾರುತ ಎಬ್ಬಿಸಿದ್ದಳು. ಧರ್ಮೇಂದ್ರ ಕೋಪದಿಂದ ಮಹಾಲಕ್ಷ್ಮಿ ಸುತ್ತಮುತ್ತ ಅವಳನ್ನು ಅಟ್ಟಿಸಿಕೊಂಡು ಹೋಗುವಂತೆ ಮಾಡಿದ್ದಳು. ರಾಜೇಶ್ ಖನ್ನಾನ ಖ್ಯಾತಿಯ ದಿನಗಳಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಳು ದೇವಿ. ಅವರಿಬ್ಬರ ನಡುವೆ ವಿಚಿತ್ರ ಪ್ರೀತಿ-ದ್ವೇಷದ ಸಂಬಂಧವಿತ್ತು. ರಾಜೇಶ್ ಖನ್ನಾ ಯಶಸ್ಸಿಗೇ ತಾನೇ ಕಾರಣಳೆಂದು ಅವಳು ದೃಢವಾಗಿ ನಂಬಿದ್ದಳು. ಅವಳ ಖ್ಯಾತಿಗೆ ತಾನೇ ಕಾರಣನೆಂದು ಆತ ಹೇಳಿಕೊಳ್ಳುತ್ತಿದ್ದ. ಬದುಕಿನುದ್ದಕ್ಕೂ ಗಾಢ ಸ್ನೇಹದಿಂದಿದ್ದ ರಾಜ್‌ಕಪೂರ್ ಆಚರಿಸುತ್ತಿದ್ದ “ವಿಶೇಷ ಹೋಲಿ”ಗೆ ದೇವಿ ಯಾವಾಗಲೂ ಆಹ್ವಾನಿತಳಾಗಿರುತ್ತಿದ್ದಳು. ಅವಳ ಲೇಖನಿಗೆ ಹೆದರಿ, ಲೊಕೇಶನ್ ಷೂಟಿಂಗ್ ಸಮಯದಲ್ಲಿ ಅವಳು ಅಲ್ಲಿ ಇರಬಾರದೆಂದು ಕರಾರು ಮಾಡಿಕೊಳ್ಳುತ್ತಿದ್ದ ತಾರೆಯರೂ ಇದ್ದರು.
ಯಾವ ಬೆದರಿಕೆಗೆ ಬಗ್ಗದೆ, ಹೊಗಳಿಕೆಗೆ ಹಿಗ್ಗದೆ, ತಾನು ಕಂಡದ್ದನ್ನು, ಕೇಳಿದ್ದನ್ನು, ತನಗೆ ಅನ್ನಿಸಿದ್ದನ್ನು ಧೈರ್ಯವಾಗಿ ಬರೆಯುತ್ತಿದ್ದಳು ದೇವಿ. “ಗಾಸಿಪ್ ರಾಣಿ”ಯಾಗಿ ಮೆರೆಯುತ್ತಿದ್ದ ಅವಳ ಬದುಕು ಪಾರ್ಟಿಗಳಿಂದ, ಪ್ರೀಮಿಯರ್ ಷೋಗಳಿಂದ, ತಾರಾಸಮರಗಳಿಂದ, ಉಡುಗೊರೆಗಳಿಂದ, ಅವಳ ಚೆಲುವಿಗೆ ಮರುಳಾದ ಹೀರೋಗಳಿಂದ, ಅವಳ ಮೆಚ್ಚಿನ ಕೆಂಪು ಗುಲಾಬಿ ಗೊಂಚಲುಗಳನ್ನು ಹಿಡಿದು ಕಾದಿರುತ್ತಿದ್ದ ಫ್ಯಾನ್‌ಗಳಿಂದ ತುಂಬಿಹೋಗಿತ್ತು. ಯಾವಾಗಲೂ ಬಿಳಿ ಸೀರೆಯುಟ್ಟು, ಬೆರಳುಗಳ ತುಂಬಾ ವಜ್ರದುಂಗುರ ತೊಟ್ಟು, ಉತ್ಕೃಷ್ಟ ಪರ್ಫ್ಯೂಮ್‌ಗಳ ಕಂಪು ಬೀರುತ್ತಾ ತೇಲಿ ಬರುತ್ತಿದ್ದ ದೇವಯಾನಿ ತಾರೆಯರಷ್ಟೇ ಖ್ಯಾತಳಾಗಿದ್ದಳು. ಮೀನಾಕುಮಾರಿ, ಮಧುಬಾಲಾ, ನರ್ಗಿಸ್ ಮುಂತಾದವರೂ ಬಿಳಿ ಉಡುಪು ತೊಡುವ ಅನುಕರಣೆ ಮಾಡುವ ಸ್ಫೂರ್ತಿ ಹುಟ್ಟಿಸಿದ್ದಳು.
ಆದರೆ ಅವಳ ವೈಯಕ್ತಿಕ ಬದುಕು ತುಂಬಾ ದುರಂತಮಯವಾಗಿತ್ತು. ಚಿಕ್ಕಂದಿನಲ್ಲಿ ತಂದೆ, ತಾಯಿ ನಂತರ ಒಡಹುಟ್ಟಿದವರು ಒಬ್ಬೊಬ್ಬರಾಗಿ ಅಕಾಲ ಮರಣಕ್ಕೆ ತುತ್ತಾಗಿದ್ದರು. ನ್ಯಾಷನಲ್ ಸ್ಫೋರ್ಟ್ಸ್ ಕ್ಲಬ್ ಆಫ್ ಇಂಡಿಯಾದಲ್ಲಿ ರೂಮು ತೆಗೆದುಕೊಂಡು, ಹೆಚ್ಚಾಗಿ ಅಲ್ಲೇ ಇರುತ್ತಿದ್ದ ಅವಳು ಟ್ಯಾಕ್ಸಿಗಳಲ್ಲೇ ತಿರುಗಾಡುತ್ತಿದ್ದಳು. ಮನೆ, ಮದುವೆ, ಮಕ್ಕಳೆಂಬ ಯಾವುದೇ ಸ್ಥಿರತೆಯಿಂದ ದೂರವಾಗಿ ತನಗೆ ಸರಿ ಎನಿಸಿದಂತೆ ಬದುಕಿದಳು.
೧೯೮೫ರಲ್ಲಿ ಒಂದು ದಿನ ಎಂದಿನಂತೆ “ಸ್ಟಾರ್ ಅಂಡ್ ಸ್ಟೈಲ್” ಆಫೀಸಿಗೆ ಬಂದಾಗ ಇದ್ದಕ್ಕಿದ್ದಂತೆ ಕೈಕಾಲು ಸ್ವಾಧೀನ ತಪ್ಪಿ ಕುಸಿದಳು. ಮತ್ತೆ ಎದ್ದು ಏಡಾಡಲಿಲ್ಲ. ಅವಳು ಹಾಸಿಗೆ ಹಿಡಿದ ಮೇಲೂ ಅವಳ ಬರವಣಿಗೆ ನಿಲ್ಲಲಿಲ್ಲ. ಅವಳ ಜೀವನೋತ್ಸಾಹ ಕುಗ್ಗಲಿಲ್ಲ. ಆಸ್ಪತ್ರೆಯಲ್ಲಿ ಮೊದಲ ದಿನವೇ ಪೇಪರೆತ್ತಿಕೊಂಡು “ಓ, ಐ ಹ್ಯಾವ್ ಮೇಡ ದಿ ಹೆಡ್‌ಲೈನ್ಸ್!” ಎಂದು ಉದ್ಗರಿಸಿದ್ದಳು. “ದೇವಿ, ಕ್ಯಾನ್ ಯೂ ಟಾಕ್?” ಎಂದು ಆತಂಕದಿಂದ ಕೇಳಿದ ಡಾಕ್ಟರ್‌ಗೆ “ನಾನಾ ಸ್ಟಾಪ್” ಎಂದು ಹೇಳಿ ಅಚ್ಚರಿಗೊಳಿಸಿದ್ದಳು. ತನ್ನ ಸಮೃದ್ಧ ಅನುಭವಗಳನ್ನು ನೋವಿನ ನೆನಪುಗಳನ್ನು, ಹಾಸಿಗೆಯಿಂದಲೇ ಕಂಡ ಘಟನೆಗಳನ್ನು ಹೇಳಿ ಬರೆಯಿಸುತ್ತಿದ್ದಳು.
ಮೊದಲು ದೇವಿಯ ಅನಾರೋಗ್ಯದ ಬಗ್ಗೆ ಕೇಳಿದಾಗ ನೂರಾರು ಸ್ನೇಹಿತರು ಕಿಕ್ಕಿರಿಯುತ್ತಿದ್ದರು ಹೂಗಳೊಡನೆ. ಅವಳ ಪ್ರೀತಿಯ ತಿಂಡಿಗಳೊಡನೆ, ಔಷಧಿಗಳೊಡನೆ, ಹಣಸಹಾಯದೊಡನೆ. ದಿನ ಕಳೆದಂತೆ ರಾಜ್‌ಕಪೂರ್, ದಿಲೀಪ್‌ಕುಮಾರ್, ರಾಜೇಶ್‌ಖನ್ನಾ ಯುಗ ಕಳೆದು ಅಮೀರ್‌ಖಾನ್ ಯುಗ ಬಂದಿತ್ತು. ಅವಳನ್ನು ನೋಡಲು ಬರುವವರ, ಫೋನ್ ಮಾಡುವವರ ಸಂಖ್ಯೆ ಕಡಿಮೆಯಾಗಿತ್ತು. ಕೊನೆಯ ದಿನಗಳಲ್ಲಿ ಅವಳೊಂದಿಗೆ ಇದ್ದವಳು-ಅವಳನ್ನು ಹಗಲು-ರಾತ್ರಿ ನೋಡಿಕೊಳ್ಳುತ್ತಿದ್ದ ನರ್ಸ್ ಮಾತ್ರ.
ಜುಲೈ ೧೩ರ ಸಂಜೆ ೫.೪೫ಕ್ಕೆ ತನ್ನ ೫೩ನೇ ವಯಸ್ಸಿನಲ್ಲಿ ಅವಳು ಹಠಾತ್ತನೆ ಕೊನೆಯುಸಿರೆಳೆದಾಗ, ಅವಳ ಸಾವಿನ ವಿಷಯ ಯಾರಿಗೆ ತಿಳಿಸುವುದೆಂದೂ ಅರಿಯದಾಯಿತು. ದೇವಿಯ ಕೊನೆಯಾತ್ರೆ ಸಮಯದಲ್ಲಿ ಅವಳ ಒಡನಿದ್ದವರು ೫-೬ ಜನ ಮಾತ್ರ. ಅವಳ ಒಬ್ಬ ಅಕ್ಕನನ್ನು ಬಿಟ್ಟರೆ-ಚಿತ್ರರಂಗದಿಂದ ಕೃಷ್ಣಾಕಪೂರ್ ಮತ್ತು ಅನುಪಮ್ ಖೇರ್.
ದೇವಿ ಪ್ರಾರಂಭಿಸಿದ ಶೈಲಿ ಶೋಭಾ ಡೇ ಇಂದ ಹಿಡಿದು ಅನೇಕರು ಅನುಕರಿಸಿ, ಈಗ ಅದು ಪ್ರತಿ ಫಿಲ್ಮ್ ಪತ್ರಿಕೆಯಲ್ಲೂ ಕಂಡುಬರುತ್ತಿದೆ. ಅವಳು ಉಪಯೋಗಿಸಿದ ಹಿಂದಿ-ಮಿಶ್ರಿತ, ಮುಂಬೈ ಸಾಮಾನ್ಯ ಜನ ಮಾತಾಡುವ ಇಂಗ್ಲಿಷ್ ಭಾಷೆ ಈಗ ಎಲ್ಲೆಲ್ಲೂ ಜನಪ್ರಿಯವಾಗಿದೆ.
ಆದರೆ, ಝಗಝಗಿಸುವ ಬಣ್ಣಬಣ್ಣದ ಬೆಳಕಿನಲ್ಲಿ ಮಿನುಗಿ ಮಾಯವಾಗುವ ಫ್ಲ್ಯಾಶ್ ಬಲ್ಬ್‌ಗಳ ನಡುವೆ ಬದುಕಿದ ಈ ತಾರೆಯ ಕೊನೇ ಗಳಿಗೆಯ ಒಂಟಿತನ ಆ ಮಳೆಗಾಲದ ಸಂಜೆಗೆ ಮಾತ್ರ ಗೊತ್ತು.

Saturday, August 2, 2014

ಆರುಣಾ ಎಂಬ ಹುಡುಗಿ - ಅತ್ಯಾಚಾರಕ್ಕೆ ಸಿಕ್ಕ ಯುವ ಬದುಕೊಂದರ ನಾಶ


ಆರುಣಾ ಎಂಬ ಹುಡುಗಿ -ಅತ್ಯಾಚಾರಕ್ಕೆ ಸಿಕ್ಕ ಯುವ ಬದುಕೊಂದರ
ನಾಶಇಂದು ಬೆಂಗಳೂರಿನಲ್ಲಿ ಎಲ್ಲೆಲ್ಲೂ ಬೃಹತ್ ಸಭೆಗಳು.
ಬೆಂಗಳೂರಿನ ಶಾಲೆಯೊಂದರಲ್ಲಿ  ಬಾಲಕಿಯೊಬ್ಬಳ ಮೇಲೆ ನಡೆದ
ಅತ್ಯಾಚಾರ ಖಂಡಿಸಿ ಪ್ರತಿಭಟನೆ.  ಇತ್ತೀಚೆಗೆ ಹೆಚ್ಚುತ್ತಿರುವ ಇಂತಹ
ಪ್ರಕರಣಗಳ ಬಗ್ಗೆ  ಜನರ ಆಕ್ರೋಶ ಈಗ ಮುಗಿಲು ಮುಟ್ಟಿದೆ.

ಈ ಸಂದರ್ಭದಲ್ಲಿ ಎಷ್ಟೋ ವರ್ಷಗಳ ಹಿಂದೆ ಮುಂಬೈ ಆಸ್ಪತ್ರೆಯೊಂ
ದರಲ್ಲಿ ನರ್ಸ್ ಒಬ್ಬಳ ಮೇಲೆ ನಡೆದ ಅತ್ಯಾಚಾರ, ಆ ಒಂ಼ದು ಕ್ರೂರ ಕ್ಷ್ಶಣ
ಹೊಸಕಿ ಹಾಕಿದ ಒಂದು ಸುಂದರ ಬದುಕಿನ ಬಗ್ಗೆ ನೆನಪಾಗಿ ಸಂಕಟ
ವಾಗುತ್ತದೆ.


೨೫ ವರ್ಷದ ಅರುಣಾ ಶಾನ್‌ಭಾಗ್ ಆಕರ್ಷಕ ತರುಣಿ. ಮುಂಬೈನ ಕೆ.ಇ.ಎಂ. ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಈ ಮೆಲುಮಾತಿನ ಹುಡುಗಿ ತುಂಬಾ ಚುರುಕು. ಕೆಲಸದಲ್ಲಿ ತುಂಬಾ ಆಸ್ಥೆ ವಹಿಸುತ್ತಿದ್ದ ಇವಳು ಡಾಕ್ಟರ್, ಮೇಟ್ರನ್‌ಗಳಿಂದ ಹಿಡಿದು ರೋಗಿಗಳವರೆಗೂ ಎಲ್ಲರ ಅಚ್ಚುಮೆಚ್ಚು. ಯಾವಾಗಲೂ ನಗುನಗುತ್ತಾ ಚಟುವಟಿಕೆಯಿಂದ ಓಡಾಡಿಕೊಂಡಿರುತ್ತಿದ್ದ ಈ ಹುಡುಗಿಯನ್ನು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಡಾಕ್ಟರ್ ಒಬ್ಬ ಪ್ರೀತಿಸುತ್ತಿದ್ದ. ಅವರಿಬ್ಬರೂ ಮದುವೆಯಾಗಲು ಯೋಚಿಸುತ್ತಿದ್ದರು.

ಆದರೆ ೧೯೭೩ರ ನವೆಂಬರ್ ೨೭ರಂದು ಅವಳ ಬದುಕು ವಿಕೃತ ತಿರುವು ತೆಗೆದುಕೊಂಡಿತು. ರಾತ್ರಿ ಡ್ಯೂಟಿ ಮುಗಿಸಿ, ಯೂನಿಫಾರ್ಮ್ ಬದಲಿಸಲು ಬೇಸ್‌ಮೆಂಟ್‌ಗೆ ಅವಳು ನಡೆದಾಗ ಅವಳ ಹಿಂದೆಯೇ ಅದೇ ಆಸ್ಪತ್ರೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದವನೊಬ್ಬ ಅವಳನ್ನು ಹಿಂಬಾಲಿಸಿದ್ದ. ಬೇಸ್‌ಮೆಂಟ್‌ನಲ್ಲಿದ್ದ ಖಾಲಿರೂಮಿಗೆ ಅವಳನ್ನೆಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ಮಾರನೆಯ ದಿನ ಬೆಳಿಗ್ಗೆ, ಅಲ್ಲಿಗೆ ಬಂದ ಕ್ಲೀನರ್ ಅರುಣಾ ಜ್ಞಾನತಪ್ಪಿ ಬಿದ್ದಿರುವುದನ್ನು ನೋಡಿದ. ಅವಳ ಕತ್ತಿನ ಸುತ್ತ ಸರಪಳಿಯೊಂದು ಮಿಗಿಯಲ್ಪಟ್ಟಿತ್ತು. ಬಹುಶಃ, ಅವಳು ಕೂಗಲು ಪ್ರಯತ್ನಿಸಿದಾಗ ಸುಮ್ಮನಾಗಿಸಲು ಅವನು ಹಾಗೆ ಮಾಡಿರಬೇಕು. ತಕ್ಷಣ ಅವಳಿಗೆ ಬೇಕಾದ ಉಪಚಾರವನ್ನೆಲ್ಲಾ ಮಾಡಲಾಯಿತು. ಆದರೆ, ಮತ್ತೆ ಅವಳು ಮಾತಾಡಲಿಲ್ಲ.
ಈ ಅತ್ಯಾಚಾರವೆಸಗಿದವನು ಸಿಕ್ಕಿಬಿದ್ದ. ಅವನಿಗೆ ೭ ವರ್ಷ ಜೈಲಾಯಿತೆಂದು. ಹೊರಗೆ ಬಂದ ಮೇಲೆ ಅವನು ತೀರಿಕೊಂಡನೆಂದೂ ಕೆಲವರು ಹೇಳುತ್ತಾರೆ. ೨೦ ವರ್ಷ ಜೈಲಾಯಿತೆಂದೂ ಕೆಲವರು ಹೇಳುತ್ತಾರೆ. ಯಾರಿಗೂ ಸರಿಯಾಗಿ ಗೊತ್ತಿಲ್ಲ.
ಅಂದು ವಾರ್ಡ್ ಸೇರಿದ ಅರುಣಾಗೆ ದೊಡ್ಡ ದೊಡ್ಡ ಸ್ಟೆಷಲಿಸ್ಟ್‌ಗಳಿಂದ ಎಲ್ಲಾ ತಪಾಸುಗಳಾಯಿತು. ಟ್ರೀಟ್‌ಮೆಂಟ್ ಆಯಿತು. ಆದರೆ, ಅವಳು ಬಿದ್ದ ದಿನ ಹೇಗಿದ್ದಳೋ ಹಾಗೇ ಇದ್ದಾಳೆ. ಯಾರಾದರೂ ಗಂಡಸರ ಧ್ವನಿ ಕೇಳಿದರೆ, ಮಂಚ ಸರಿಸಿದರೆ ಕಿರುಚಿಕೊಳ್ಳುತ್ತಾಳೆ. ಆಗಾಗ, ಜೋರಾಗಿ ಕೈಕಾಲು ಆಡಿಸುತ್ತಾಳೆ. ೨೨ ವರ್ಷಗಳಿಂದ ಆಸ್ಪತ್ರೆಯ ನರ್ಸುಗಳು, ವಾರ್ಡ್‌ಬಾಯ್‌ಗಳು, ಆಯಾಗಳು ಪ್ರೀತಿಯಿಂದ ಅವಳನ್ನು ನೋಡಿಕೊಳ್ಳುತ್ತಿದ್ದಾರೆ. ಚಾಚೂತಪ್ಪದೆ ಅವಳನ್ನು ಆರಾಮವಾಗಿರಲು ಏನು ಬೇಕೋ ಎಲ್ಲಾ ಮಾಡುತ್ತಿದ್ದಾರೆ. ಅವಳನ್ನು ಪ್ರೀತಿಸುತ್ತಿದ್ದ ಡಾಕ್ಟರ್ ಐದು ವರ್ಷ ದಿನಾ ಅವಳನ್ನು ಬಂದು ನೋಡಿಕೊಂಡು ಹೋಗುತ್ತಿದ್ದ. ಆಸೆ ಇಟ್ಟುಕೊಂಡಿದ್ದ. ಆದರೆ, ಯಾವುದೋ ಒಂದು ಗಳಿಗೆಯಲ್ಲಿ ಅವನೂ ಅವಳನ್ನು ನೋಡಲು ಬರುವುದನ್ನು ನಿಲ್ಲಿಸಿಬಿಟ್ಟ. ಈ ಅತ್ಯಾಚಾರದ ಸುದ್ದಿ ಕೇಳಿದ ತಕ್ಷಣ ಅವಳ ಕುಟುಂಬದವರೆಲ್ಲಾ, ಅವಳ ಸಂಬಂಧ ಕಳಚಿಕೊಂಡರು. ಅವಳನ್ನು ದಿನಾ ನೋಡಿಕೊಳ್ಳಲು ಆಸ್ಪತ್ರೆಯ ಸ್ಟಾಫ್‌ಗೆ ಸ್ವಲ್ಪವೂ ಬೇಸರವಿಲ್ಲ. ೨ ವರ್ಷದ ಹಿಂದೆ, ಆಸ್ಪತ್ರೆಯ ಮ್ಯಾನೇಜ್‌ಮೆಂಟ್‌ನವರು, ವಾರ್ಡ್ ಖಾಲಿ ಮಾಡಲು, ಅವಳನ್ನು “ಕನ್‌ವಾಲೆಸೆಂಟ್ ಹೋಂ” ಒಂದಕ್ಕೆ ವರ್ಗಾಯಿಸಲು ನಿರ್ಧಾರ ಮಾಡಿದ್ದರು. ಆದರೆ, ಆಸ್ಪತ್ರೆಯವರೆಲ್ಲಾ ಸೇರಿ ಅದಕ್ಕೆ ಪ್ರತಿಭಟಿಸಿದರು. “ಎಲ್ಲಾ ರೋಗಿಗಳಂತೆ ಅವಳೂ ಒಬ್ಬಳು. ಅವಳನ್ನು ಎಲ್ಲೂ ಕಳಿಸಲು ಸಾಧ್ಯವಿಲ್ಲ” ಎಂದು ಮ್ಯಾನೇಜ್‌ಮೆಂಟಿನವರನ್ನು ಒಪ್ಪಿಸಿದರು. ಅವಳು ಇಂದೂ ಅವರೆಲ್ಲರಲ್ಲಿ ಒಬ್ಬಳು. ಅವಳಿಗಾಗಿ ಅವಳ ಪ್ರೀತಿಯ ತಿಂಡಿಗಳನ್ನು ಮಾಡಿ ತರುವರು ಹಲವರು. ಅವಳ ಹುಟ್ಟುಹಬ್ಬವಾದ ಜೂನ್ ೧ರಂದು ಅವಳ ಮೆಚ್ಚಿನ ಮಿನಿನಡಿಗೆ ತರುವರು ಕೆಲವರು. ಅರುಣಾಗೆ ಇಂದು ೪೭ ವರ್ಷ. ಕಳೆದ ೨೨ ವರ್ಷಗಳಿಂದ ಇದೇ ಹಾಸಿಗೆಯಲ್ಲಿ ಹೀಗೇ ಮಲಗಿದ್ದಾಳೆ ಅವಳು. ಇಂದು ಅವಳು ಹಿಂದಿನ ಜೀವಂತಿಕೆಯ ಒಂದು ಛಾಯೆ ಮಾತ್ರ.


-ಉಮಾ ರಾವ್   (ಲಂಕೇಶ್ ಪತ್ರಿಕೆ, ಜುಲೈ ೧೯೯೫)