ಆತ್ಮೀಯರೇ,
ಇಷ್ಟೊಂದು ವರ್ಷಗಳು ಬರೆದದ್ದನ್ನು, ಮುಂದೆ ಬರೆಯಬಹುದಾದುದನ್ನು ಹಾಗೆಯೇ ಅಂತರ್ಜಾಲದಲ್ಲಿ ತೇಲಿ ಬಿಟ್ಟು ಅದು ಎಲ್ಲೆಲ್ಲೋ ತಲುಪಿ ಅಲ್ಲಿ ಹುಟ್ಟಬಹುದಾದ ಪ್ರತಿಕ್ರಿಯೆಗಳಬಗ್ಗೆ ಕುತೂಹಲ ಹೆಚ್ಚಾಗಿ ಕೊನೆಗೆ ಈ ಬ್ಲಾಗ್ ಪ್ರಾರಂಭಿಸುತ್ತಿದ್ದೇನೆ. ಮೊದಲ ಪೋಸ್ಟ್ ಯಾವುದಾಗ ಬೇಕು ಎಂದು ನನ್ನ ಇಡೀ ಬದುಕಿನ ಬಗ್ಗೆ ಹಾಗೇ ಯೋಚಿಸಿದಾಗ ಮುಂಬೈನ ಬೆಚ್ಚಗಿನ ನೆನಪುಗಳು, ಮುಂಬೈಯ್ಯಿಂದ ನಾನು ಪಡೆದ ಜೀವನೋತ್ಸಾಹ, ಹುರುಪು, ಚೈತನ್ಯ, ಕಲಿತ ಪಾಠಗಳು, ಕಂಡ ಬದುಕಿನ ಬೇರೆಬೇರೆ ಮಗ್ಗಲುಗಳ ನೋವು ನಲಿವಿನ ಝಲಕು ಗಳು ಹರಿದು ಬರುತ್ತವೆ. ಹಾಗಾಗಿ ಮೊದಲು ಮುಂಬೈ ಬಗ್ಗೆಯ ಒಂದು ಬರಹವನ್ನೇ ಹಾಕೋಣವೆಂದಿದ್ದೇನೆ. ಯಾವಾಗಲೂ ನನ್ನ ಬರವಣಿಗೆ ಇರುವಂತೆ ನನ್ನ ಬ್ಲಾಗ್ ನಲ್ಲೂ ಯಾವರೀತಿಯ ಕ್ರಮ, ಕಟ್ಟುಪಾಡುಗಳು ಇರುವುದಿಲ್ಲ. ನನ್ನ ಲಹರಿಗೆ ತಕ್ಕಂತೆ ಬಂದದ್ದನ್ನು ನಿಮೊಲ್ಲ ರೊಡನೆ ಹಂಚಿ ಕೊಳ್ಳುತ್ತೇನೆ. ಜೊತೆಗೆ ನನ್ನ ಹುಚ್ಚಿನಲ್ಲೊಂದಾದ ತಿರುಗಾಟದ ದೃಶ್ಯಗಳನ್ನೂ ನಿಮ್ಮೆದುರು ಇಡುತ್ತೇನೆ. ದಯವಿಟ್ಟು ನಿಮಗೇನನ್ನಿಸಿತು ತಿಳಿಸಿ. ಪ್ರತಿಕ್ರಿಯೆ ಹೇಗೇ ಇರಲಿ, ಬರಲಿ. ಬರವಣಿಗೆಗೆ ಅದಕ್ಕಿಂತ ಉತ್ಸಾಹ ತುಂಬುವುದು ಯಾವುದೂ ಇಲ್ಲ.
ಪ್ರೀತಿಯಿಂದ
ಉಮಾ ರಾವ್
ತುಂಬ ಖುಷಿಯಾಯಿತು. ನಿಮ್ಮ ಬರಹಗಳನ್ನು ಹೀಗೆ ಓದುವುದು ನನಗೆ ಸುಲಭ. ಪುಸ್ತಕ ಮರೆತರೂ ಐಪ್ಯಾಡ್ ಮರೆಯದ ನಾನು, ಬಿಡುವಲ್ಲಿ ನಿಮ್ಮ ಬರಹಗಳನ್ನು ಓದಬಹುದು ಎಂಬ ಸಂತೋಷ.
ReplyDeleteನಾನಿಲ್ಲಿಗೆ ಬರುವೆ ದಿನಾದಿನ.
ಜೋಗಿ
What a pleasant surprise! ಖುಷಿಯಿಂದ ಓದುವೆ.....
ReplyDeleteಅಹಲ್ಯಾ ಬಲ್ಲಾಳ್
Welcome Ma'am!
ReplyDeleteGlad to have u hr.
E- gen ಕೂಡ ಇನ್ನು ನಿಮ್ಮನ್ನು ಓದಲಿದೆ. ನಿಮ್ಮ ಈ ಹೆಜ್ಜೆ ಮತ್ತಷ್ಟು ಜನರನ್ನು ಹುರಿದುಂಬಿಸಲೆಂದು ಆಶಿಸ್ತೀನಿ.
ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ
ಮುಂಬೈಯಲ್ಲಿ ಉಮಾಗಿರಿಯ ದಿನಗಳು
ReplyDeleteಬರೆಯಿರಿ.ಕಾಯುತ್ತೇವೆ
ಉಮಾ ರಾವ್ ರವರೆ,
ReplyDeleteನಮಸ್ಕಾರ. ಮೊದಲನೆಯದಾಗಿ ನಾನೊಬ್ಬ ನಿಮ್ಮ ಪರಮ ಪ್ರಿಯಾ ಓದುಗರಲ್ಲೊಬ್ಬ. ನನಗೆ ನಿಮ್ಮ ಎಲ್ಲಾ ಕವನ, ಕವಿತೆ, ವಕ್ತಿ ಚರಿತ್ರೆ, ಇತ್ಯಾದಿಗಳು ಬಹಳ ಇಷ್ಟ. ಶ್ರೀ. ವಿ. ಕೆ. ಮೂರ್ತಿಯವಾರ ಬಗ್ಗೆ ಬರೆದ ಬಿಸುಲು ಕೋಲು, ನನಗೆ ಪ್ರಿಯವಾಗಲು ಕಾರಣ ನಾನು ಮೂರ್ತಿಯವರ ಸುಮಾಅರು ನಾಟಕಗಳನ್ನು ಮೈಸೂರು ಅಸೋಸಿಯೇಷನ್ ನಲ್ಲಿ ನೋಡಿ ಆನಂದಿಸಿದ್ದೀನೆ. ಕನ್ನಡದ ಮೊಟ್ಟಮೊದಲ 70 ಎಂ. ಎಂ. ಚಿತ್ರವನ್ನು ತೆಗೆದ ಛಾಯಾಗ್ರಾಹಕ ನಮ್ಮವರು ಕನ್ನಡದವರು ಎನ್ನುವುದು ಹೆಮ್ಮೆಯ ಸಂಗತಿ. ಅವರ ಜೀವನ ಚಾರಿತ್ರೆಯನ್ನು ಸುಂದರವಾಗಿ, ಅವರ ಭಾಷೆಯಲ್ಲೇ ಬರೆದು ನಮಗೆ ಮುದಕೊಡಿಸಿದ ತಮಗೆ ಮತ್ತೊಮ್ಮೆ ಧನ್ಯವಾದಗಳು ! ನಿಮಗೆ ಮತ್ತು ನಿಮ್ಮ ಪರಿವಾರದವರಿಗೆ ಶುಭಕೋರಿ ವಿರಮಿಸುವೆ !
ತಮ್ಮ ಪ್ರಿಯಾ ಓದುಗ,
-ರಾಧಾತನಯ, ಹೊರಾಂ ಲವೆಂ
ಕನ್ನಡ ಟೈಪಿಂಗ್ ನಲ್ಲಿ ಕೆಲವು ತಪ್ಪುಗಳಿವೆ. ಅವನ್ನೆಲ್ಲಾ ಮನ್ನಿಸಿ ತಮ್ಮ ಹೊಟ್ಟೆಯಲ್ಲಿ ಹಾಕಿಕೊಳ್ಳಿ !!!!(ಕ್ಷಮೆಯಿರಲಿ)
Deleteಎಚ್. ಆರ್. ಎಲ್. ವಿ. ಮುಂಬೈ, ಘಾಟ್ಕೋಪರ್.
ಚಿಕ್ಕ ಪ್ರಾಯದ ಜಯಂತ್, ರವರ ಜೊತೆಗಿನ ಸಂವಾದ ಚೆನ್ನಾಗಿದೆ.
ReplyDeleteDear Madam,
ReplyDeleteThis is really good. Your writings enrich our mind-space. (bhaava-kosha)
Thanks so much.
Thanks! :) will be waiting ur updates! :)
ReplyDeleteI got you at last. Thanks for good reading. Will this be on daily basis? Looking forward to reading your 'short' stories. Suri
ReplyDelete